Snapchat ನಲ್ಲಿ ಹಣ ಗಳಿಸುವುದು ಹೇಗೆ ಎಂದು ತಿಳಿದುಕೊಳ್ಳಿ

Snapchat ಆದಾಯ ಹಂಚಿಕೆ ಪ್ರೊಗ್ರಾಂ
ನೀವು Snapchat ನಲ್ಲಿ ನಿರಂತರವಾಗಿ ಕಥೆಗಳನ್ನು ಹಂಚಿಕೊಳ್ಳುವ ಕ್ರಿಯೇಟರ್ ಆಗಿದ್ದೀರಾ? ಒಂದು ವೇಳೆ ಹೌದಾದರೆ, ಪ್ರಸಿದ್ಧ ಕ್ರಿಯೇಟರ್‌ಗಳು ತಮ್ಮ ಕಥೆಗೆ ಪೋಸ್ಟ್ ಮಾಡುವ ವಿಷಯಕ್ಕಾಗಿ ನಮ್ಮ ಪ್ರೊಗ್ರಾಂ ಬಹುಮಾನಗಳನ್ನು ನೀಡುತ್ತದೆ – ಇದು Snapchat ಸಮುದಾಯದಲ್ಲಿ ಹೂಡಿಕೆ ಮಾಡಿದ್ದಕ್ಕಾಗಿ ನಿಮಗೆ ಧನ್ಯವಾದ ಸಲ್ಲಿಸುವ ನಮ್ಮ ವಿಧಾನವಾಗಿದೆ. ಅರ್ಹರಾಗುವುದು ಹೇಗೆ ಎಂದು ಕಂಡುಕೊಳ್ಳಿ ಮತ್ತು ನಮ್ಮ Snapchat ಕ್ರಿಯೇಟರ್ ಕಥೆಗಳು ನಿಯಮಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ಪಾವತಿಸಿದ ಪಾಲುದಾರಿಕೆ ಲೇಬಲ್
ನೀವು ಪ್ರಾಯೋಜಿತ ಕಂಟೆಂಟ್ ಪೋಸ್ಟ್ ಮಾಡಲು ಬಯಸಿದರೆ, ಸ್ಕ್ರೀನ್‌ಗೆ ಕಳುಹಿಸಿದ ಎಂಬಲ್ಲಿಂದ ನಿಮ್ಮ ಸಾರ್ವಜನಿಕ Snap ಗಳಲ್ಲಿ ನೀವು "ಪಾವತಿಸಿದ ಪಾಲುದಾರಿಕೆ" ಲೇಬಲ್ ಅನ್ನು ಸೇರಿಸಬಹುದು.
Snap ಸ್ಟಾರ್‌ಗಳು ಮತ್ತೊಂದು ಹೆಜ್ಜೆ ಮುಂದಿಡಬಹುದು ಮತ್ತು ತಮ್ಮ ಸ್ವಂತ ಸ್ಪಾಟ್‌ಲೈಟ್, Snap ಮ್ಯಾಪ್ ಮತ್ತು ಸಾರ್ವಜನಿಕ ಕಥೆ Snap ಗಳಿಗೆ ಪೋಸ್ಟ್ ಮಾಡುವಾಗ ಒಂದು ಬ್ರಾಂಡ್ ಅನ್ನು ಟ್ಯಾಗ್ ಮಾಡಬಹುದು. ನಿಮ್ಮ ಪ್ರಾಯೋಜಿತ ಕಂಟೆಂಟ್‌ನಲ್ಲಿ "ಪಾವತಿಸಿದ ಪಾಲುದಾರಿಕೆ" ಲೇಬಲ್ ಸೇರಿಸುವುದು ಹೇಗೆ ಎನ್ನುವುದು ಇಲ್ಲಿದೆ.

ಬ್ರಾಂಡ್ ಪಾಲುದಾರಿಕೆಗಳ ಟಾಗಲ್
Snapchat ನಲ್ಲಿ ಕ್ರಿಯೇಟರ್‌ಗಳನ್ನು ಕಂಡುಕೊಳ್ಳುವುದಕ್ಕಾಗಿ ವ್ಯವಹಾರಗಳು ಸಾಮಾನ್ಯವಾಗಿ ತೃತೀಯ ಪಕ್ಷದ ಪಾಲುದಾರರನ್ನು ಬಳಸುತ್ತವೆ. ಬ್ರಾಂಡ್ ಪಾಲುದಾರಿಕೆಗಳ ಟಾಗಲ್ ಮೂಲಕ Snap ನ ತೃತೀಯ ಪಕ್ಷದ ಪಾಲುದಾರರೊಂದಿಗೆ ನಿಮ್ಮ ಸಾರ್ವಜನಿಕ ಪ್ರೊಫೈಲ್‌ನ ವಿಶ್ಲೇಷಣೆಗಳನ್ನು ಹಂಚಿಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳಿ – ತಮ್ಮ ಬ್ರಾಂಡ್‌ನೊಂದಿಗೆ ಕೆಲಸ ಮಾಡಲು ಯಾವ ಕ್ರಿಯೇಟರ್‌ಗಳು ಅತ್ಯುತ್ತಮರಾಗಿದ್ದಾರೆ ಎಂದು ನಿರ್ಧರಿಸಲು ಈ ಮಾಹಿತಿ ವ್ಯವಹಾರಗಳಿಗೆ ನಿರ್ಣಾಯಕವಾಗಿದೆ.
ನಿಮ್ಮ ಸಾರ್ವಜನಿಕ ಪ್ರೊಫೈಲ್ ಸೆಟ್ಟಿಂಗ್‌ಗಳನ್ನು ನೋಡಿ ಮತ್ತು ಬ್ರಾಂಡ್ ಪಾಲುದಾರಿಕೆಗಳಿಗಾಗಿ ಕ್ರಿಯೇಟರ್‌ಗಳನ್ನು ಹುಡುಕುವುದರ ಮೇಲೆ ಗಮನ ಕೇಂದ್ರಿಕರಿಸುವ ತೃತೀಯ ಪಕ್ಷದ ಪಾಲುದಾರರೊಂದಿಗೆ ನಿಮ್ಮ ಒಳನೋಟಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದನ್ನು ಆಯ್ಕೆ ಮಾಡಿಕೊಳ್ಳಲು 'ಬ್ರಾಂಡ್ ಪಾಲುದಾರಿಕೆಗಳು' ಮೇಲೆ ಟಾಗಲ್ ಮಾಡಿ.
ಸದ್ಯಕ್ಕೆ ಇದು ಕೇವಲ Snap ಸ್ಟಾರ್‌ಗಳಿಗೆ ಮಾತ್ರ ಲಭ್ಯವಿದೆ ಎನ್ನುವುದನ್ನು ದಯವಿಟ್ಟು ಗಮನಿಸಿ.