ಕ್ರಿಯೇಟರ್ ಮಾರ್ಕೆಟ್‌ಪ್ಲೇಸ್
Snapchat ನ ಕ್ರಿಯೇಟರ್ ಸಮುದಾಯವನ್ನು ಕಂಡುಹಿಡಿಯಲು ಮತ್ತು ಅವರೊಂದಿಗೆ ಪಾಲುದಾರರಾಗಲು ಕ್ರಿಯೇಟರ್ ಮಾರ್ಕೆಟ್‌ಪ್ಲೇಸ್ ವ್ಯವಹಾರಗಳಿಗೆ ಸಹಾಯ ಮಾಡುತ್ತದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ
ಬ್ರ್ಯಾಂಡೆಡ್ ಕಂಟೆಂಟ್ ಉಪಕ್ರಮಗಳು, AR ಸಹಭಾಗಿತ್ವಗಳು ಮತ್ತು ಇನ್ನಷ್ಟಕ್ಕಾಗಿ ಕ್ರಿಯೇಟರ್‌ಗಳ ಜೊತೆ ಕೆಲಸ ಮಾಡುವುದಕ್ಕೆ ಎಲ್ಲ ವಿಧದ ಮತ್ತು ಗಾತ್ರದ ವ್ಯವಹಾರಗಳು ಹೆಚ್ಚು ಹೆಚ್ಚು ಆಸಕ್ತಿ ತೋರಿಸುತ್ತಿವೆ.
ಕ್ರಿಯೇಟರ್ ಮಾರ್ಕೆಟ್‌ಪ್ಲೇಸ್ ವೈಶಿಷ್ಟ್ಯಗಳ ಗುಚ್ಛವಾಗಿದ್ದು, ಬ್ರ್ಯಾಂಡ್‌ಗಳು ಮತ್ತು ಕ್ರಿಯೇಟರ್‌ಗಳು ಪರಸ್ಪರ ಸಂಪರ್ಕಿಸಲು ಮತ್ತು ಸಹಯೋಗ ನೀಡಲು ಅವಕಾಶ ಕಲ್ಪಿಸುತ್ತದೆ. ಕ್ರಿಯೇಟರ್‌ಗಳು ತಮ್ಮ ಪ್ರತಿಭೆಯನ್ನು ಬಳಸಬಹುದು ಮತ್ತು ವ್ಯವಹಾರಗಳು ತಮ್ಮ ಕಥೆ ಹೇಳಲು ಮತ್ತು ಗುರಿಗಳನ್ನು ಪೂರೈಸಲು ಸಹಾಯ ಮಾಡುವುದಕ್ಕಾಗಿ ಅವರನ್ನು ಸಂಪರ್ಕಿಸಬಹುದು.
ಬಜೆಟ್, ಭಾಷೆ ಮತ್ತು ವಿಶೇಷತೆಗಳಂಥ ಫಿಲ್ಟರ್‌ಗಳನ್ನು ಬಳಸಿಕೊಂಡು ವ್ಯವಹಾರಗಳು ಪಾಲುದಾರರಿಗಾಗಿ ಹುಡುಕಾಟ ನಡೆಸುತ್ತವೆ. ಕ್ರಿಯೇಟರ್‌ಗಳು ತಮ್ಮ ಸ್ವಂತ ದರಗಳನ್ನು ನಿಗದಿ ಮಾಡುತ್ತಾರೆ ಮತ್ತು ಯಾವ ಪ್ರಾಜೆಕ್ಟ್‌ಗಳಲ್ಲಿ ತೊಡಗಿಕೊಳ್ಳಬೇಕು ಎನ್ನುವುದನ್ನು ನಿರ್ಧರಿಸುತ್ತಾರೆ.
CH_70_Reap_Rewards_Creator_Marketplace.jpg
ಸೇರುವುದು ಹೇಗೆ
ಅಗ್ರ ಲೆನ್ಸ್ ಕ್ರಿಯೇಟರ್‌ಗಳೊಂದಿಗೆ ಸಹಭಾಗಿತ್ವಕ್ಕಾಗಿ ವ್ಯವಹಾರಗಳಿಗೆ ಸಹಾಯ ಮಾಡುವುದರೊಂದಿಗೆ ಆರಂಭವಾಗಿರುವುದು ಕಾಲಕ್ರಮೇಣ ಇನ್ನಷ್ಟು ವಿಧಗಳ ಕ್ರಿಯೇಟರ್‌ಗಳನ್ನು ಸೇರಿಸಿಕೊಳ್ಳಲು ವಿಸ್ತರಣೆಯಾಗುತ್ತದೆ. ಒಂದು ವೇಳೆ ಮಾರ್ಕೆಟ್‌ಪ್ಲೇಸ್ ಸೇರಲು ನಿಮ್ಮನ್ನು ಆಯ್ಕೆ ಮಾಡಿದ್ದರೆ, Snap ನಿಂದ ಯಾರಾದರೂ ನಿಮ್ಮನ್ನು ಸಂಪರ್ಕಿಸುತ್ತಾರೆ.
ಒಟ್ಟಾರೆಯಾಗಿ ಇದು ಸಮತೋಲನದ ಕುರಿತಾಗಿದೆ. ಪರಿಶೀಲಿಸಲ್ಪಟ್ಟ, ಉನ್ನತ ಗುಣಮಟ್ಟದ ಬ್ರ್ಯಾಂಡ್‌ಗಳು ಮಾರ್ಕೆಟ್‌ಪ್ಲೇಸ್‌ಗೆ ಸೇರುವುದು ಮುಂದುವರಿಯುತ್ತಿದ್ದಂತೆ Snap ಇನ್ನಷ್ಟು ಕ್ರಿಯೇಟರ್‌ಗಳನ್ನು ಸಂಪರ್ಕಿಸಲಿದೆ.
ಆಹ್ವಾನ ಪಡೆಯಲು ಅತ್ಯುತ್ತಮ ವಿಧಾನ? ಸಾರ್ವಜನಿಕ ಪ್ರೊಫೈಲ್ ರಚಿಸಿ, ನಿಯಮಿತವಾಗಿ ಮನೋಹರವಾದ ಕಂಟೆಂಟ್ ಸೃಷ್ಟಿಸಿ, ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳಿ ಮತ್ತು Snap ಸ್ಟಾರ್ ಆಗಿ!
ಒಮ್ಮೆ ಮಾರ್ಕೆಟ್‌ಪ್ಲೇಸ್‌ಗೆ ಆಹ್ವಾನ ಪಡೆದ ಬಳಿಕ, ನೀವು ಪೋರ್ಟ್‌ಫೋಲಿಯೋ ಸೃಷ್ಟಿಸುತ್ತೀರಿ. ನಿಮ್ಮ ಸೃಜನಶೀಲತೆಯನ್ನು ಅತ್ಯುತ್ತಮವಾಗಿ ಪ್ರದರ್ಶಿಸುತ್ತದೆ ಎಂದು ನೀವು ಭಾವಿಸುವ ಲೆನ್ಸ್‌ಗಳು ಮತ್ತು ವೀಡಿಯೊಗಳನ್ನು ಹೈಲೈಟ್ ಮಾಡಲು ಇಲ್ಲಿ ನಿಮಗೆ ಅವಕಾಶ ಸಿಗುತ್ತದೆ.
ಸಲಹೆಗಳು
  • ಪ್ರೇಕ್ಷಕರು ಒಳನೋಟಗಳನ್ನು (ಜನಸಂಖ್ಯಾತ್ಮಕ ವಿವರ, ತಲುಪುವಿಕೆ ಇತ್ಯಾದಿ) ಹಂಚಿಕೊಳ್ಳುವುದನ್ನು ಆಯ್ಕೆ ಮಾಡಿ, ಇದರಿಂದ ಬ್ರ್ಯಾಂಡ್‌ಗಳು ನಿಮ್ಮ ಮತ್ತು ನಿಮ್ಮ ಅಭಿಮಾನಿಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಬಹುದು. ಒಂದು ವೇಳೆ ಪ್ರೇಕ್ಷಕರು ಒಳನೋಟಗಳನ್ನು ನೀವು ಆನ್ ಮಾಡಿದ್ದರೆ ಬ್ರ್ಯಾಂಡ್‌ಗಳು ನಿಮ್ಮೊಂದಿಗೆ ಸಹಭಾಗಿತ್ವ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ, ಆದರೆ ಏನನ್ನು ಹಂಚಿಕೊಳ್ಳಬೇಕು ಎನ್ನುವುದನ್ನು ನೀವು ಆಯ್ಕೆ ಮಾಡುತ್ತೀರಿ ಎಂದು ನೆನಪಿಟ್ಟುಕೊಳ್ಳಿ.
  • ಕ್ರಿಯೇಟರ್ ಮಾರ್ಕೆಟ್‌ಪ್ಲೇಸ್‌ನಲ್ಲಿ ಪಾಲ್ಗೊಳ್ಳುವ ಮೂಲಕ, ವ್ಯವಹಾರಗಳಿಗೆ ನಿಮ್ಮನ್ನು ನೇರವಾಗಿ ಸಂಪರ್ಕಿಸಲು ಸಾಧ್ಯವಾಗುತ್ತದೆ, ಆದ್ದರಿಂದ ವಿಶಾಲ ಪ್ರೇಕ್ಷಕರಿಗೆ ನಿಮ್ಮ ಇಮೇಲ್ ವಿಳಾಸ ಒದಗಿಸಲು ನೀವು ಹಿಂಜರಿಯಬಾರದು.
  • ನಿಮ್ಮ ಇಮೇಲ್ ಅನ್ನು ನಿಯಮಿತವಾಗಿ ಪರಿಶೀಲಿಸಿ. ಚಿಂತನಶೀಲ, ಗ್ರಹಿಸುವ ಮನಸ್ಥಿತಿ ಮತ್ತು ತ್ವರಿತವಾಗಿ ಪ್ರತಿಕ್ರಿಯಿಸುವವರಾಗಿ!
  • ಲೆನ್ಸ್ ಅಥವಾ ವೀಡಿಯೊ ಹೈಲೈಟ್ ಮಾಡುವಾಗ ಹಿಂದಿನ ಬ್ರ್ಯಾಂಡ್‌ ಡೀಲ್‌ಗಳನ್ನು ಪ್ರದರ್ಶಿಸಿ.