ಸ್ಪಾಟ್‌ಲೈಟ್‌ನಲ್ಲಿ ಬಹುಮಾನ ಪಡೆಯುವುದು ಹೇಗೆ
ನವೀಕರಿಸಿದ ದಿನಾಂಕ: ಜನವರಿ 2024
ಸ್ಪಾಟ್‌ಲೈಟ್‌ ನಿಮಗೆ ಲಕ್ಷಾಂತರ Snapchatter ಗಳ ಜೊತೆಗೆ ವಿಶ್ವಾದ್ಯಂತದ ಬಳಕೆದಾರರೊಂದಿಗೆ ಸಣ್ಣ ವೀಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ನಮ್ಮ ಸಮುದಾಯದ ಕ್ರಿಯೇಟಿವ್ ಕೊಡುಗೆಗಳಿಗೆ ನಾವು ತುಂಬಾ ಮನ್ನಣೆ ನೀಡುತ್ತೇವೆ ಮತ್ತು ಸ್ಪಾಟ್‌ಲೈಟ್‌ ಯಾರಾದರೂ ಕೇಂದ್ರಭೂಮಿಕೆಗೆ ಬರಬಹುದಾದ ಸ್ಥಳವಾಗಿದೆ.
ಉದಯೋನ್ಮುಖ ನಿರ್ಮಿಸುವವರುಗಳಿಗೆ ಯಶಸ್ಸನ್ನು ಕಲ್ಪಿಸಲಾಗುತ್ತಿದೆ
Snapchatter ಗಳ ಸೃಜನಶೀಲತೆಗಾಗಿ ಬಹುಮಾನ ನೀಡುವುದು ನಮಗೆ ಮುಖ್ಯವಾಗಿದೆ. ಅರ್ಹ ಸ್ಪಾಟ್‌ಲೈಟ್ ಕ್ರಿಯೇಟರ್‌ಗಳಿಗೆ ಲಭ್ಯವಿರುವ ಒಟ್ಟು ಬಹುಮಾನಗಳನ್ನು ನಾವು ಹೆಚ್ಚಿಸಿದ್ದೇವೆ ಎಂದು ತಿಳಿಸಲು ಉತ್ಸುಕರಾಗಿದ್ದೇವೆ.
ಸ್ಪಾಟ್‌ಲೈಟ್‌ನಲ್ಲಿ ರಚಿಸಲು ಹೂಡಿಕೆ ಮಾಡುವ ಉದಯೋನ್ಮುಖ ಕ್ರಿಯೇಟರ್‌ಗಳಿಗೆ ನಾವು ಬಹುಮಾನ ನೀಡುತ್ತಿದ್ದೇವೆ. ಒಂದು ವೇಳೆ ಅವರು ಆ ಕ್ಯಾಲೆಂಡರ್ ತಿಂಗಳಿನಲ್ಲಿ ಅಗ್ರ ಕಾರ್ಯಕ್ಷಮತೆಯ ನಿರ್ಮಿಸುವವರುಗಳಾಗಿದ್ದರೆ ಅರ್ಹ Snapchatterಗಳು ಮಾಸಿಕ ಬಹುಮಾನಗಳನ್ನು ಸ್ವೀಕರಿಸಬಹುದು-ಅದನ್ನು ಹಣಕ್ಕೆ ನಗದೀಕರಿಸಿಕೊಳ್ಳಬಹುದು. ಕಾರ್ಯಕ್ಷಮತೆಯನ್ನು ವೀಕ್ಷಣೆಗಳು ಮತ್ತು ಇತರ ತೊಡಗಿಕೊಳ್ಳುವಿಕೆಯಂತಹ ವಿವಿಧ ಅಂಶಗಳನ್ನು ಆಧರಿಸಿದ ಸ್ವಾಮ್ಯದ ಸೂತ್ರದಿಂದ ನಿರ್ಧರಿಸಲಾಗುತ್ತದೆ.
ಅರ್ಹರಾಗಲು:
  1. ನಿಮ್ಮ ಖಾತೆ ಕನಿಷ್ಟ 1 ತಿಂಗಳು ಹಳೆಯದಾಗಿರಬೇಕು
  2. ನಿಮ್ಮ ಪ್ರೊಫೈಲ್ ಅನ್ನು ಸಾರ್ವಜನಿಕವಾಗಿ ಹೊಂದಿಸಬೇಕು
  3. ನೀವು ಕನಿಷ್ಟ 1,000 ಫಾಲೋವರ್‌ಗಳನ್ನು ಹೊಂದಿರಬೇಕು
  4. ಆ ಕ್ಯಾಲೆಂಡರ್ ತಿಂಗಳಿನಲ್ಲಿ ನೀವು ಕನಿಷ್ಟ 10,000 ವೀಕ್ಷಣೆಗಳನ್ನು ಪಡೆದುಕೊಂಡಿರಬೇಕು
  5. ಆ ಕ್ಯಾಲೆಂಡರ್ ತಿಂಗಳ 5 ಭಿನ್ನ ದಿನಗಳಲ್ಲಿ ಕನಿಷ್ಟ 10 ಬಾರಿ ನೀವು ಪೋಸ್ಟ್ ಮಾಡಿರಬೇಕು. ಕನಿಷ್ಟ 5 ಪೋಸ್ಟ್‌ಗಳು Snapchat ಕ್ರಿಯೇಟಿವ್ ಟೂಲ್ ಬಳಸಬೇಕು (ಕ್ಯಾಮೆರಾ, ಎಡಿಟಿಂಗ್ ಅಥವಾ ಸಂಗೀತ ಇವುಗಳಲ್ಲಿ ಯಾವುದಾದರೂ ಒಂದು) 
  6. ನಿಮ್ಮ ವಿಷಯವು ಮೂಲವಾಗಿರಬೇಕು (ನೀವು ರಚಿಸಿರುವುದು)
  7. ನೀವು ಒಂದು ಅರ್ಹ ದೇಶದಲ್ಲಿ ನೆಲೆಸಿರಬೇಕು ಮತ್ತು Snap ಗಳನ್ನು ಪೋಸ್ಟ್ ಮಾಡಬೇಕು
  8. ನೀವು ಕಮ್ಯುನಿಟಿ ಮಾರ್ಗಸೂಚಿಗಳು, ವಿಷಯ ಮಾರ್ಗಸೂಚಿಗಳು, ಸ್ಪಾಟ್‌ಲೈಟ್ ಮಾರ್ಗಸೂಚಿಗಳು, ಸೇವೆಯ ನಿಯಮಗಳು, ಸಂಗೀತ ಮಾರ್ಗಸೂಚಿಗಳು ಮತ್ತು ನಮ್ಮ ಸ್ಪಾಟ್‌ಲೈಟ್ ನಿಯಮಗಳ ಪಾಲನೆ ಮಾಡಬೇಕು. ಸ್ಪಾಟ್‌ಲೈಟ್‌ನಿಂದ ನೀವು ಅಳಿಸುವ ಯಾವುದೇ Snap ಗಳು ಪಾವತಿಗೆ ಅರ್ಹವಾಗಿರುವುದಿಲ್ಲ.
ನಿಮ್ಮ ಸ್ಪಾಟ್‌ಲೈಟ್ ಸಲ್ಲಿಕೆಗಳಿಂದ ಬಹುಮಾನಗಳನ್ನು ಸ್ವೀಕರಿಸಲು ನೀವು ಅರ್ಹರಾಗಿದ್ದರೆ, Snapchat ಆ್ಯಪ್‌ನಲ್ಲಿ ನೀವು ಪುಶ್ ಅಧಿಸೂಚನೆಯನ್ನು ಸ್ವೀಕರಿಸುತ್ತೀರಿ ಮತ್ತು ನನ್ನ ಪ್ರೊಫೈಲ್‌ನಲ್ಲಿಯೂ ಸಹ ನಿಮಗೆ ಸೂಚನೆ ನೀಡಲಾಗುತ್ತದೆ, ಅಲ್ಲಿ ನೀವು ಕ್ರಿಸ್ಟಲ್ಸ್ ಹಬ್ ತೆರೆಯಲು 'ನನ್ನ Snap ಕ್ರಿಸ್ಟಲ್ಸ್' ಅನ್ನು ಟ್ಯಾಪ್ ಮಾಡಬಹುದು.
ಸ್ಪಾಟ್‌ಲೈಟ್‌ ಸವಾಲುಗಳು
ಸವಾಲುಗಳ ಪ್ರಾಂಪ್ಟ್‌ಗಳಿಗೆ ಪ್ರತಿಕ್ರಿಯಾಶೀಲವಾಗಿರುವ ಮತ್ತು ನಿರ್ದಿಷ್ಟ ತೀರ್ಮಾನದ ಮಾನದಂಡದಲ್ಲಿ ಅತ್ಯುತ್ತಮ ಸ್ಕೋರ್ ಗಳಿಸುವ ಅಗ್ರ-ಕಾರ್ಯಕ್ಷಮತೆಯ ಸ್ಪಾಟ್‌ಲೈಟ್ ಸಲ್ಲಿಕೆಗಳನ್ನು ಸಲ್ಲಿಸಿದ್ದಕ್ಕಾಗಿ ಬಹುಮಾನಗಳನ್ನು ಗೆಲ್ಲಿ.
ಇದು Snap ಕ್ಯಾಮೆರಾ ಮತ್ತು ಎಡಿಟಿಂಗ್ ಟೂಲ್‌ಗಳನ್ನು ಬಳಸಿಕೊಂಡು ತಮ್ಮ ವಿಶಿಷ್ಟ ಧ್ವನಿ ಮತ್ತು ಸೃಜನಶೀಲತೆಯನ್ನು ಹೈಲೈಟ್ ಮಾಡಲು ಕ್ರಿಯೇಟರ್‌ಗಳಿಗೆ ಒಂದು ಅವಕಾಶವಾಗಿದೆ. ಸವಾಲುಗಳಿಗೆ Snap ಗಳನ್ನು ಸಲ್ಲಿಸುವ ಕ್ರಿಯೇಟರ್‌ಗಳು ಬಹುಮಾನಗಳಿಗೆ ಕೂಡ ಅರ್ಹರಾಗಬಹುದು.
ನಿಮ್ಮ ಸ್ಪಾಟ್‌ಲೈಟ್‌ಗಳನ್ನು ಯಾರು ನೋಡುತ್ತಾರೆ?
ಸ್ಪಾಟ್‌ಲೈಟ್‌ನೊಳಗೆ ಪ್ರತಿ ವ್ಯಕ್ತಿಯ ಅನುಭವವನ್ನು ಅವರಿಗೆ ವೈಯಕ್ತಿಕವಾಗಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಪ್ರತಿ Snapchatter ಆಸಕ್ತನಾಗಿರಬಹುದಾದ ಅತ್ಯಂತ ತೊಡಗಿಕೊಳ್ಳುವ Snap ಗಳನ್ನು ಪ್ರದರ್ಶಿಸಲು ನಮ್ಮ ಕಂಟೆಂಟ್ ಆಲ್ಗಾರಿದಮ್‌ಗಳು ಕಾರ್ಯನಿರ್ವಹಿಸುತ್ತವೆ.
ನಾವು ನಿರ್ಮಿಸುವ ಎಲ್ಲವೂ ಕೂಡ Snapchatter ಗಳು ತಮ್ಮನ್ನು ಅಭಿವ್ಯಕ್ತಪಡಿಸಲು, ಆ ಕ್ಷಣದಲ್ಲಿ ಜೀವಿಸಲು, ಜಗತ್ತಿನ ಕುರಿತು ತಿಳಿದುಕೊಳ್ಳಲು ಮತ್ತು ಜೊತೆಯಾಗಿ ವಿನೋದಿಸಲು ಸಹಾಯ ಮಾಡುವ ಸೇವೆಯ ಭಾಗವಾಗಿವೆ.