ವಿಶ್ಲೇಷಣೆಗಳನ್ನು ತೆರೆದು ನೋಡಿ ಮತ್ತು ನಿಮ್ಮ ಪ್ರೇಕ್ಷಕರೊಂದಿಗೆ ತೊಡಗಿಕೊಳ್ಳಿ
ನಿಮ್ಮ ಅಭಿಮಾನಿಗಳ ಆಸಕ್ತಿಗೆ ಯಾವ ಕಂಟೆಂಟ್ ಸೂಕ್ತವಾಗಿದೆ ಎನ್ನುವುದನ್ನು ಇನ್ನಷ್ಟು ಉತ್ತಮವಾಗಿ ಅರ್ಥಮಾಡಿಕೊಳ್ಳಲು ಕ್ರಿಯೇಟಿವ್ ಆಯ್ಕೆಗಳ ಮಾಹಿತಿ ನೀಡುವ ಮೂಲಕ ವಿಶ್ಲೇಷಣೆಗಳು ಸಹಾಯ ಮಾಡುತ್ತವೆ.
ಗಮನಿಸಿ: ಈ ವೈಶಿಷ್ಟ್ಯಗಳು ನಿರಂತರ ಮತ್ತು ಸ್ವಯಂಚಾಲಿತ ಆಧಾರದಲ್ಲಿ ಕಾಲಾನುಸಾರ ಬಿಡುಗಡೆಯಾಗುತ್ತವೆ ಮತ್ತು ಎಲ್ಲ Snapchatter ಗಳಿಗೆ ಲಭ್ಯವಿಲ್ಲ.
ಒಳನೋಟಗಳು ಮತ್ತು ಚಟುವಟಿಕೆ
ನಿಮ್ಮ ಪ್ರೇಕ್ಷಕರ ಕುರಿತು ಇನ್ನಷ್ಟು ತಿಳಿದುಕೊಳ್ಳಲು 'ಒಳನೋಟಗಳು' ಟ್ಯಾಬ್‌ಗೆ ಹೋಗಿ.
ಇತ್ತೀಚಿನ ಕಥೆಗಳು ಮತ್ತು 28 ದಿನದ ಸಾರಾಂಶ
'ಇತ್ತೀಚಿನವು' ಇದರಲ್ಲಿ ಪ್ರತಿ ಕಥೆಯ ಟೈಲ್ ವ್ಯಾಪ್ತಿ (ವಿಶಿಷ್ಟ ವೀಕ್ಷಕರು) ಮತ್ತು ಕಥೆಯಲ್ಲಿ ಇರುವ Snap ಗಳ ಸಂಖ್ಯೆಯನ್ನು ತೋರಿಸುತ್ತದೆ. ವೀಕ್ಷಣೆಗಳು, ವ್ಯಾಪ್ತಿ, ಸ್ಕ್ರೀನ್‌ಶಾಟ್‌ಗಳು, ಸ್ವೈಪ್-ಅಪ್‌ಗಳು ಮತ್ತು ಪ್ರತಿ Snap ಗೆ ಸಂವಾದಗಳನ್ನು ನೋಡಲು ಕಥೆಯ ಟೈಲ್ ಅನ್ನು ಟ್ಯಾಪ್ ಮಾಡಿ. ನಿಮ್ಮ ಇತ್ತೀಚಿನ ಟ್ರೆಂಡ್‌ಗಳನ್ನು ನೋಡಲು '28 ದಿನದ ಸಾರಾಂಶ' ವನ್ನು ಪರಿಶೀಲಿಸಿ.
ಕಥೆ ಒಳನೋಟಗಳು
ಇನ್ನಷ್ಟು ವಿಸ್ತೃತ ವಿವರಕ್ಕಾಗಿ 'ಇನ್ನಷ್ಟು ನೋಡಿ' ಅನ್ನು ಟ್ಯಾಪ್ ಮಾಡಿ. ಒಳನೋಟಗಳಲ್ಲಿ, 7 ರಿಂದ 28 ದಿನಗಳಲ್ಲಿ ನಿಮ್ಮ ತೊಡಗಿಕೊಳ್ಳುವಿಕೆಯ ಗ್ರಾಫ್ ನೋಡಲು ನೀವು ಯಾವುದೇ ಅಂಕಿಅಂಶದ ಮೇಲೆ ಟ್ಯಾಪ್ ಮಾಡಬಹುದು.
24 ಗಂಟೆಗಳ ಸಮಯ ಚೌಕಟ್ಟು ಆಧರಿಸಿ ಹಿಂದಿನ ನಿಮ್ಮ ಎಲ್ಲ Snap ಗಳನ್ನು ಗುಂಪುಗೂಡಿಸಲಾಗುತ್ತದೆ. ನೀವು ಮೆಟ್ರಿಕ್ (ವ್ಯಾಪ್ತಿ, ಕಥೆ ವೀಕ್ಷಣೆಗಳು, ಕಥೆ ವೀಕ್ಷಣೆಯ ಪ್ರತಿಶತ ಮತ್ತು ಸರಾಸರಿ ವೀಕ್ಷಣೆ ಸಮಯ) ಮೂಲಕ ಫಿಲ್ಟರ್ ಮಾಡಬಹುದು.
ಪ್ರೇಕ್ಷಕರು
ನೀವು ಎಷ್ಟು ಚಂದಾದಾರರನ್ನು ಹೊಂದಿದ್ದೀರಿ? ಇಲ್ಲಿ ನೀವು ಕಳೆದ 28 ದಿನಗಳಲ್ಲಿ ನಿಮ್ಮ ಕಥೆ ಪ್ರೇಕ್ಷಕರ ಲಿಂಗಾನುಪಾತ ವಿವರ, ಅಗ್ರ ಸ್ಥಳ ಮತ್ತು ಅಗ್ರ ಆಸಕ್ತಿಗಳನ್ನು ಕಾಣಬಹುದು.
Snapchat ನ ಜೀವನಶೈಲಿ ಕೆಟಗರಿಗಳೊಂದಿಗೆ ನಿಮ್ಮ ತೊಡಗಿಕೊಂಡಿರುವ ಪ್ರೇಕ್ಷಕರ ಆಸಕ್ತಿಗಳ ಕುರಿತು ಇನ್ನಷ್ಟು ತಿಳಿದುಕೊಳ್ಳಲು 'ಇನ್ನಷ್ಟು ನೋಡಿ' ಅನ್ನು ಟ್ಯಾಪ್ ಮಾಡಿ. ವಯಸ್ಸು, ಲಿಂಗ, ಕೆಟಗರಿ ಮತ್ತು ಸ್ಥಳದ ಮೂಲಕ ಮಾಹಿತಿಯನ್ನು ಹೋಲಿಕೆ ಮಾಡಿ.
ಚಟುವಟಿಕೆ
ನೀವು ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ನಿಯೋಜಿಸಿರುವ ಯಾವುದೇ ಪಾತ್ರಗಳ ಪೋಸ್ಟ್ ಮಾಡುವಿಕೆ ಚಟುವಟಿಕೆಯನ್ನು ಟ್ರ್ಯಾಕ್ ಮಾಡಲು ಚಟುವಟಿಕೆ ಟ್ಯಾಬ್ ನಿಮಗೆ ಅವಕಾಶ ಕಲ್ಪಿಸುತ್ತದೆ.
ನಿಮ್ಮ ಪ್ರೇಕ್ಷಕರೊಂದಿಗೆ ಸಂವಾದ ನಡೆಸಿ
ಕಥೆ ಪ್ರತ್ಯುತ್ತರಗಳು ಮತ್ತು ಉಲ್ಲೇಖಿಸುವುದನ್ನು ಬಳಸಿಕೊಂಡು ಬೃಹತ್ ಪ್ರಮಾಣದ ಮತ್ತು ತೊಡಗಿಕೊಂಡ ಪ್ರೇಕ್ಷಕರನ್ನು ತಲುಪಲು Snapchat ನಿಮಗೆ ಸಾಧ್ಯವಾಗಿಸುತ್ತದೆ.
ಕಥೆ ಪ್ರತ್ಯುತ್ತರಗಳು
ಕಸ್ಟಮ್ ಫಿಲ್ಟರಿಂಗ್‌ನೊಂದಿಗೆ ಕ್ರಿಯೇಟರ್‌ಗಳು ಸ್ವೀಕರಿಸುವ ಸಂದೇಶಗಳ ವಿಧಗಳ ಮೇಲೆ ಅವರಿಗೆ ನಿಯಂತ್ರಣವನ್ನು ನೀಡುತ್ತೇವೆ, ಇದರಿಂದಾಗಿ ಸಂಭಾಷಣೆಗಳು ಗೌರವಯುತ ಮತ್ತು ವಿನೋದಮಯವಾಗಿ ಇರುತ್ತವೆ.
ಕಥೆ ಪ್ರತ್ಯುತ್ತರಗಳನ್ನು ವೀಕ್ಷಿಸಲು...
  1. ನಿಮ್ಮ ಸಾರ್ವಜನಿಕ ಕಥೆ ಟ್ಯಾಪ್ ಮಾಡಿ
  2. ಒಳನೋಟಗಳು ಮತ್ತು ಪ್ರತ್ಯುತ್ತರಗಳನ್ನು ನೋಡಲು ಮೇಲಕ್ಕೆ ಸ್ಪೈಪ್ ಮಾಡಿ
  3. ಪೂರ್ಣ ಸಂದೇಶವನ್ನು ನೋಡಲು ಮತ್ತು ಮರಳಿ ಪ್ರತ್ಯುತ್ತರಿಸಲು ಪ್ರತ್ಯುತ್ತರದ ಮೇಲೆ ಟ್ಯಾಪ್ ಮಾಡಿ
  4. ಇತರ Snap ಗಳನ್ನು ನೋಡಲು ಸ್ಪೈಪ್ ಮಾಡಿ ಅಥವಾ ಥಂಬ್‌ನೇಲ್‌ಗಳನ್ನು ಟ್ಯಾಪ್ ಮಾಡಿ. Snap ಅನ್ನು ಪೂರ್ಣ ಸ್ಕ್ರೀನ್‌ನಲ್ಲಿ ನೋಡಲು ಕೆಳಕ್ಕೆ ಸ್ಪೈಪ್ ಮಾಡಿ 👇
ಉಲ್ಲೇಖಿಸುವುದು
ಉಲ್ಲೇಖಿಸುವುದರಿಂದ ನಿಮ್ಮ ಸಾರ್ವಜನಿಕ ಕಥೆಗೆ ಸಬ್‌ಸ್ಕ್ರೈಬರ್ ಅವರ ಪ್ರತ್ಯುತ್ತರವನ್ನು ಹಂಚಿಕೊಳ್ಳುವುದು ಸುಲಭವಾಗುತ್ತದೆ ಮತ್ತು ನೀವು ಅಭಿಮಾನಿಗಳನ್ನು ಉಲ್ಲೇಖ ಮಾಡಿದಾಗ ಸೂಚನೆ ಪಡೆಯಲು ಅವರು ಉತ್ಸಾಹಿತರಾಗಿರುತ್ತಾರೆ. ನಿಮಗೆ ಪ್ರಶ್ನೆಗಳನ್ನು ಕಳುಹಿಸುವಂತೆ ನಿಮ್ಮ ಪ್ರೇಕ್ಷಕರನ್ನು ಕೇಳಿ ಮತ್ತು ತಕ್ಷಣವೇ ಉತ್ತರಿಸಿ! ಅಥವಾ ನೀವು ಅವರಿಗೆ "ನೀವು ಯಾವ ಬಗೆಯ ಕಂಟೆಂಟ್ ಅನ್ನು ಹೆಚ್ಚು ನೋಡಲು ಬಯಸುತ್ತೀರಿ?" ಎನ್ನುವಂಥ ಪ್ರಶ್ನೆಗಳನ್ನು ಕೇಳಬಹುದು
 
ಪ್ರತ್ಯುತ್ತರವನ್ನು ಉಲ್ಲೇಖ ಮಾಡಲು...
  1. ನಿಮ್ಮ ಸಾರ್ವಜನಿಕ ಕಥೆಗೆ ನೀವು ಹಂಚಿಕೊಳ್ಳಲು ಬಯಸುವ ಪ್ರತ್ಯುತ್ತರದ ಬಲ ಭಾಗದಲ್ಲಿ ಇರುವ ಉಲ್ಲೇಖ ಬಟನ್ ಅನ್ನು ಟ್ಯಾಪ್ ಮಾಡಿ
  2. ಪ್ರತ್ಯುತ್ತರವು ಕ್ಯಾಮೆರಾ ಸ್ಕ್ರೀನ್‌ ಮೇಲೆ ಸ್ಟಿಕ್ಕರ್ ರೂಪದಲ್ಲಿ ಕಾಣಿಸುತ್ತದೆ. ನಿಮ್ಮ ಪ್ರತಿಕ್ರಿಯೆ ಅಥವಾ ಅಭಿಪ್ರಾಯವನ್ನು ಹಂಚಿಕೊಳ್ಳಲು Snap ತೆಗೆದುಕೊಳ್ಳಿ.
  3. ನಿಮ್ಮ ಸಾರ್ವಜನಿಕ ಕಥೆಗೆ ಸೇರಿಸಲು 'ಕಳುಹಿಸು' ಅನ್ನು ಟ್ಯಾಪ್ ಮಾಡಿ.
 
ವೇದಿಕೆಯಾಚೆ ಕಂಟೆಂಟ್ ಹಂಚಿಕೊಳ್ಳಿ
ಸುಲಭವಾಗಿ ಹಂಚಿಕೊಳ್ಳಬಹುದಾದ ಲಿಂಕ್‌ಗಳ ಮೂಲಕ Snapchatter ಗಳು - ಸ್ಪಾಟ್‌ಲೈಟ್‌ Snap ಗಳು , Snap ಒರಿಜಿನಲ್ಸ್ ಅಥವಾ ಪ್ರದರ್ಶನಗಳು ಕಂಟೆಂಟ್ ಹಂಚಿಕೊಳ್ಳಬಹುದು.