ಕಂಟೆಂಟ್ ಅತ್ಯುತ್ತಮ ಅಭ್ಯಾಸಗಲು · ಕಥೆಗಳು
ನಿಮ್ಮ ಕಂಟೆಂಟ್ ಹೇಗೆ ಕಾರ್ಯಕ್ಷಮತೆ ತೋರುತ್ತದೆ ಮತ್ತು ಪ್ರತಿ ದಿನ ಅದು ಎಷ್ಟು Snapchatter ಗಳನ್ನು ತಲುಪುತ್ತದೆ ಎನ್ನುವುದಕ್ಕೆ ಹಲವಾರು ಅಂಶಗಳು ಕಾರಣವಾಗುತ್ತವೆ. ನಿಮ್ಮ ಕಥೆಯಲ್ಲಿ ನಿಮ್ಮ ತೊಡಗಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಅದು ಹೆಚ್ಚು Snapchatter ಗಳಿಗೆ ತಲುಪುವಂತೆ ಮಾಡುವುದಕ್ಕೆ ಸಹಾಯ ಮಾಡಲು, ನೀವು ಈ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.
ಪ್ರಬಲವಾಗಿ ಆರಂಭಿಸಿ
ನಿಮ್ಮ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಪ್ರಬಲ ಮತ್ತು ಸಮ್ಮೋಹಕ ಗಾಳದೊಂದಿಗೆ ಪ್ರತಿ ದಿನ ನಿಮ್ಮ ಕಥೆಯನ್ನು ತೆರೆಯಿರಿ. ನೀವು ಸಂಗೀತ ಕಚೇರಿಗೆ ಹೋಗುತ್ತಿರಬಹುದು ಅಥವಾ ಮನೆಯಲ್ಲಿ ಶಾಂತವಾಗಿ ಸಮಯ ಕಳೆಯುತ್ತಿರಬಹುದು - ನಿಮ್ಮ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು ಎನ್ನುವುದಕ್ಕೆ ವೇದಿಕೆಯನ್ನು ಸಜ್ಜಾಗಿಸಿ.
ಒಂದು ಕಥಾಹಂದರ ಸೃಷ್ಟಿಸಿ
ಕೊನೆಯ ತನಕ Snapchatter ಗಳು ಕುತೂಹಲದಿಂದ ಉಳಿಯಲು ಪ್ರೋತ್ಸಾಹಿಸುವ ಬಲವಾದ ಕಥಾಹಂದರ ಇದೆಯೇ. ಪರಿಸ್ಥಿತಿಗಳು, ಪಾತ್ರಗಳು ಮತ್ತು ಆರಂಭ, ಮಧ್ಯಂತರ ಹಾಗೂ ಅಂತ್ಯಕ್ಕೆ ಸಂಬಂಧಿಸಿದ ಸ್ಪಷ್ಟ ನಿರೂಪಣೆಯನ್ನು ಹೊಂದಿರುವ ಉದ್ದನೆಯ ಕಥೆಗಳನ್ನು ಹೇಳಿ.
ಶೀರ್ಷಿಕೆಗಳನ್ನು ಬಳಸಿ
ಪ್ರಮುಖ ಸನ್ನಿವೇಶವನ್ನು ಒದಗಿಸಲು ನಿಮ್ಮ ಕಥೆಯಾದ್ಯಂತ ಶೀರ್ಷಿಕೆಗಳನ್ನು ಬಳಸುವ ಮೂಲಕ ಧ್ವನಿ ಆಫ್ ಮಾಡಿಕೊಂಡು ವೀಕ್ಷಿಸುವವರ ಮನಮೆಚ್ಚಿಸಿ. ಇದು ಪ್ರೇಕ್ಷಕರನ್ನು ಉಳಿಸಿಕೊಳ್ಳುವುದನ್ನು ಹೆಚ್ಚಿಸಲು ಸಹ ನೆರವಾಗಬಹುದು.
ಕಥೆ ಪ್ರತ್ಯುತ್ತರಗಳನ್ನು ಏಕೀಕರಿಸಿ
ಕಥೆ ಪ್ರತ್ಯುತ್ತರಗಳನ್ನು ನಿಮ್ಮ ಕಥೆಗಳಲ್ಲಿ ಏಕೀಕರಿಸುವ ಮೂಲಕ ನಿಮ್ಮ ಪ್ರೇಕ್ಷಕರೊಂದಿಗೆ ಸಮುದಾಯ ಮತ್ತು ಚರ್ಚೆಯನ್ನು ನಿರ್ಮಿಸಿ. ನಿಮ್ಮ ಕಥೆಗಳನ್ನು ಇನ್ನಷ್ಟು ಪ್ರತಿಕ್ರಿಯಾತ್ಮಕವಾಗಿಸುವುದಕ್ಕೆ ಕ್ವೋಟ್ ಮಾಡಿದ ಕಥೆ ಪ್ರತ್ಯುತ್ತರಗಳನ್ನು ಬಳಸುವುದು ಅದ್ಭುತ ವಿಧಾನವಾಗಿದೆ. ನಿಮ್ಮ ಕಥೆಗಳಲ್ಲಿ ತಮ್ಮನ್ನು ಕಾಣುವುದಕ್ಕೆ Snapchatter ಗಳು ಕೂಡ ಇಷ್ಟಪಡುತ್ತಾರೆ!
ಮಾರ್ಗಸೂಚಿಗೆ ಅನುಸರಣೆಯಲ್ಲಿ ಉಳಿಯಿರಿ
ನಿಮ್ಮ ಕಥೆಯಲ್ಲಿ ಏನನ್ನು ನಿರೀಕ್ಷಿಸಬಹುದು ಎನ್ನುವುದರ ಸನ್ನಿವೇಶವನ್ನು ಒದಗಿಸುವ ಮಾರ್ಗಸೂಚಿಗೆ ಅನುಸರಣೆ ಹೊಂದಿರುವ ಶೀರ್ಷಿಕೆಯನ್ನು ನೀವು ಪೋಸ್ಟ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಶೀರ್ಷಿಕೆಯು ದಾರಿತಪ್ಪಿಸುವಂತಿರದೆ ಮತ್ತು ನಿಮ್ಮ ಕಥೆಯನ್ನು ಟ್ಯಾಪ್ ಮಾಡಿದಾಗ Snapchatter ಗಳು ಏನನ್ನ ನಿರೀಕ್ಷಿಸಬಹುದು ಎನ್ನುವುದನ್ನು ನಿಖರವಾಗಿ ಪ್ರತಿನಿಧಿಸುವುದು ಮುಖ್ಯವಾಗಿದೆ.