ನಾವು ವಿಷಯ ಮಾರ್ಗಸೂಚಿಗಳನ್ನು ಯಾಕೆ ಹೊಂದಿದ್ದೇವೆ
Snapchatter ಗಳು ತಮ್ಮ ಸ್ನೇಹಿತರೊಂದಿಗೆ ಮಾತನಾಡಲು, ಮನರಂಜನೆ ಪಡೆಯಲು ಮತ್ತು ಪ್ರಪಂಚದ ಬಗ್ಗೆ ತಿಳಿದುಕೊಳ್ಳಲು ನಮ್ಮ ಆ್ಯಪ್‌ಗೆ ಬರುತ್ತಾರೆ. ವಾಸ್ತವವಾಗಿ , Snapchat 375 ಮಿಲಿಯನ್‌ಗೂ ಅಧಿಕ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ ಮತ್ತು 20 ಕ್ಕೂ ಅಧಿಕ ದೇಶಗಳಲ್ಲಿ 13–24 ವರ್ಷ ವಯಸ್ಸಿನ 90% ಹಾಗೂ 13- ರಿಂದ 34-ವರ್ಷ ವಯಸ್ಸಿನ 75% ಕ್ಕೂ ಹೆಚ್ಚು ಜನರನ್ನು ತಲುಪುತ್ತದೆ.
ಅಂದರೆ ಭಾರೀ ಪ್ರಮಾಣದ ಯುವಜನರು.
Snap ನಲ್ಲಿ, ನಮ್ಮ ಸಮುದಾಯಕ್ಕೆ ಸಾಧ್ಯವಿರುವ ಅತ್ಯುತ್ತಮ ಅನುಭವವನ್ನು ಸೃಷ್ಟಿಸುವುದು ನಮ್ಮ ಧ್ಯೇಯವಾಗಿದೆ. ನಾವು ಅವರಿಗೆ ಮನರಂಜನೆಯ, ಮಾಹಿತಿಯುಳ್ಳ ಮತ್ತು ವೈವಿಧ್ಯಮಯ ಸ್ವರೂಪದ ವಿಷಯಗಳನ್ನು ಒದಗಿಸಲು ಮತ್ತು ವೇದಿಕೆಯಲ್ಲಿ ಅವರು ಸುರಕ್ಷಿತ ಮತ್ತು ಸುಭದ್ರ ಭಾವನೆ ಅನುಭವಿಸುತ್ತಿದ್ದಾರೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ. ವಿಷಯ ಮಾರ್ಗಸೂಚಿಗಳು ಕಾರ್ಯರೂಪಕ್ಕೆ ಬರುವುದು ಇಲ್ಲಿಯೇ.
ನಮ್ಮದು ಸರಳವಾದ ಗುರಿ: ನಾವು Snapchat ಅನ್ನು ಸುರಕ್ಷಿತ ಮತ್ತು ಆರೋಗ್ಯಕರ ಅನುಭವವಾಗಿಸಲು ಬಯಸುತ್ತೇವೆ — ವಿಶೇಷವಾಗಿ ನಮ್ಮ ಅತ್ಯಂತ ಕಿರಿಯ ಯುವ ಬಳಕೆದಾರರಿಗೆ. ಅದನ್ನು ಮಾಡಲು ನಮಗೆ ನಿಮ್ಮ ಸಹಾಯ ಬೇಕಾಗಿದೆ.