ಸ್ಪಾಟ್‌ಲೈಟ್‌ 101
ಸ್ಫೂರ್ತಿ ಪಡೆಯಿರಿ ಮತ್ತು ನಿಮ್ಮ ಸೃಜನಶೀಲತೆಯನ್ನು ಹಂಚಿಕೊಳ್ಳಿ.
ಸ್ಪಾಟ್‌ಲೈಟ್‌ ಎಂದರೇನು?
ಸ್ಪಾಟ್‌ಲೈಟ್‌ ಅನ್ನುವುದು ಬಳಕೆದಾರರು ಸೃಷ್ಟಿಸಿದ ಕಂಟೆಂಟ್‌ಗಾಗಿ ನಮ್ಮ ಮನರಂಜನೆಯ ವೇದಿಕೆಯಾಗಿದೆ. ವಿಶಾಲ Snapchat ಸಮುದಾಯಕ್ಕೆ ತೆರೆದುಕೊಳ್ಳುವುದಕ್ಕೆ ಕ್ರಿಯೇಟರ್‌ಗಳಿಗೆ ಇದು ಅದ್ಭುತ ವಿಧಾನವಾಗಿದೆ. ನಿಮಗೆ ಎಷ್ಟು ಮಂದಿ ಫಾಲೋವರ್‌ಗಳು ಇದ್ದಾರೆ ಎನ್ನುವುದನ್ನು ಪರಿಗಣಿಸದೆ, ನಿಮ್ಮಂಥ ಕ್ರಿಯೇಟಿವ್ ಜನರಿಂದ ಗುಣಮಟ್ಟದ ಕಂಟೆಂಟ್ ಅನ್ನು ಸ್ಪಾಟ್‌ಲೈಟ್‌ ಹೈಲೈಟ್ ಮಾಡುತ್ತದೆ.
ನಿಮ್ಮ ಕ್ಯಾಮೆರಾ ರೋಲ್‌ನಿಂದ ವೀಡಿಯೊಗಳನ್ನು ಸ್ಪಾಟ್‌ಲೈಟ್‌ ಬೆಂಬಲಿಸುತ್ತದೆ, ಆದರೆ Snapchat ಕ್ಯಾಮೆರಾ ಬಳಸಿಕೊಂಡು ಸೃಷ್ಟಿಸಿದ Snap ಗಳನ್ನು ಹೈಲೈಟ್ ಮಾಡುತ್ತದೆ.
ವೀಡಿಯೊಗಳನ್ನು ಸೃಷ್ಟಿಸಿ, ನಂತರ ಈ ಕೆಳಗಿನವುಗಳಂಥ ಟೂಲ್‌ಗಳಿಂದ ಅವುಗಳನ್ನು ಎಡಿಟ್ ಮಾಡಿ:
  • ಶೀರ್ಷಿಕೆಗಳು
  • ಪರವಾನಗಿಯಿರುವ ಸಂಗೀತ
  • ಅಸಲಿ ಧ್ವನಿ ರೆಕಾರ್ಡಿಂಗ್‌ಗಳು
  • ಲೆನ್ಸ್‌ಗಳು
  • GIFs
ಅತ್ಯುತ್ತಮ ಸ್ಪಾಟ್‌ಲೈಟ್ Snap ಗಳನ್ನು ಸೃಷ್ಟಿಸುವ ಕ್ರಿಯೇಟರ್‌ಗಳಿಗಾಗಿ Snap ತಿಂಗಳಿಗೆ ಲಕ್ಷಾಂತರ ಗಳಿಸುವ ಅವಕಾಶವನ್ನು ಲಭ್ಯವಾಗಿಸುತ್ತದೆ, ಆದ್ದರಿಂದ ಕ್ರಿಯೇಟಿವ್ ಆಗಿ ಮತ್ತು ರಿವಾರ್ಡ್ ಪಡೆಯಿರಿ!
ಸಲ್ಲಿಕೆಯ ಅತ್ಯುತ್ತಮ ಅಭ್ಯಾಸಗಳು
  • Snap ಗಳು ಧ್ವನಿಯೊಂದಿಗೆ ಲಂಬ ವೀಡಿಯೊಗಳಾಗಿರಬೇಕು, 60 ಸೆಕೆಂಡ್‌ಗಳಷ್ಟು ದೀರ್ಘವಾಗಿರಬೇಕು
  • ವೀಡಿಯೊ ಪೂರ್ಣ ಫ್ರೇಮ್ ಅನ್ನು ತುಂಬಿಸಬೇಕು (ಲೆಟರ್‌ಬಾಕ್ಸಿಂಗ್ ಮಾಡಬಾರದು)
  • ಸ್ಥಿರ-ಚಿತ್ರ ಫೋಟೋಗಳು ಮತ್ತು ಸಮತಲ, ಅಸ್ಪಷ್ಟ ಅಥವಾ ಪಠ್ಯ-ಮಾತ್ರ ಇರುವ Snap ಗಳು ಸ್ಪಾಟ್‌ಲೈಟ್‌ನಲ್ಲಿ ಪ್ರದರ್ಶಿತವಾಗುವುದಿಲ್ಲ
  • ಮೂಲ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಿ—ಇತರ ಆ್ಯಪ್‌ಗಳಿಂದ ವಾಟರ್‌ಮಾರ್ಕ್ ಹೊಂದಿರುವ ವೀಡಿಯೊಗಳನ್ನು ಸ್ಪಾಟ್‌ಲೈಟ್‌ನಿಂದ ಫಿಲ್ಟರ್ ಮಾಡಲಾಗುತ್ತದೆ
ನಿಮ್ಮ Snap ಗಳಿಗೆ #Topics ಸೇರಿಸಿ
ನಿಮ್ಮ ಕಂಟೆಂಟ್ ಅನ್ನು ಕಂಡುಹಿಡಿಯಲು ಮತ್ತು ಹಂಚಿಕೊಳ್ಳಲು ಮತ್ತು ನಿಮ್ಮದರಂತೆ ಇರುವ ಇನ್ನಷ್ಟು Snap ಗಳನ್ನು ಹುಡುಕಲು #Topics ಇತರ Snapchatter ಗಳಿಗೆ ಸಹಾಯ ಮಾಡುತ್ತವೆ. ನೀವು ಸ್ಪಾಟ್‌ಲೈಟ್‌ ವೀಡಿಯೊದ ಕೆಳಭಾಗದ ಎಡ ಮೂಲೆಯಲ್ಲಿ #Topic ಟ್ಯಾಪ್ ಮಾಡಿದಾಗ, ಅದನ್ನು ಬಳಸುವ ಎಲ್ಲ ವೀಡಿಯೊಗಳನ್ನು ನೋಡಲು ನಿಮಗೆ ಸಾಧ್ಯವಾಗುತ್ತದೆ.
ನಿಮ್ಮ ವೀಡಿಯೊಗೆ #Topic ಸೇರಿಸಲು, ಮೊದಲು ನಿಮ್ಮ Snap ರೆಕಾರ್ಡ್ ಮಾಡಿ, ನಂತರ 'ಸ್ಪಾಟ್‌ಲೈಟ್‌ಗೆ ಹಂಚಿಕೊಳ್ಳಿ' ಟ್ಯಾಪ್ ಮಾಡಿ ಹಾಗೂ 'ರಿಗೆ ಕಳುಹಿಸು' ಸ್ಕ್ರೀನ್‌ನಲ್ಲಿ ಒಂದು ವಿವರಣೆ ಅಥವಾ #Topic ಸೇರಿಸಿ. ಹ್ಯಾಶ್‌ಟ್ಯಾಗ್ ಬಳಸುವುದರಿಂದ ನೀವು ಟೈಪ್ ಮಾಡುತ್ತಿರುವಂತೆ ಪ್ರಸ್ತುತ ಇರುವ #Topics ಎತ್ತಿ ತೋರಿಸುತ್ತದೆ, ಅಥವಾ ನೀವು ನಿಮ್ಮ ಸ್ವಂತದ್ದನ್ನು ಕೂಡ ರಚಿಸಬಹುದು.
 
ಏನು ಟ್ರೆಂಡ್ ಆಗುತ್ತಿದೆ ಎನ್ನುವುದನ್ನು ನೋಡಿ
ಸ್ಪಾಟ್‌ಲೈಟ್‌ನಲ್ಲಿ ಇತ್ತೀಚಿನ ಟ್ರೆಂಡ್‌ಗಳ ಕುರಿತು ಒಳನೋಟಗಳು ಪಡೆಯಿರಿ. ಟ್ರೆಂಡ್ ಆಗುತ್ತಿರುವ ಎಲ್ಲ #Topics, ಲೆನ್ಸ್‌ಗಳು ಮತ್ತು ಧ್ವನಿಗಳ ಇಣುಕು ನೋಟಕ್ಕಾಗಿ ಸ್ಪಾಟ್‌ಲೈಟ್‌ ಸ್ಕ್ರೀನ್‌ನ ಮೇಲ್ಭಾಗದ ಬಲ ಮೂಲೆಯಲ್ಲಿ ಇರುವ ಮೇಲ್ಮುಖವಾದ ಬಾಣದ ಗುರುತನ್ನು ಟ್ಯಾಪ್ ಮಾಡಿ.