Snapchat ಹುಡುಕಿ
ನಿಮಗೆ ನಿಜಕ್ಕೂ ಮುಖ್ಯವಾಗಿರುವವರ ಜೊತೆ ನಿಮ್ಮ ದೈನಂದಿನ ಬದುಕಿನ ಕ್ಷಣಗಳನ್ನು ಹಂಚಿಕೊಳ್ಳಲು Snapchat ಅನ್ನು ವಿನ್ಯಾಸಗೊಳಿಸಲಾಗಿದೆ.
CH_010
5 ಟ್ಯಾಬ್‌ಗಳಲ್ಲಿ ನ್ಯಾವಿಗೇಟ್ ಮಾಡುವುದು
ಕ್ಯಾಮೆರಾ. Snapchat ಯಾವಾಗಲೂ ನೇರವಾಗಿ ಕ್ಯಾಮೆರಾಗೆ ತೆರೆದುಕೊಳ್ಳುತ್ತದೆ, ಫೀಡ್‌ಗಲ್ಲ. ಇದರಿಂದಾಗಿ ನೀವು ಆಕ್ಷಣದಲ್ಲಿನ ನಿಮ್ಮ ದೃಷ್ಟಿಕೋನವನ್ನು ಸೆರೆಹಿಡಿಯಬಹುದು. ಫೋಟೋಗಳು ಮತ್ತು ವೀಡಿಯೊ Snap ಗಳನ್ನು ತೆಗೆದುಕೊಳ್ಳಲು, ಲೆನ್ಸ್‌ಗಳು ಮತ್ತು ಕ್ರಿಯೇಟಿವ್ ಟೂಲ್ಸ್ ಅನ್ವಯಿಸಲು ಮತ್ತು ನಿಮ್ಮ ಸಮೀಪದ ಸ್ನೇಹಿತರು ಅಥವಾ Snapchat ಸಮುದಾಯದೊಂದಿಗೆ ಹಂಚಿಕೊಳ್ಳಲು ಕ್ಯಾಮೆರಾವನ್ನು ಬಳಸಿ.
ಚಾಟ್. ಸ್ನೇಹಿತರು ಮತ್ತು ಗುಂಪುಗಳಿಗೆ Snap ಗಳನ್ನು ಕಳುಹಿಸಿ ಮತ್ತು ನಿಮ್ಮ Bitmoji ಅಥವಾ ಕ್ಯಾಮಿಯೋದೊಂದಿಗೆ ಸಂದೇಶ ಕಳುಹಿಸುವಿಕೆಯನ್ನು ಇನ್ನಷ್ಟು ವಿನೋದವಾಗಿಸಿ. ಪರಿಶೀಲಿತ ಕ್ರಿಯೇಟರ್‌ಗಳ ಆಯ್ದ ಗುಂಪು ಕೂಡ ಕಥೆ ಪ್ರತ್ಯುತ್ತರಗಳು ಅನ್ನುವ ವೈಶಿಷ್ಟ್ಯಕ್ಕೆ ಪ್ರವೇಶ ಹೊಂದಿರುತ್ತದೆ, ಇಲ್ಲಿ ನೀವು ಅಭಿಮಾನಿಗಳಿಗೆ ನೇರವಾಗಿ ಮರಳಿ ಪ್ರತಿಕ್ರಿಯೆ ನೀಡಬಹುದು.
ಮ್ಯಾಪ್. ಸ್ಥಳೀಯ ಸಮುದಾಯದಿಂದ Snap ಗಳನ್ನು ನೋಡಲು ಹಾಟ್‌ಸ್ಪಾಟ್ ಮೇಲೆ ಟ್ಯಾಪ್ ಮಾಡುವ ಮೂಲಕ ಜಗತ್ತಿನ ಬಗ್ಗೆ ತಿಳಿದುಕೊಳ್ಳಿ, ಅಥವಾ ನಿಮ್ಮ ಸ್ನೇಹಿತರು ಏನು ಮಾಡುತ್ತಿದ್ದಾರೆ ಎಂದು ನೋಡಿ—ಒಂದು ವೇಳೆ ಅವರು ತಮ್ಮ ಸ್ಥಳ ಹಂಚಿಕೊಳ್ಳುವುದನ್ನು ಆಯ್ಕೆ ಮಾಡಿದ್ದರೆ ಅವರ Bitmoji ಗಳು ನಿಮಗೆ ಕಾಣಿಸುತ್ತವೆ.
ಕಥೆಗಳು. Snap ಸ್ಟಾರ್‌ಗಳಿಂದ ಕಂಟೆಂಟ್‌ನ ಜೊತೆಗೆ ನಿಮ್ಮ ಸ್ನೇಹಿತರಿಂದ ಕಥೆಗಳನ್ನು ಆನಂದಿಸಿ ಮತ್ತು ಪ್ರದರ್ಶನಗಳು ಮತ್ತು Snap ಒರಿಜಿನಲ್ಸ್ ಸೇರಿದಂತೆ ಪಬ್ಲಿಷರ್‌ಗಳನ್ನು ಕಂಡುಹಿಡಿಯಿರಿ. ನಿಮ್ಮ ಮೆಚ್ಚಿನವುಗಳನ್ನು ನೋಡುತ್ತಿರಿ ಅಥವಾ ಹೊಸದೇನನ್ನಾದರೂ ಕಂಡುಕೊಳ್ಳಿ.
ಸ್ಪಾಟ್‌ಲೈಟ್‌. ಆ್ಯಪ್ ಎಡ ಮೂಲೆಯಲ್ಲಿ ಸ್ಪಾಟ್‌ಲೈಟ್‌ ಐಕಾನ್ ಅನ್ನು ಟ್ಯಾಪ್ ಮಾಡಿ. ಇದು ಕಮ್ಯುನಿಟಿಯಿಂದ ಅತ್ಯಂತ ಮನರಂಜನೆಯ Snap ಗಳನ್ನು ನಾವು ಹೈಲೈಟ್ ಮಾಡುವ ಮತ್ತು ನೀವು ದೊಡ್ಡ ಪ್ರಮಾಣದ ಹೊಸ ಪ್ರೇಕ್ಷಕರನ್ನು ತಲುಪಬಹುದಾದ ಸ್ಥಳವಾಗಿದೆ. ಏನು ಟ್ರೆಂಡ್ ಆಗುತ್ತಿದೆ ಎಂದು ನೋಡಿ ಮತ್ತು ನಿಮ್ಮ ಅತ್ಯುತ್ತಮ ಅಸಲಿ ಕಂಟೆಂಟ್ ಹಂಚಿಕೊಳ್ಳಿ.
ನಿಮ್ಮ ಸ್ನೇಹಿತರನ್ನು ಸೇರಿಸಿ ಮತ್ತು ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳಿ
ನಿಮಗೆ ಈಗಾಗಲೇ ಪರಿಚಿತರಾಗಿರುವ ಜನರೊಂದಿಗೆ (ಸ್ನೇಹಿತರು, ಕುಟುಂಬದವರು ಅಥವಾ ಅಭಿಮಾನಿಗಳು) ಸಂಪರ್ಕಿಸಲು ಮತ್ತು ನಿಮ್ಮ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುವುದಕ್ಕೆ ನಿಮ್ಮ ಪ್ರೊಫೈಲ್ ಹಂಚಿಕೊಳ್ಳಲು ಒಂದಿಷ್ಟು ವಿಧಾನಗಳಿವೆ.
Snapcode. ನಿಮ್ಮ ವಿಶಿಷ್ಟ Snapcode ನೋಡಲು ಮೇಲ್ಭಾಗದ ಎಡ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಟ್ಯಾಪ್ ಮಾಡಿ. ಒಂದೋ Snapcode ಅನ್ನು ಅಥವಾ ಸ್ಕ್ರೀನ್‌ನ ಮೇಲ್ಭಾಗದ ಎಡ ಮೂಲೆಯಲ್ಲಿರುವ ಹಂಚಿಕೊಳ್ಳಿ ಐಕಾನ್ ಅನ್ನು ಟ್ಯಾಪ್ ಮಾಡುವ ಮೂಲಕ Snapchat ನಲ್ಲಿ ಸ್ನೇಹಿತರನ್ನು ಸುಲಭವಾಗಿ ಸೇರಿಸಲು ಈ ಕೋಡ್ ಅನ್ನು ನೀವು ಸಾಮಾಜಿಕ ವೇದಿಕೆಗಳಾದ್ಯಂತ ಹಂಚಿಕೊಳ್ಳಬಹುದು.
ಬಳಕೆದಾರರ ಹೆಸರು. ನಿಮ್ಮ ಎಲ್ಲ ಸಾಮಾಜಿಕ ಚಾನೆಲ್‌ಗಳ ಬಯೋದಲ್ಲಿ ನಿಮ್ಮ ಬಳಕೆದಾರರ ಹೆಸರನ್ನು ಸೇರಿಸುವುದನ್ನು ಖಚಿತಪಡಿಸಿಕೊಳ್ಳಿ.
ಸಂಪರ್ಕಗಳು. ನಿಮ್ಮ ಪ್ರೊಫೈಲ್‌ಗೆ ಹೋಗಿ 'ಸ್ನೇಹಿತರನ್ನು ಸೇರಿಸಿ' ಅನ್ನು ಟ್ಯಾಪ್ ಮಾಡುವ ಮೂಲಕ ನಿಮ್ಮ ಮೊಬೈಲ್ ಸಂಪರ್ಕಗಳಿಂದ ನೀವು ಸ್ನೇಹಿತರನ್ನು ಸೇರಿಸಬಹುದು, ಆದರೆ ನಿಮ್ಮ ಸಂಪರ್ಕಗಳನ್ನು ಪ್ರವೇಶಿಸಲು ಮೊದಲು ನೀವು Snapchat ಗೆ ಅನುಮತಿ ನೀಡಬೇಕು.
ಸೂಚಿಸಿದ ಸ್ನೇಹಿತರು. ನಿಮ್ಮ ಶಿಫಾರಿತ ಸ್ನೇಹಿತರು 'ಸ್ನೇಹಿತರನ್ನು ಸೇರಿಸಿ' ಸ್ಕ್ರೀನ್‌ನಡಿ 'ತ್ವರಿತ ಸೇರ್ಪಡೆ' ಇಲ್ಲಿ ಕಾಣಿಸುತ್ತಾರೆ.