ಸ್ಪಾಟ್‌ಲೈಟ್‌ಗೆ ಸಲ್ಲಿಸುವುದು ಹೇಗೆ
ದೊಡ್ಡ (ಮತ್ತು ಬೆಂಬಲಿಸುವ) ಪ್ರೇಕ್ಷಕರನ್ನು ತಲುಪುವ ಅವಕಾಶಕ್ಕಾಗಿ ನಿಮ್ಮ Snap ಗಳನ್ನು ಸ್ಪಾಟ್‌ಲೈಟ್‌ನಲ್ಲಿ ಹಂಚಿಕೊಳ್ಳಿ:
ನಿಮ್ಮ ಫೋನ್‌ನಲ್ಲಿ
ನಿಮ್ಮ Snap ರೆಕಾರ್ಡ್ ಮಾಡಿ ಮತ್ತು ಯಾವುದೇ ಕ್ರಿಯೇಟಿವ್ ಟೂಲ್ಸ್ ಅಥವಾ ತಿದ್ದುಪಡಿಗಳನ್ನು ಸೇರಿಸಿ. ಕಳುಹಿಸಿ ಬಟನ್ ಟ್ಯಾಪ್ ಮಾಡಿ ಮತ್ತು 'ರಿಗೆ ಕಳುಹಿಸಿ' ಸ್ಕ್ರೀನ್‌ನ ಮೇಲ್ಭಾಗದಲ್ಲಿ 'ಸ್ಪಾಟ್‌ಲೈಟ್‌' ಆಯ್ಕೆ ಮಾಡಿ.
ವೆಬ್‌ನಲ್ಲಿ
ನಿಮ್ಮ Snapchat ಅಕೌಂಟ್‌ಗೆ ಲಾಗ್ ಇನ್ ಮಾಡಿ ಮತ್ತು ತ್ವರಿತ ಮತ್ತು ಸುಲಭವಾದ ಸಲ್ಲಿಕೆಗಳಿಗಾಗಿ ವೆಬ್ ಅಪ್‌ಲೋಡರ್ ಟೂಲ್ ಬಳಸಿ.
CH_035.png
ಸ್ಪಾಟ್‌ಲೈಟ್‌ ಯಶಸ್ಸಿಗೆ ಪರಿಣಿತ ಸಲಹೆಗಳು
  • ಕ್ರಿಯೇಟಿವ್ ಆಗಿರಿ! ಲೆನ್ಸ್‌ಗಳು, ಧ್ವನಿಗಳು ಮತ್ತು GIF ಗಳಂಥ ಟೂಲ್‌ಗಳನ್ನು ಬಳಸಿಕೊಳ್ಳಿ
  • ಎಲ್ಲ ವೀಡಿಯೊಗಳು ಲಂಬವಾಗಿರಬೇಕು ಮತ್ತು 60 ಸೆಕೆಂಡುಗಳಷ್ಟು ಉದ್ದವಿರಬಹುದು
  • ಕೃತಿಸ್ವಾಮ್ಯ ಉಲ್ಲಂಘನೆಗಳನ್ನು ತಪ್ಪಿಸಲು Snapchat ನ ಲೈಬ್ರರಿಯಿಂದ ಮಾತ್ರ ಸಂಗೀತವನ್ನು ಬಳಸಿ
  • ಬಹು ಕ್ಲಿಪ್‌ಗಳನ್ನು ರೆಕಾರ್ಡ್ ಮಾಡಲು ಮತ್ತು ಅವುಗಳನ್ನು ಜೊತೆಗೂಡಿಸಲು ನಿಮಗೆ ಅವಕಾಶ ಕಲ್ಪಿಸುವ ಕ್ಯಾಮೆರಾ ವೈಶಿಷ್ಟ್ಯವಾದ, ಟೈಮ್‌ಲೈನ್ ಅನ್ನು ಪ್ರಯತ್ನಿಸಿ
  • ಸ್ಪಾಟ್‌ಲೈಟ್‌ಗೆ ನಿಮ್ಮ Snap ಅನ್ನು ನೀವು ಸಲ್ಲಿಸುವಾಗ #ವಿಷಯ (ಉದಾಹರಣೆಗೆ, #ಲೈಫ್‌ಹ್ಯಾಕ್‌ಗಳು) ಸೇರಿಸಿ
ಕಂಟೆಂಟ್ ಸ್ಪಾಟ್‌ಲೈಟ್‌ ಟ್ಯಾಬ್‌ನಲ್ಲಿ ಪ್ರದರ್ಶಿತವಾಗುವುದಕ್ಕೆ ಮುಂಚೆ, ಅದು ನಮ್ಮ ಸ್ಪಾಟ್‌ಲೈಟ್‌ ಮಾರ್ಗಸೂಚಿಗಳು ಮತ್ತು ಕಮ್ಯುನಿಟಿ ಮಾರ್ಗಸೂಚಿಗಳು ಅನುಸರಣೆಯನ್ನು ಹೊಂದಿದೆ ಎನ್ನುವುದನ್ನು ಖಚಿತಪಡಿಸಲು ಸಹಾಯ ಮಾಡುವ ಮಾಡರೇಟರ್‌ಗಳಿಂದ ಪರಿಶೀಲಿಸಲ್ಪಡುತ್ತದೆ. ಒಮ್ಮೆ ನೀವು ಸ್ಪಾಟ್‌ಲೈಟ್‌ಗೆ Snap ಅನ್ನು ಸಲ್ಲಿಸಿದ ಬಳಿಕ, ನಿಮ್ಮ ಪ್ರೊಫೈಲ್‌ನಿಂದ ನಿಮ್ಮ ಸಲ್ಲಿಕೆಯ ಸ್ಥಿತಿಯನ್ನು ಪರಿಶೀಲಿಸಿ.