ಬನ್ನಿ ಪ್ರಾರಂಭಿಸೋಣ!
ನಿಪುಣರಂತೆ Snap ಮಾಡಲು ನೀವು ತಿಳಿದಿರಬೇಕಾದ ಎಲ್ಲವನ್ನೂ ನಾವು ಹೊಂದಿದ್ದೇವೆ.

ಒಂದು Snapchat ಖಾತೆ ರಚಿಸಿ
Snapchat ಆ್ಯಪ್ ಡೌನ್‌ಲೋಡ್ ಮಾಡುವುದು ಮತ್ತು ಒಂದು Snapchat ಬಳಕೆದಾರ ಹೆಸರು ರಚಿಸುವುದು ಹೇಗೆ ಎಂದು ತಿಳಿದುಕೊಳ್ಳಿ. ನೀವು ನಿಮ್ಮ ಖಾತೆಯನ್ನು ರಚಿಸಿದ ಬಳಿಕ, Snapchat ನ ಪ್ರಮುಖ ಭಾಗಗಳ ಕುರಿತು ತಿಳಿದುಕೊಳ್ಳಲು ಈ ವೀಡಿಯೊ ನೋಡಿ.
ನಿಮ್ಮ ಖಾತೆಯ ಸುರಕ್ಷತೆ ನಮಗೆ ಮುಖ್ಯವಾಗಿದೆ. Snapchat ನಲ್ಲಿ ಸುರಕ್ಷಿತವಾಗಿ ಉಳಿಯುವುದು ಹೇಗೆ ಮತ್ತು ಎರಡು-ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸುವುದು ಹೇಗೆ ಎನ್ನುವ ಕುರಿತು ಈ ಸಲಹೆಗಳನ್ನು ಪರಿಶೀಲಿಸಿ.
ನಿಮ್ಮ ಸಾರ್ವಜನಿಕ ಪ್ರೊಫೈಲ್ ನಿರ್ಮಿಸಿ
ಒಂದು ಸಾರ್ವಜನಿಕ ಪ್ರೊಫೈಲ್ Snapchat ನಲ್ಲಿ ನಿಮಗೆ ಶಾಶ್ವತ ನೆಲೆಯನ್ನು ಕಲ್ಪಿಸುತ್ತದೆ, ಅಲ್ಲಿ ನಿಮ್ಮನ್ನು ಸಾರ್ವಜನಿಕವಾಗಿ ಕಂಡುಹಿಡಿಯಬಹುದು, ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಬಹುದು ಮತ್ತು ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳಬಹುದು.
ನಿಮ್ಮ ಸಾರ್ವಜನಿಕ ಪ್ರೊಫೈಲ್ ಪ್ರವೇಶಿಸಲು, ಸರಳವಾಗಿ ನಿಮ್ಮ ಸ್ಕ್ರೀನ್‌ನ ಮೇಲ್ಭಾಗದ ಎಡ ಮೂಲೆಯಲ್ಲಿ ನಿಮ್ಮ Bitmoji ಟ್ಯಾಪ್ ಮಾಡಿ ಮತ್ತು “ನನ್ನ ಸಾರ್ವಜನಿಕ ಪ್ರೊಫೈಲ್” ಆಯ್ಕೆ ಮಾಡಿ. ಒಂದು ಪ್ರೊಫೈಲ್ ಫೋಟೋ, ಹಿನ್ನೆಲೆ ಫೋಟೋ, ಸ್ವವಿವರ ಮತ್ತು ಸ್ಥಳ ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ.
ನಿಮ್ಮ ಅಭಿಮಾನಿಗಳು ನಿಮ್ಮನ್ನು ಹುಡುಕಲು ಸಹಾಯ ಮಾಡುವುದಕ್ಕಾಗಿ ನಿಮ್ಮ Snapchat ಅಕೌಂಟ್ ಬಳಕೆದಾರ ಹೆಸರು ಮತ್ತು/ಅಥವಾ ನಿಮ್ಮ ಇತರ ಸಾಮಾಜಿಕ ಚಾನೆಲ್‌ಗಳ URL ಸೇರಿಸಲು ಮರೆಯಬೇಡಿ.

ನೀವು ಪೋಸ್ಟ್ ಮಾಡಲು ಸಿದ್ಧರಾಗಿದ್ದೀರಿ!
ಒಬ್ಬ ಸ್ನೇಹಿತ, ಒಂದು ಆಯ್ದ ಗುಂಪು ಅಥವಾ ವಿಶಾಲ Snapchat ಸಮುದಾಯ ಯಾವುದೇ ಆಗಿರಬಹುದು, Snapchat ನಲ್ಲಿ ಅವರೊಂದಿಗೆ ನಿಮ್ಮ ಕಂಟೆಂಟ್ ಹಂಚಿಕೊಳ್ಳಲು ಹಲವಾರು ವಿಧಾನಗಳಿವೆ. Snapchat ನಲ್ಲಿ ಹಂಚಿಕೊಳ್ಳಲಾಗುವ ಎಲ್ಲ ಕಂಟೆಂಟ್ Snapchat ನ ಸಮುದಾಯ ಮಾರ್ಗಸೂಚಿಗಳು ಮತ್ತು ಕಂಟೆಂಟ್ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಣೆ ಮಾಡಬೇಕು.

ನನ್ನ ಕಥೆಗಳು · ಸ್ನೇಹಿತರು
ನಿಮ್ಮ ನನ್ನ ಕಥೆ · ಸ್ನೇಹಿತರು ಗೆ ಪೋಸ್ಟ್ ಮಾಡಿರುವ Snap ಗಳು ನಿಮ್ಮ ಸ್ನೇಹಿತರಾಗಿರುವ Snapchatter ಗಳಿಗೆ (ಅಂದರೆ ನೀವು ಮರಳಿ ಸೇರಿಸಿರುವ ಜನರಿಗೆ) ಮಾತ್ರ ಕಾಣಿಸುತ್ತವೆ. ನಿಮ್ಮ ಸ್ನೇಹಿತರು 24 ಗಂಟೆಗಳ ಕಾಲ ಮಿತಿರಹಿತರವಾಗಿ ಹಲವು ಬಾರಿ ನಿಮ್ಮ ಕಥೆಯನ್ನು ವೀಕ್ಷಿಸಬಹುದು. ನಿಮ್ಮ ಕಥೆಯನ್ನು ಪೋಸ್ಟ್ ಮಾಡುವುದು ಹೇಗೆ ಎನ್ನುವ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

ನನ್ನ ಕಥೆ · ಸಾರ್ವಜನಿಕ
ನಿಮ್ಮ ಸಾರ್ವಜನಿಕ ನನ್ನ ಕಥೆಯು ನಿಮ್ಮ ಫಾಲೋವರ್‌ಗಳೊಂದಿಗೆ ಮತ್ತು ವಿಶಾಲವಾದ Snapchat ಸಮುದಾಯದೊಂದಿಗೆ ನೀವು ನಿಮ್ಮ ಕಂಟೆಂಟ್ ಹಂಚಿಕೊಳ್ಳುವ ವಿಧಾನವಾಗಿದೆ. ಕಥೆಗಳು ಪುಟದ 'ಫಾಲೋವಿಂಗ್' ವಿಭಾಗದಲ್ಲಿ ನಿಮ್ಮ ನನ್ನ ಕಥೆ · ಸಾರ್ವಜನಿಕ ಕ್ಕೆ ಪೋಸ್ಟ್ ಮಾಡಿರುವ ಕಥೆಗಳನ್ನು ನಿಮ್ಮ ಫಾಲೋವರ್‌ಗಳು ನೋಡಬಹುದು. ನಿಮ್ಮ ಪ್ರೊಫೈಲ್ ನೋಡುತ್ತಿರುವ ಯಾರಾದರೂ ನಿಮ್ಮ ಸಕ್ರಿಯ ಸಾರ್ವಜನಿಕ ಕಥೆಗಳನ್ನು ಕೂಡ ನೋಡಬಹುದು.
ನೀವು Snap ನಲ್ಲಿ ವಿಶಾಲ ಪ್ರೇಕ್ಷಕರನ್ನು ಕಂಡುಕೊಂಡಿರುವ ಕ್ರಿಯೇಟರ್ ಆಗಿದ್ದರೆ, ನಿಮ್ಮ ಸಾರ್ವಜನಿಕ ಕಥೆಗಳನ್ನು Discover ನಲ್ಲಿ ಸಮುದಾಯಕ್ಕೆ ಶಿಫಾರಸು ಮಾಡಬಹುದು.
ನಿಮ್ಮ ಸಾರ್ವಜನಿಕ ನನ್ನ ಕಥೆಯನ್ನು 'ಗೆ ಕಳುಹಿಸಿ' ಸ್ಕ್ರೀನ್‌ನಲ್ಲಿ ನನ್ನ ಕಥೆ · ಸಾರ್ವಜನಿಕ ಎಂಬ ಶೀರ್ಷಿಕೆಯ ಪೋಸ್ಟ್ ಮಾಡುವ ಆಯ್ಕೆಯಾಗಿ ಕಾಣಬಹುದು.
ಸ್ಪಾಟ್‌ಲೈಟ್
ವಿಶಾಲವಾದ Snapchat ಸಮುದಾಯಕ್ಕೆ ತೆರೆದುಕೊಳ್ಳಲು ಕ್ರಿಯೇಟರ್‌ಗಳಿಗೆ ಸ್ಪಾಟ್‌ಲೈಟ್ ಅದ್ಭುತ ವಿಧಾನವಾಗಿದೆ.
ರಚಿಸಿದವರು ಯಾರು ಅಥವಾ ನೀವು ಎಷ್ಟು ಫಾಲೋವರ್‌ಗಳನ್ನು ಹೊಂದಿದ್ದೀರಿ ಎನ್ನುವುದನ್ನು ಪರಿಗಣಿಸದೆ ಇದು ಅತ್ಯಂತ ಮನರಂಜನೆಯ Snap ಗಳನ್ನು ಪ್ರದರ್ಶಿಸುತ್ತದೆ.
ಒಂದು ಸ್ಪಾಟ್‌ಲೈಟ್ ಸಲ್ಲಿಸುವುದು ಹೇಗೆ ಎನ್ನುವ ಕುರಿತು ಇನ್ನಷ್ಟು ತಿಳಿದುಕೊಳ್ಳಿ.
ವೆಬ್‌ನಲ್ಲಿ ಕೂಡ ನೀವು ಸ್ಪಾಟ್‌ಲೈಟ್ ಕಂಟೆಂಟ್ ಅನ್ನು ನೋಡಬಹುದು ಮತ್ತು ಅಪ್‌ಲೋಡ್ ಮಾಡಬಹುದು! ಅದನ್ನು ಪರಿಶೀಲಿಸಲು www.snapchat.com/spotlight ಗೆ ತೆರಳಿ.
Snap ಮ್ಯಾಪ್
ಕೇವಲ ನಿಮಗಾಗಿ, ನಿಮ್ಮ ಸ್ನೇಹಿತರಿಗಾಗಿ ಮತ್ತು ನಿಮ್ಮ ಸುತ್ತಲಿನ ಜಗತ್ತನ್ನು ಅನ್ವೇಷಿಸುವುದಕ್ಕಾಗಿ ನಿರ್ಮಿಸಿರುವ ಮ್ಯಾಪ್. ಕ್ರಿಯೇಟರ್ ಆಗಿ ನಿಮ್ಮ Snap ಗಳು ಮತ್ತು ಸ್ಪಾಟ್‌ಲೈಟ್ ವೀಡಿಯೊಗಳಲ್ಲಿ ಸ್ಥಳಗಳನ್ನು ಟ್ಯಾಗ್ ಮಾಡುವ ಮೂಲಕ ನಿಮ್ಮ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಬಹುದು. Snap ಮ್ಯಾಪ್ ತೆರೆಯಲು ಕ್ಯಾಮೆರಾ ಸ್ಕ್ರೀನ್‌ನಿಂದ ಎರಡು ಬಾರಿ ಬಲಕ್ಕೆ ಸ್ವೈಪ್ ಮಾಡಿ.
ನೀವು ಸಾರ್ವಜನಿಕ ಪ್ರೊಫೈಲ್ ಹೊಂದಿದ್ದರೆ, ನೀವು Snap ಮ್ಯಾಪ್‌ಗೆ ಅನಾಮಧೇಯರಾಗಿ ಅಥವಾ ನಿಮ್ಮ ಹೆಸರನ್ನು ಲಗತ್ತಿಸುವುದರೊಂದಿಗೆ Snap ಗಳನ್ನು ಸಲ್ಲಿಸಬಹುದು. Snap ಮ್ಯಾಪ್‌ಗೆ ಸಲ್ಲಿಸುವುದು ಹೇಗೆ ಎನ್ನುವ ಕುರಿತು ಇನ್ನಷ್ಟು ತಿಳಿದುಕೊಳ್ಳಿ.

Snap ಸ್ಟಾರ್ ಆಗಿ
Snap ಸ್ಟಾರ್‌ಗಳು Snapchat ಗೆ ಒಂದಿಷ್ಟು ಅತ್ಯುತ್ತಮ ಮತ್ತು ಅತ್ಯಂತ ಮನರಂಜಿಸುವ ಕಂಟೆಂಟ್ ಅನ್ನು ತರುವ ಪ್ರಸಿದ್ಧ ವ್ಯಕ್ತಿಗಳು ಅಥವಾ ಕ್ರಿಯೇಟರ್‌ಗಳು ಆಗಿದ್ದಾರೆ. ತಮ್ಮ ವಿಶಿಷ್ಟ ದೃಷ್ಟಿಕೋನಗಳ ಮೂಲಕ, Snap ಸ್ಟಾರ್‌ಗಳು ತಮ್ಮ ಬದುಕು ಮತ್ತು ಆಸಕ್ತಿಗಳಿಗೆ ಪ್ರೇಕ್ಷಕರಿಗೆ ಅಭೂತಪೂರ್ವ ಪ್ರವೇಶವನ್ನು ನೀಡುತ್ತಾರೆ.
Snapchat ನಲ್ಲಿ ತಮ್ಮ ಕಂಟೆಂಟ್ ಅನ್ನು ಪ್ರಮುಖವಾಗಿ ಪ್ರದರ್ಶಿಸುವುದಕ್ಕೆ Snap ಸ್ಟಾರ್‌ಗಳು ಅರ್ಹರಾಗಿದ್ದಾರೆ. Snap ಸ್ಟಾರ್‌ಗೆ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವ ಕುರಿತು ಇನ್ನಷ್ಟು ತಿಳಿದುಕೊಳ್ಳಿ.