Snapchat ಬೇಸಿಕ್ಸ್
Snapchat ಎಂದರೇನು?
Snapchat ಎನ್ನುವುದು ನೈಜ ಸ್ನೇಹಿತರಿಗಾಗಿ ತಯಾರಿಸಲಾಗಿರುವ ಕ್ಯಾಮೆರಾ ಆ್ಯಪ್ ಆಗಿದೆ. ಇದು ವರ್ಧಿತ ರಿಯಾಲಿಟಿ ಮೂಲಕ ನಿಮ್ಮನ್ನು ಅಭಿವ್ಯಕ್ತಪಡಿಸಲು, ನಿಮ್ಮ ಸ್ನೇಹಿತರು ಮತ್ತು ಕುಟುಂಬದವರ ಜೊತೆಗೆ ವಿನೋದಿಸಲು ಮತ್ತು ಜಗತ್ತಿನೊಂದಿಗೆ ನಿಮ್ಮ ಸೃಜನಶೀಲತೆಯನ್ನು ಹಂಚಿಕೊಳ್ಳಲು ಇರುವ ವೇದಿಕೆಯಾಗಿದೆ.
  • Snapchat 293 ಮಿಲಿಯನ್‌ಗೂ ಅಧಿಕ ಜಾಗತಿಕ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ—U.S., U.K., ಫ್ರಾನ್ಸ್, ಆಸ್ಟ್ರೇಲಿಯಾ ಮತ್ತು ನೆದರ್‌ಲ್ಯಾಂಡ್‌ಗಳಲ್ಲಿ 13-24 ವರ್ಷದೊಳಗಿನ 90% ಜನರನ್ನು ಮತ್ತು 13-34 ವರ್ಷ ವಯಸ್ಸಿನ 75% ಜನರನ್ನು Snapchat ತಲುಪುತ್ತದೆ.
  • ಸರಾಸರಿ ಪ್ರತಿದಿನ 200 ಮಿಲಿಯನ್‌ಗೂ ಹೆಚ್ಚು Snapchatter ಗಳು ವರ್ಧಿತ ರಿಯಾಲಿಟಿಯೊಂದಿಗೆ ತೊಡಗಿಕೊಳ್ಳುತ್ತಾರೆ.
  • AR ಲೆನ್ಸ್‌ಗಳು, ಫಿಲ್ಟರ್‌ಗಳು ಮತ್ತು ಇತರ ಕ್ರಿಯೇಟಿವ್ ಟೂಲ್‌ಗಳನ್ನು ನಿಮ್ಮ ವೀಡಿಯೊಗಳು ಮತ್ತು ಚಿತ್ರಗಳಿಗೆ ಸೇರಿಸುವ ಮೂಲಕ ನಿಮ್ಮ ಕಂಟೆಂಟ್ ಎದ್ದು ಕಾಣುವಂತೆ ಮಾಡಿ
  • Snapchat ಕ್ರಿಯೇಟರ್ ಆಗಿ ನಿಮ್ಮ ವೃತ್ತಿಬದುಕು ರೂಪಿಸಿಕೊಳ್ಳಲು ನಮ್ಮ ವೆಬ್‌ಸೈಟ್ ಸ್ಫೂರ್ತಿ, ಸಲಹೆಗಳು ಮತ್ತು ತಂತ್ರಗಳು ಮತ್ತು ಹೇಗೆ ಮಾಡುವುದು ಎನ್ನುವ ವಿವರಗಳನ್ನು ಒದಗಿಸುತ್ತದೆ.
Body Image
ಒಂದು ಖಾತೆ ಸೃಷ್ಟಿಸುವುದು
Snapchat ಆ್ಯಪ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ತೆರೆಯಿರಿ ಮತ್ತು ಫೋನ್ ಸಂಖ್ಯೆ ಅಥವಾ ಇಮೇಲ್ ವಿಳಾಸ ಬಳಸಿಕೊಂಡು ಸೈನ್ ಅಪ್ ಮಾಡಿ. ಕೆಲವು ತ್ವರಿತ ಸೂಚನೆಗಳನ್ನು ಅನುಸರಿಸಿ ಮತ್ತು ನೀವೀಗ ಸಿದ್ಧರಾಗಿದ್ದೀರಿ.
ಪರಿಣಿತ ಸಲಹೆ: Snapchatter ಗಳು ನಿಮ್ಮನ್ನು ಕಂಡುಕೊಳ್ಳಲು ಸುಲಭವಾಗಿಸುವ ಬಳಕೆದಾರರ ಹೆಸರನ್ನು ಆಯ್ಕೆ ಮಾಡಿ. ನಿಮ್ಮ ಹೆಸರನ್ನು ನಮೂದಿಸುವಾಗ, ಗುರುತಿಸಬಹುದಾದ ತೋರಿಸುವ ಹೆಸರು ಆಯ್ಕೆ ಮಾಡುವುದನ್ನು ಖಚಿತಪಡಿಸಿಕೊಳ್ಳಿ.
ಖಾತೆ ಸುರಕ್ಷತೆ
ನಮ್ಮ Snapchat ಕಮ್ಯುನಿಟಿಯ ಸುರಕ್ಷತೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ನಮ್ಮ ವೈಶಿಷ್ಟ್ಯಗಳು ಡೀಫಾಲ್ಟ್ ಆಗಿ ಖಾಸಗಿಯಾಗಿವೆ. ಯಾವ ಮಾಹಿತಿಯನ್ನು ಹಂಚಿಕೊಳ್ಳಲು ಬಯಸುತ್ತಾರೆ ಮತ್ತು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತಾರೆ ಎನ್ನುವುದನ್ನು Snapchatter ಗಳು ಆಯ್ಕೆ ಮಾಡುತ್ತಾರೆ.
ಎರಡು-ಅಂಶಗಳ ದೃಢೀಕರಣದಂಥ ಹೆಚ್ಚುವರಿ ಸುರಕ್ಷತಾ ವೈಶಿಷ್ಟ್ಯಗಳನ್ನು ನಿಗದಿಪಡಿಸುವ ಮೂಲಕ ಅನಧಿಕೃತ ಪ್ರವೇಶವನ್ನು ತಡೆಗಟ್ಟಿ ನಿಮ್ಮ ಪ್ರೊಫೈಲ್‌ನ 'ಸೆಟ್ಟಿಂಗ್‌ಗಳು' ಅಡಿಯಲ್ಲಿ ಎರಡು-ಅಂಶಗಳ ದೃಢೀಕರಣವನ್ನು ಸಕ್ರಿಯಗೊಳಿಸಿ.