ನಿಮ್ಮ ಕಂಟೆಮಟ್ ಕಾರ್ಯನೀತಿಯನ್ನು ಅಭಿವೃದ್ಧಿಪಡಿಸಿ

ಈ ಆವಶ್ಯಕ ಕಾರ್ಯತಂತ್ರಗಳು ನಿಮ್ಮ ಕಂಟೆಂಟ್ ತೊಡಗಿಸಿಕೊಳ್ಳಲು ಮತ್ತು ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸಲು ಸಹಾಯ ಮಾಡಬಲ್ಲವು!

ಸ್ವಂತಿಕೆ ಇರಲಿ

Snapchat ಅನ್ನುವುದು ನಿಮ್ಮ ದಿನದ ಅತ್ಯುತ್ತಮ ಭಾಗದಿಂದ ನಡುವಿನ ಕ್ಷುಲ್ಲಕ ಕ್ಷಣಗಳವರೆಗೆ ನಿಮ್ಮ ಸಮಗ್ರ ಕಥೆಯನ್ನು ಹೇಳುವ ತಾಣವಾಗಿದೆ. ಪ್ರೇಕ್ಷಕರು ನಿಮ್ಮ ಅಸಲಿ ವ್ಯಕ್ತಿತ್ವ ತಿಳಿಯಲು ಬಯಸುತ್ತಾರೆ, ಭ್ರಮೆ ಹುಟ್ಟಿಸುವ ಸಂಗತಿಯನ್ನಲ್ಲ.

ಪ್ರಚಾರ ಪೋಸ್ಟ್‌ಗಳ ನಡುವೆ ದಿನದ ಬದುಕು, ಆ ಕ್ಷಣದ ಸಂಗತಿಗಳನ್ನು ಒದಗಿಸುವ ಮೂಲಕ ನಿಮ್ಮ ಕಥೆ ಫೀಡ್ ಅನ್ನು ಸಮತೋಲಿತವಾಗಿ ಇರಿಸಿ. ನೀವು ಯಾವುದರ ಬಗ್ಗೆ ಕಾಳಜಿ ಮಾಡುತ್ತೀರಿ ಎಂದು ತಿಳಿದುಕೊಳ್ಳಲು ನಿಮ್ಮ ಅಭಿಮಾನಿಗಳು ಬಯಸುತ್ತಾರೆ, ಆದ್ದರಿಂದ ಕಂಟೆಂಟ್ ಅನ್ನು ಪ್ರಚಾರ ಮಾಡುವಾಗಲೂ ಸಹ, ಅದನ್ನು ನೈಜವಾಗಿ ಇರಿಸಿ.

ಉತ್ಪನ್ನಗಳನ್ನು ಪ್ರಚಾರ ಮಾಡುವಾಗ, ಪ್ರೋತ್ಸಾಹಕ ರೂಪದಲ್ಲಿ ನಿಮ್ಮ ಪ್ರೇಕ್ಷಕರಿಗೆ ಕೂಪನ್ ನೀಡಿ ಮತ್ತು ತೊಡಗಿಸಿಕೊಳ್ಳಲು ಅವರಿಗೆ ಒಂದು ಮಾರ್ಗ ಒದಗಿಸಿ - ಉದಾಹರಣೆಗೆ ಸೆಲ್ಫಿ ಪೋಸ್ಟ್ ಮಾಡುವುದು.

ಪ್ರತಿಕ್ರಿಯೆಗೆ ಮುಕ್ತರಾಗಿರಿ

ಗಟ್ಟಿಯಾದ ಸಂಬಂಧಗಳನ್ನು ನಿರ್ಮಿಸಿಕೊಳ್ಳಲು ಅಭಿಮಾನಿಗಳೊಂದಿಗೆ ಸಂವಹನ ಮಾಡಿ. ಅವರೊಂದಿಗೆ ಮಾತುಕತೆ ನಡೆಸಿ ಮತ್ತು ಅವರು ಏನನ್ನು ನೋಡಲು ಆಸಕ್ತರಾಗಿದ್ದಾರೆ ಎಂದು ತಿಳಿದುಕೊಳ್ಳಿ.

ಉದಾಹರಣೆಗೆ, ನೀವು ಕುಂಬಾರಿಕೆಯನ್ನು ಮಾಡುತ್ತಿರಬಹುದು, ಆದರೆ ನಿಮ್ಮ ಅಭಿಮಾನಿಗಳು ನಿಮ್ಮ ಉಡುಪುಗಳ ಆಯ್ಕೆಯ ಬಗ್ಗೆ ಕೇಳಬಹುದು. ಆ ಕುರಿತು ತಿಳಿದುಕೊಳ್ಳಿ. ಮಿಶ್ರಣಕ್ಕೆ ಫ್ಯಾಶನ್ ಸೇರಿಸಿ.

ನಿಯಮಿತವಾಗಿ ಪೋಸ್ಟ್ ಮಾಡಿ

ಸಾವಿರಾರು Snapchatter ಗಳು ಆ್ಯಪ್ ಅನ್ನು ಪ್ರತಿದಿನ ಬಳಸುತ್ತಾರೆ! ನಿಮ್ಮ ಪ್ರೇಕ್ಷಕರನ್ನು ರೋಮಾಂಚಿತರನ್ನಾಗಿ ಇರಿಸಿ ಮತ್ತು ಅವರು ಇನ್ನಷ್ಟನ್ನು ನೋಡಲು ಹಿಂತಿರುಗಿ ಬರುವಂತೆ ಮಾಡಿ.

ಕೇವಲ ಫೋಟೋಗಳ ಬದಲಾಗಿ ವೀಡಿಯೊ ಆಧಾರಿತ ಕಥೆಗಳನ್ನು ಮಾಡುವುದು ಉತ್ತಮ. ನಿಮ್ಮ ಕಂಟೆಂಟ್ ನೋಡಲು ಜನರು ಸಹಜವಾಗಿ ಹೆಚ್ಚು ಸಮಯ ವ್ಯಯಿಸುತ್ತಾರೆ. ನಿಮ್ಮ ಕಂಟೆಂಟ್ ಇನ್ನಷ್ಟು ಮನೋಹರವಾಗುವಂತೆ ಮಾಡಲು Snap ನ ಕ್ರಿಯೇಟಿವ್ ಕ್ಯಾಮೆರಾ ಮತ್ತು ಎಡಿಟಿಂಗ್‌ ಟೂಲ್‌ಗಳನ್ನು ಬಳಸಿ.

ಸ್ಥಳೀಯ ಕಂಟೆಂಟ್ ಅತ್ಯುತ್ತಮ

ಸ್ಥಳೀಯ Snapchat ಕ್ಯಾಮೆರಾ ಬಳಸಿಕೊಂಡು Snapchat ಗೆ ಸ್ಥಳೀಯವಾಗಿರುವ ಕಂಟೆಂಟ್ ಅನ್ನು ಸೃಷ್ಟಿಸಿ. ಇದು, ಇತರ ವೇದಿಕೆಗಳಿಂದ ನಕಲು ಮಾಡಿದಂತೆ ಕಾಣಿಸುವುದರ ಬದಲಾಗಿ, ಅಧಿಕೃತ, ಆ ಕ್ಷಣದಲ್ಲಿರುವ, ವೈಯಕ್ತಿಕ ಎನಿಸುವ ಭಾವವನ್ನು ಉಂಟುಮಾಡಲು ಸಹಾಯ ಮಾಡುತ್ತದೆ.

ಕ್ರಿಯೇಟರ್‌ಗಳು ಹಲವಾರು ವಿಷಯಗಳಲ್ಲಿ ಮಗ್ನರಾಗಿರುತ್ತಾರೆ ಮತ್ತು ಹಲವು ವೇದಿಕೆಗಳಲ್ಲಿ ಕೆಲಸ ಮಾಡುತ್ತಿರಬಹುದು. Snapchat ನಲ್ಲಿನ ನಿಮ್ಮ ಕಂಟೆಂಟ್ ನೀವು ಇನ್ನೊಂದು ವೇದಿಕೆಯಲ್ಲಿ ಪೋಸ್ಟ್ ಮಾಡುತ್ತಿರುವುದರ ಹಾಗೆಯೇ ಇದೆ ಎಂದು ಅನಿಸದಿರುವಂತೆ ಖಚಿತಪಡಿಸಿಕೊಳ್ಳಿ. ಕಂಟೆಂಟ್ ಅನನ್ಯ ಎನ್ನುವ ಭಾವ ಮೂಡಿಸಬೇಕು. ಇಣುಕು ನೋಟದ ಕಂಟೆಂಟ್ ನಿಜಕ್ಕೂ ಉತ್ತಮ ವೀಕ್ಷಣೆ ಪಡೆಯುತ್ತದೆ. ನಿಮ್ಮ ಪ್ರೊಫೈಲ್ ಪತ್ತೆ ಮಾಡಲು ಜನರಿಗೆ ಸಹಾಯ ಮಾಡುವುದಕ್ಕಾಗಿ ಇತರ ವೇದಿಕೆಗಳಲ್ಲಿ ನಿಮ್ಮ Snap ಬಳಕೆದಾರರ ಹೆಸರನ್ನು ಹಂಚಿಕೊಳ್ಳುವುದು ಕೂಡ ಅದ್ಭುತ ವಿಚಾರ.

ಯಾವುದು ಟ್ರೆಂಡಿಂಗ್‌ನಲ್ಲಿದೆ ಎನ್ನುವುದರ ಮೇಲೆ ಗಮನ ಹರಿಸಿ

ಉದ್ದೇಶಿತ ಪ್ರೇಕ್ಷಕರಿಗೆ ನಿಮ್ಮನ್ನು ಚಿರಪರಿಚಿರಾಗಿಸಿಕೊಳ್ಳಲು ಪ್ರಸ್ತುತ ಟ್ರೆಂಡ್‌ಗಳ ಮೇಲೆ ಗಮನ ಹರಿಸಿ.

ಇತರ ಕ್ರಿಯೇಟರ್‌ಗಳೊಂದಿಗೆ ಸಹಯೋಗ ಮಾಡಿ

ಇನ್ನಷ್ಟು ಜನರನ್ನು ತಲುಪುವುದಕ್ಕಾಗಿ ನಿಮ್ಮ ನೆಲೆಯೊಳಗೆ ಕ್ರಿಯೇಟರ್‌ಗಳೊಂದಿಗೆ ಕೈಜೋಡಿಸಿ.