ನಿಮ್ಮ ವಿಷಯವನ್ನು ಹಂಚಿಕೊಳ್ಳುವ ವಿಧಾನಗಳು
Snapchat ನಲ್ಲಿ ನಿಮ್ಮ ವಿಷಯಗಳನ್ನು ಹಂಚಿಕೊಳ್ಳುವುದಕ್ಕೆ ಹಲವಾರು ವಿಧಾನಗಳಿವೆ, ಒಬ್ಬ ಸ್ನೇಹಿತರೊಂದಿಗೆ , ಆಯ್ದ ಗುಂಪಿನೊಂದಿಗೆ, ನಿಮ್ಮ ಅನುಯಾಯಿಗಳೊಂದಿಗೆ ಅಥವಾ ವಿಶಾಲ Snapchat ಸಮುದಾಯದೊಂದಿಗೆ ಹಂಚಿಕೊಳ್ಳುವುದಾಗಿರಬಹುದು. Snapchat ನಲ್ಲಿ ಹಂಚಿಕೊಂಡ ಎಲ್ಲ ವಿಷಯ Snapchat ಕಮ್ಯುನಿಟಿ ಮಾರ್ಗಸೂಚಿಗಳು ಮತ್ತು ವಿಷಯ ಮಾರ್ಗಸೂಚಿಗಳಿಗೆ ಅನುಸರಣೆ ಹೊಂದಿರಬೇಕು.
ಸ್ನೇಹಿತರಿಗಾಗಿ ನನ್ನ ಕಥೆ
ನಿಮ್ಮ ದೈನಂದಿನ ಬದುಕಿನ ಕ್ಷಣಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಲು ಅವಕಾಶ ಕಲ್ಪಿಸುವುದಕ್ಕಾಗಿ Snapchat ಮೊದಲು 2013 ರಲ್ಲಿ ಕಥೆಗಳು ಅನ್ನು ಆರಂಭಿಸಿತು. ನನ್ನ ಕಥೆ ನಿಮ್ಮ ಆತ್ಮೀಯ ಸ್ನೇಹಿತರಿಗಾಗಿ ಇದೆ (ನಿಮ್ಮನ್ನು ಮರಳಿ ಸೇರಿಸಿದವರು). ಸೆಟ್ಟಿಂಗ್ಸ್ಗಳ, "ಗೌಪ್ಯತೆ ನಿಯಂತ್ರಣಗಳು" ವಿಭಾಗದಲ್ಲಿ "ನನ್ನ ಕಥೆ ವೀಕ್ಷಿಸಿ" ಯನ್ನು "ನನ್ನ ಸ್ನೇಹಿತರು" ಅಥವಾ "ಕಸ್ಟಮ್‌" ಗೆ ಹೊಂದಿಸಿ. ನಿಮ್ಮ "ನನ್ನ ಕಥೆ"ಯನ್ನು ನೋಡದಂತೆ ಕೆಲವು ಸ್ನೇಹಿತರನ್ನು ಹೊರತುಪಡಿಸಲು "ಕಸ್ಟಮ್" ನಿಮಗೆ ಅನುವು ಮಾಡಿಕೊಡುತ್ತದೆ.
ಸಾರ್ವಜನಿಕ ಕಥೆ
ನಿಮ್ಮ ಸಾರ್ವಜನಿಕ "ನನ್ನ ಕಥೆ" ನಿಮ್ಮ ಫಾಲೋವರ್‌ಗಳೊಂದಿಗೆ ಮತ್ತು ವಿಶಾಲವಾದ Snapchat ಸಮುದಾಯದೊಂದಿಗೆ ನೀವು ನಿಮ್ಮ ವಿಷಯ ಹಂಚಿಕೊಳ್ಳುವ ವಿಧಾನವಾಗಿದೆ. ಸಾರ್ವಜನಿಕ ಕಥೆಗಳು ನೇರವಾಗಿ ನಿಮ್ಮ ನೈಜ ಸ್ನೇಹಿತರು ಮತ್ತು ಫಾಲೋವರ್‌ಗಳಿಗೆ ಹೋಗುತ್ತವೆ. ನಿಮ್ಮ ಸ್ನೇಹಿತರು (ನಿಮ್ಮನ್ನು ಮರಳಿ ಸೇರಿಸಿದ ಜನರು) ಕಥೆಗಳ ಪುಟದ ಸ್ನೇಹಿತರ ವಿಭಾಗದಲ್ಲಿ ನಿಮ್ಮ ಸಾರ್ವಜನಿಕ ಕಥೆಗಳನ್ನು ನೋಡುತ್ತಾರೆ ಮತ್ತು ನಿಮ್ಮ ಫಾಲೋವರ್‌ಗಳು (ನಿಮ್ಮನ್ನು ಸೇರಿಸಿದ ಆದರೆ ನೀವು ಅವರನ್ನು ಮರಳಿ ಸೇರಿಸದೆ ಇರುವ ಜನರು) ಕಥೆಗಳ ಪುಟದ "ಫಾಲೋವಿಂಗ್" ವಿಭಾಗದಲ್ಲಿ ನಿಮ್ಮ ಸಾರ್ವಜನಿಕ ಕಥೆಗಳನ್ನು ನೋಡುತ್ತಾರೆ. ನೀವು ಬೃಹತ್ ಮೊತ್ತದ ಪ್ರೇಕ್ಷಕರನ್ನು ನಿರ್ಮಿಸಿದರೆ, ಕಥೆಗಳ ಪುಟದಲ್ಲಿ ವಿತರಣೆಗೆ ನಿಮ್ಮ ಸಾರ್ವಜನಿಕ ಕಥೆಗಳು ಅರ್ಹವಾಗಬಹುದು. ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ಭೇಟಿ ನೀಡುವ ಯಾವುದೇ Snapchatter ಕೂಡ ಸಾರ್ವಜನಿಕ ಕಥೆಗಳನ್ನು ನೋಡಬಹುದು.
ಸ್ಪಾಟ್‌ಲೈಟ್‌
ನಿಮ್ಮ ಸ್ನೇಹಿತರು ಮತ್ತು ಫಾಲೋವರ್‌ಗಳ ಆಚೆಗಿನ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ನಿಮ್ಮ Snap ಗಳನ್ನು ಸ್ಪಾಟ್‌ಲೈಟ್‌ಗೆ ಸಲ್ಲಿಸಿ. ಸ್ಪಾಟ್‌ಲೈಟ್‌ನಲ್ಲಿ ನಿಮ್ಮ ಕಂಟೆಂಟ್ ಹಂಚಿಕೊಳ್ಳುವುದು ಹೊಸ ಪ್ರೇಕ್ಷಕರಿಂದ ಕಂಡುಹಿಡಿಯಲ್ಪಡುವುದಕ್ಕೆ ಮತ್ತು ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುವುದಕ್ಕೆ ಒಂದು ಅವಕಾಶವಾಗಿದೆ! ಸ್ಪಾಟ್‌ಲೈಟ್‌ಗೆ ನಿಮ್ಮ Snap ಗಳನ್ನು ಸಲ್ಲಿಸುವಾಗ "ಸಾರ್ವಜನಿಕ ಪ್ರೊಫೈಲ್‌ನಲ್ಲಿ Snap ತೋರಿಸಿ" ಅನ್ನು ಟಾಗಲ್ ಮಾಡಿ ಆನ್ ಮಾಡುವ ಮೂಲಕ ಕೂಡ ನೀವು ನಿಮ್ಮ ಮೆಚ್ಚಿನ ಸ್ಪಾಟ್‌ಲೈಟ್‌ಗಳನ್ನು ನೇರವಾಗಿ ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ಉಳಿಸಬಹುದು.
Snap ಮ್ಯಾಪ್
Snap ಮ್ಯಾಪ್ ನಿಮ್ಮ ವೈಯಕ್ತಿಕ ಮ್ಯಾಪ್ ಆಗಿದ್ದು, ಇಲ್ಲಿ ನೀವು ನಿಮ್ಮ ಸ್ಥಳದಿಂದ Snap ಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬಹುದು ಮತ್ತು ಜಗತ್ತಿನಾದ್ಯಂತ ರಚಿಸಲಾಗುತ್ತಿರುವ ಕಂಟೆಂಟ್ ಅನ್ನು ವೀಕ್ಷಿಸಬಹುದು.
ನೀವು ಸಾರ್ವಜನಿಕ ಪ್ರೊಫೈಲ್ ಹೊಂದಿದ್ದರೆ, ನೀವು ಅನಾಮಧೇಯವಾಗಿ ಅಥವಾ ನಿಮ್ಮ ಹೆಸರನ್ನು ಲಗತ್ತಿಸುವುದರೊಂದಿಗೆ Snap ಮ್ಯಾಪ್‌ಗೆ Snap ಗಳನ್ನು ಸಲ್ಲಿಸಲು ಆಯ್ಕೆ ಮಾಡಬಹುದು. ನಿಮ್ಮ ಹೆಸರನ್ನು ಲಗತ್ತಿಸಿ Snap ಮ್ಯಾಪ್‌ಗೆ ನೀವು ಒಂದು Snap ಅನ್ನು ಹಂಚಿಕೊಂಡರೆ, ನಿಮ್ಮ Snap ಅನ್ನು ನೋಡುವ ಜನರು ನಿಮ್ಮನ್ನು ಫಾಲೋ ಮಾಡಬಹುದು ಮತ್ತು ನಿಮ್ಮ Snap ನಿಂದ ನೇರವಾಗಿ ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ಭೇಟಿ ನೀಡುವ ಮೂಲಕ ನಿಮ್ಮ ಇನ್ನಷ್ಟು ವಿಷಯವನ್ನು ಕಂಡುಹಿಡಿಯಬಹುದು.
ಸ್ಪಾಟ್‌ಲೈಟ್ ಅಥವಾ ನಿಮ್ಮ ಸಾರ್ವಜನಿಕ ಕಥೆಗೆ ಹಂಚಿಕೊಂಡ ಸ್ಥಳ ಟ್ಯಾಗ್‌ಗಳೊಂದಿಗಿನ Snap ಗಳು Snap ಮ್ಯಾಪ್‌ನಲ್ಲಿ ಸ್ಥಳ ಪ್ರೊಫೈಲ್‌ಗಳಲ್ಲಿ ಕಾಣಿಸುತ್ತವೆ.
ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ಕಥೆಗಳನ್ನು ಉಳಿಸಿ
ನನ್ನ ಸಾರ್ವಜನಿಕ ಪ್ರೊಫೈಲ್ → ‘ಕಥೆಗಳು’ ಎಂಬಲ್ಲಿಗೆ ಹೋಗಿ.
ಪ್ರೊಫೈಲ್ ನಿರ್ವಹಣೆ ವಿಭಾಗದಿಂದ, ನಿಮ್ಮ ಪ್ರೊಫೈಲ್ ಟ್ಯಾಪ್ ಮಾಡಿ, 'ಕಥೆಗಳು’ ಟ್ಯಾಬ್‌ಗೆ ಹೋಗಿ ಮತ್ತು ‘ನಿಮ್ಮ ಪ್ರೊಫೈಲ್‌ಗೆ ಒಂದು ಕಥೆ ಸೇರಿಸಿ’ ಅನ್ನು ಟ್ಯಾಪ್ ಮಾಡಿ.
ನಿಮ್ಮ ಕಥೆಯನ್ನು ಸೃಷ್ಟಿಸಿ
ನಿಮ್ಮ ಕಥೆಯನ್ನು ಸೃಷ್ಟಿಸಲು ಒಂದು ಅಥವಾ ಹೆಚ್ಚಿನ snap ಗಳನ್ನು ಹಂಚಿಕೊಳ್ಳಿ. ನೀವು ಈ ಹಿಂದೆ ಹಂಚಿಕೊಂಡ ಸಾರ್ವಜನಿಕ Snap ಗಳು, ನಿಮ್ಮ ನೆನಪುಗಳಿಂದ Snap ಗಳು ಅಥವಾ ಫೋಟೋಗಳು ಮತ್ತು ವೀಡಿಯೊಗಳನ್ನು ನಿಮ್ಮ ಕ್ಯಾಮೆರಾ ರೋಲ್‌ನಿಂದ ನೇರವಾಗಿ ಆಯ್ಕೆ ಮಾಡಬಹುದು. ನೀವು ಮುಗಿಸಿದಾಗ, 'ಸೇರಿಸಿ' ಟ್ಯಾಪ್ ಮಾಡಿ. ಒಂದು ಕಥೆ 100 Snap ಗಳವರೆಗೆ ಅಥವಾ ಒಟ್ಟು 5 ನಿಮಿಷಗಳ ಕಂಟೆಂಟ್‌—ಇವುಗಳಲ್ಲಿ ಯಾವುದನ್ನು ನೀವು ಮೊದಲು ತಲುಪುತ್ತೀರೋ ಅದನ್ನು ಒಳಗೊಳ್ಳಬಹುದು.
ನಿಮ್ಮ ಕಥೆಯನ್ನು ವಿಮರ್ಶಿಸಿ ಮತ್ತು ಎಡಿಟ್ ಮಾಡಿ.
ಇಡೀ ಕಥೆಯನ್ನು ಮುನ್ನೋಟ ಮಾಡಲು ಮತ್ತು ನಿಮ್ಮ ಪ್ರೇಕ್ಷಕರಿಗೆ ಅದು ಹೇಗೆ ಕಾಣಿಸುತ್ತದೆ ಎಂದು ನೋಡಲು ಒಂದು Snap, ಫೋಟೋ ಅಥವಾ ವೀಡಿಯೊವನ್ನು ಟ್ಯಾಪ್ ಮಾಡಿ. ಮೇಲ್ಭಾಗದ ಬಲಮೂಲೆಯಲ್ಲಿ 'ಎಡಿಟ್ ಮಾಡಿ' ಅನ್ನು ಟ್ಯಾಪ್ ಮಾಡುವ ಮೂಲಕ ವಿಷಯವನ್ನು ಮರುವ್ಯವಸ್ಥೆಗೊಳಿಸಿ ಅಥವಾ ತೆಗೆದುಹಾಕಿ.
ನಿಮ್ಮ ಶೀರ್ಷಿಕೆ ಮತ್ತು ಕವರ್‌ ಫೋಟೋ ಆಯ್ಕೆ ಮಾಡಿ.
ನಿಮ್ಮ ಕಥೆಗಾಗಿ ಶೀರ್ಷಿಕೆ ನಮೂದಿಸಿ. ಕವರ್ ಫೋಟೋ ಆರಿಸಲು, ಫೋಟೋ ಪಿಕರ್ ಮೂಲಕ ಸ್ಕ್ರಾಲ್ ಮಾಡಿ ಮತ್ತು ನಿಮ್ಮ ಉಳಿಸಿದ ಕಥೆಯಲ್ಲಿನ ಕಂಟೆಂಟ್‌ನಿಂದ ಒಂದು ಚಿತ್ರವನ್ನು ಆಯ್ಕೆ ಮಾಡಿ. ಉತ್ತಮ ಶೀರ್ಷಿಕೆ ಮತ್ತು ಕವರ್‌ ಫೋಟೋ ನಿಮ್ಮ ಅಭಿಮಾನಿಗಳಿಗೆ ಒಳಗೇನಿದೆ ಎನ್ನುವುದರ ಸುಳಿವನ್ನು ಒದಗಿಸುತ್ತದೆ! ನೀವು ಮುಗಿಸಿದಾಗ, ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ನಿಮ್ಮ ಕಥೆಯನ್ನು ಉಳಿಸಲು 'ಪೂರ್ಣಗೊಳಿಸು' ಅನ್ನು ಟ್ಯಾಪ್ ಮಾಡಿ.