ನಿಮ್ಮ ಸಮುದಾಯವನ್ನು ಬೆಳೆಸಿ
ನಿಮ್ಮ ಫಾಲೋವರ್‌ಗಳ ಜೊತೆ ತೊಡಗಿಕೊಳ್ಳುವುದನ್ನು ಮತ್ತು ಅವರನ್ನು ಅರ್ಥಮಾಡಿಕೊಳ್ಳುವುದನ್ನು Snapchat ನಿಮಗೆ ಸುಲಭವಾಗಿಸುತ್ತದೆ.
ಕಥೆ ಪ್ರತ್ಯುತ್ತರಗಳು ಮತ್ತು ಕ್ವೋಟ್ ಮಾಡುವುದು
ನಿಮ್ಮ ಸ್ನೇಹಿತರು ಸೇರಿದಂತೆ, ನಿಮ್ಮನ್ನು ಫಾಲೋ ಮಾಡುವ ಎಲ್ಲ Snapchatter ಗಳು, ನಿಮ್ಮ ಸಾರ್ವಜನಿಕ ಕಥೆಯನ್ನು ವೀಕ್ಷಿಸುವಾಗ ಮೇಲಕ್ಕೆ ಸ್ವೈಪ್ ಮಾಡಲು ಮತ್ತು ನಿಮಗೆ ಒಂದು ಪ್ರತ್ಯುತ್ತರವನ್ನು ಕಳುಹಿಸಲು ಸಾಧ್ಯವಾಗುತ್ತದೆ! ನಮ್ಮ ಸಮುದಾಯವನ್ನು ಸುರಕ್ಷಿತವಾಗಿ ಇರಿಸಲು, ನಾವು ಸ್ಪ್ಯಾಮ್ ಮಾಡುವ ಮತ್ತು ನಿಂದಿಸುವ ಸಂದೇಶಗಳನ್ನು ಸ್ವಯಂಚಾಲಿತವಾಗಿ ಫಿಲ್ಟರ್ ಮಾಡುತ್ತೇವೆ.
ಕಥೆ ಪ್ರತ್ಯುತ್ತರಗಳನ್ನು ನೋಡಲು:
ನಿಮ್ಮ ಸಾರ್ವಜನಿಕ ಕಥೆ Snap ಮೇಲೆ ಟ್ಯಾಪ್ ಮಾಡಿ
ಒಳನೋಟಗಳು ಮತ್ತು ಪ್ರತ್ಯುತ್ತರಗಳನ್ನು ನೋಡಲು ಮೇಲಕ್ಕೆ ಸ್ಪೈಪ್ ಮಾಡಿ
ಪೂರ್ಣ ಸಂದೇಶವನ್ನು ನೋಡಲು ಮತ್ತು ಮರಳಿ ಪ್ರತ್ಯುತ್ತರಿಸಲು ಪ್ರತ್ಯುತ್ತರದ ಮೇಲೆ ಟ್ಯಾಪ್ ಮಾಡಿ
ಒಂದು Snap ಜೊತೆಗೆ ನಿಮ್ಮ ಸಾರ್ವಜನಿಕ ಕಥೆಗೆ ಒಬ್ಬ ಫಾಲೋವರ್ ಪ್ರತ್ಯುತ್ತರವನ್ನು ಹಂಚಿಕೊಳ್ಳಲು ಕ್ವೋಟ್ ಮಾಡುವುದು ಸುಲಭವಾಗಿಸುತ್ತದೆ. ನಿಮಗೆ ಪ್ರಶ್ನೆಗಳನ್ನು ಕಳುಹಿಸುವಂತೆ ನಿಮ್ಮ ಪ್ರೇಕ್ಷಕರನ್ನು ಕೇಳಿ ಮತ್ತು ತಕ್ಷಣವೇ ಉತ್ತರಿಸಿ! ಅಭಿಮಾನಿಗಳಿಗೆ ನಿಮ್ಮ ಮೆಚ್ಚುಗೆಯನ್ನು ತೋರಿಸಲು ಮತ್ತು ನೀವು ನಿಮ್ಮ ಫಾಲೋವರ್‌ಗಳ ಪ್ರತ್ಯುತ್ತರಗಳನ್ನು ಓದುತ್ತೀರಿ ಎಂದು ಅವರಿಗೆ ತಿಳಿಯುವಂತೆ ಮಾಡಲು ಅಭಿಮಾನಿಗಳನ್ನು ಕ್ವೋಟ್ ಮಾಡಿ.
ಕಥೆ ಪ್ರತ್ಯುತ್ತರಗಳು ಮತ್ತು ಕ್ವೋಟ್ ಮಾಡುವ ಕುರಿತು ಇನ್ನಷ್ಟು ಮಾಹಿತಿಯನ್ನು ಇಲ್ಲಿ ಕಾಣಬಹುದು.

ಆ್ಯಕ್ಟಿವಿಟಿ ಸೆಂಟರ್
ಆ್ಯಕ್ಟಿವಿಟಿ ಸೆಂಟರ್ ಕಥೆ ಪ್ರತ್ಯುತ್ತರಗಳನ್ನು ನೋಡಲು, ಸಬ್‌ಸ್ಕ್ರೈಬರ್‌ಗಳ ಜೊತೆಗೆ ಚಾಟ್ ಮಾಡಲು ಮತ್ತು ನಿಮ್ಮ ಕಥೆಗಳಲ್ಲಿ ಅವರನ್ನು ಕ್ವೋಟ್ ಮಾಡಲು ನಿಮಗೆ ಅವಕಾಶ ಕಲ್ಪಿಸುತ್ತದೆ. ನಿಮ್ಮ ಪ್ರೇಕ್ಷಕರಿಂದ ಸ್ಪಾಟ್‌ಲೈಟ್ ಪ್ರತ್ಯುತ್ತರಗಳನ್ನು ನೀವು ಅನುಮೋದಿಸುವಿಕೆ ಅಥವಾ ತಿರಸ್ಕರಿಸುವಿಕೆ ಕೂಡ ಮಾಡಬಹುದು. ಆ್ಯಕ್ಟಿವಿಟಿ ಸೆಂಟರ್ ಪ್ರವೇಶಿಸಲು ನಿಮ್ಮ ಸಾರ್ವಜನಿಕ ಪ್ರೊಫೈಲ್‌ನಲ್ಲಿ ಬೆಲ್ ಐಕಾನ್ ಟ್ಯಾಪ್ ಮಾಡಿ.

ನಿಮ್ಮ ಒಳನೋಟಗಳನ್ನು ಅರ್ಥಮಾಡಿಕೊಳ್ಳಿ
ನಿಮ್ಮ ಪ್ರೇಕ್ಷಕರಿಗೆ ಯಾವುದು ಇಷ್ಟವಾಗುತ್ತದೆ ಮತ್ತು ಅವರು ನಿಮ್ಮ ಕಂಟೆಂಟ್ ಜೊತೆಗೆ ಹೇಗೆ ತೊಡಗಿಕೊಳ್ಳುತ್ತಾರೆ ಎನ್ನುವುದನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಕ್ರಿಯೇಟಿವ್ ಆಯ್ಕೆಗಳ ಕುರಿತು ಮಾಹಿತಿ ಪಡೆಯಲು ವಿಶ್ಲೇಷಣೆಗಳು ಸಹಾಯ ಮಾಡುತ್ತವೆ. ಲಭ್ಯವಿರುವ ಒಳನೋಟಗಳು ಮತ್ತು ಅವುಗಳನ್ನು ನಿಮ್ಮ ಸಾರ್ವಜನಿಕ ಪ್ರೊಫೈಲ್‌ನಿಂದ ಪ್ರವೇಶಿಸುವುದು ಹೇಗೆ ಎನ್ನುವ ಕುರಿತು ಹೆಚ್ಚಿನ ಮಾಹಿತಿಯನ್ನು ಇಲ್ಲಿ ಕಾಣಬಹುದು.

Snap ಪ್ರಚಾರ
Snap ಪ್ರಚಾರ ಎನ್ನುವುದು Snapchat ಒಳಗೆ ಬಳಸಲು ಸುಲಭವಾದ ಜಾಹೀರಾತು ನೀಡುವಿಕೆ ಟೂಲ್ ಆಗಿದ್ದು, ನಿಮ್ಮ ಸಾರ್ವಜನಿಕ ಪ್ರೊಫೈಲ್‌ನಿಂದ ಕಂಟೆಂಟ್ ಅನ್ನು ಒಂದು ಜಾಹೀರಾತಿನಂತೆ ಪ್ರಚಾರ ಮಾಡಲು ನಿಮಗೆ ಅವಕಾಶ ಕಲ್ಪಿಸುತ್ತದೆ — ನಿಮ್ಮ ವ್ಯಾಪ್ತಿಯನ್ನು ಸಂಭಾವ್ಯ ಪ್ರೇಕ್ಷಕರಿಗೆ ವಿಸ್ತರಿಸುತ್ತದೆ. ಆ್ಯಪ್‌ನಲ್ಲಿ ನೇರವಾಗಿ, ಮೊಬೈಲ್‌ನಲ್ಲಿ ಜಾಹೀರಾತುಗಳೊಂದಿಗೆ ನಿಮ್ಮ ಸ್ವಂತ ಸಾರ್ವಜನಿಕ ಕಥೆ, ಉಳಿಸಿದ ಕಥೆ ಅಥವಾ ಸ್ಪಾಟ್‌ಲೈಟ್ ಕಂಟೆಂಟ್‌ನಿಂದ ನಿಮ್ಮ ಕಂಟೆಂಟ್ ಅನ್ನು ನೀವು ಪ್ರಚಾರ ಮಾಡಬಹುದು. ಒಂದು Snap ಪ್ರಚಾರ ಮಾಡುವುದು ಹೇಗೆ ಎಂದು ತಿಳಿದುಕೊಳ್ಳಿ.