ನಿಮ್ಮ ಸಾರ್ವಜನಿಕ ಪ್ರೊಫೈಲ್
18 ವರ್ಷ ಮತ್ತು ಅದಕ್ಕಿಂತ ಹೆಚ್ಚು ವಯಸ್ಸಿನ ಎಲ್ಲ Snapchatter ಗಳು ಸಾರ್ವಜನಿಕ ಪ್ರೊಫೈಲ್ ಹೊಂದಿರುತ್ತಾರೆ, ಅದನ್ನು ತಮ್ಮ ಅತ್ಯುತ್ತಮ Snap ಗಳನ್ನು ಸಾರ್ವಜನಿಕವಾಗಿ ತೋರಿಸಲು ಅವರು ಬಳಸಬಹುದು. Snapchat ನಲ್ಲಿ, ಒಂದೇ ಖಾತೆ Snap ಗಳನ್ನು ಕೇವಲ ನಿಮ್ಮ ಸ್ನೇಹಿತರ ಜೊತೆ ಹಂಚಿಕೊಳ್ಳಲು ಹಾಗೂ ಸಾರ್ವಜನಿಕ ಉಪಸ್ಥಿತಿಯನ್ನು ಸ್ಥಾಪಿಸಲು ಮತ್ತು ನಿರ್ಮಿಸುವವರಾಗಲು ಅನುವು ಮಾಡಿಕೊಡುತ್ತದೆ. ಸಾರ್ವಜನಿಕವಾಗಿ ವಿಷಯ ಹಂಚಿಕೊಳ್ಳುವುದು ಮತ್ತು ನಿಮ್ಮ ಸಾರ್ವಜನಿಕ ಪ್ರೊಫೈಲ್ ನಿರ್ಮಿಸುವುದು ಐಚ್ಛಿಕವಾಗಿದೆ.
ಸಾರ್ವಜನಿಕ ಪ್ರೊಫೈಲ್‌ನ ವೈಶಿಷ್ಟ್ಯಗಳು
  • ಸಾರ್ವಜನಿಕ ಕಥೆ. ಇದು ಪೋಸ್ಟ್‌ ಮಾಡಿದ ಬಳಿಕ 24 ಗಂಟೆಗಳ ಕಾಲ ಸಕ್ರಿಯವಾಗಿರುವ ಕಥೆಯಾಗಿದೆ ಮತ್ತು ನಿಮ್ಮ ಸ್ನೇಹಿತರು ಹಾಗೂ ಫಾಲೋವರ್‌ಗಳು ಹಾಗೂ Snapchat ಸಮುದಾಯದಲ್ಲಿರುವ ಯಾರಾದರೂ ನೋಡಬಹುದು. ನಿಮ್ಮ ಸಾರ್ವಜನಿಕ ಕಥೆ ವಿಶಾಲ ಪ್ರೇಕ್ಷಕರನ್ನು ನಿರ್ಮಿಸಿಕೊಳ್ಳಲು ನಿಮಗೆ ಅನುವು ಮಾಡಿಕೊಡುತ್ತದೆ ಮತ್ತು ಸ್ನೇಹಿತರಿಗಾಗಿ ನಿಮ್ಮ "ನನ್ನ ಕಥೆ"ಗಿಂತ ವಿಶಿಷ್ಟವಾಗಿದೆ.
  • ಸುಧಾರಿತ ಒಳನೋಟಗಳು. ಕಥೆ, ಸ್ಪಾಟ್‌ಲೈಟ್, ಲೆನ್ಸ್ ಮತ್ತು ಪ್ರೇಕ್ಷಕರ ಒಳನೋಟಗಳು ನಿಮ್ಮ Snap ಗಳ ಕಾರ್ಯಕ್ಷಮತೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಇತರ Snapchatter ಗಳು ಇಷ್ಟಪಡುವ ಇನ್ನಷ್ಟು ಸಮ್ಮೋಹಕ ಕಂಟೆಂಟ್ ಅನ್ನು ಸೃಷ್ಟಿಸಲು ನಿಮಗೆ ಸಹಾಯ ಮಾಡುತ್ತವೆ!
  • ಸಾರ್ವಜನಿಕ ಕಥೆ ಪ್ರತ್ಯುತ್ತರಗಳು ಮತ್ತು ಉಲ್ಲೇಖಿಸುವುದು. ಕಥೆ ಪ್ರತ್ಯುತ್ತರಗಳು ಮತ್ತು ಉಲ್ಲೇಖಿಸುವುದರ ಮೂಲಕ ನೀವು ಪೋಸ್ಟ್‌ ಮಾಡುವ ಸಾರ್ವಜನಿಕ ಕಥೆಗಳ ಸುತ್ತ ಅರ್ಥಪೂರ್ಣ ಸಂಭಾಷಣೆಗಳನ್ನು ನಡೆಸಿ. ನಿಮ್ಮ ಫಾಲೋವರ್‌ಗಳು ಮತ್ತು ಸ್ನೇಹಿತರ ಜೊತೆಗೆ ಇನ್ನಷ್ಟು ಆಳವಾದ ಸಂಭಾಷಣೆಯಲ್ಲಿ ತೊಡಗಿಕೊಳ್ಳಲು ನೀವು ಕಥೆ ಪ್ರತ್ಯುತ್ತರಗಳನ್ನು ಬಳಸಬಹುದು ಮತ್ತು ನಿಮ್ಮ ಮೆಚ್ಚಿನ ಕಥೆ ಪ್ರತ್ಯುತ್ತರಗಳಿಂದ ಹೊಸ ಸಾರ್ವಜನಿಕ ಕಥೆಗಳನ್ನು ರಚಿಸಲು ಉಲ್ಲೇಖಿಸುವ ಸಲಕರಣೆಯನ್ನು ಬಳಸಬಹುದು. ನಿಮ್ಮ ಸಾರ್ವಜನಿಕ ಪ್ರೊಫೈಲ್ ಸೆಟ್ಟಿಂಗ್‌ಗಳಲ್ಲಿ ಯಾವುದೇ ಸಮಯದಲ್ಲಿ ಕಥೆ ಪ್ರತ್ಯುತ್ತರಗಳನ್ನು ಆಫ್ ಮಾಡುವ ಸಾಮರ್ಥ್ಯವನ್ನು ನೀವು ಹೊಂದಿದ್ದೀರಿ ಮತ್ತು ಕಸ್ಟಮ್ ಪದ ಫಿಲ್ಟರಿಂಗ್ ಮೂಲಕ ನಿರ್ಮಿಸುವವರು ಸ್ವೀಕರಿಸುವ ಸಂದೇಶಗಳ ವಿಧಗಳ ಮೇಲೆ ಅವರಿಗೆ ನಿಯಂತ್ರಣವನ್ನು ನೀಡುತ್ತೇವೆ, ಇದರಿಂದಾಗಿ ಸಂಭಾಷಣೆಗಳು ಗೌರವಯುತ ಮತ್ತು ವಿನೋದಮಯವಾಗಿ ಉಳಿಯುತ್ತವೆ.
  • ಕಥೆಗಳು ಮತ್ತು ಸ್ಪಾಟ್‌ಲೈಟ್‌ಗಳನ್ನು ನಿಮ್ಮ ಪ್ರೊಫೈಲ್‌ಗೆ ಉಳಿಸಿ. ನಿಮ್ಮ ಸಾರ್ವಜನಿಕ ಪ್ರೊಫೈಲ್‌ನಲ್ಲಿ ಶಾಶ್ವತವಾಗಿ ಪ್ರದರ್ಶಿಸಲು ನಿಮ್ಮ ಅತ್ಯುತ್ತಮ ಸಾರ್ವಜನಿಕ ಕಥೆಗಳು, ಮ್ಯಾಪ್‌ Snap ಗಳು ಮತ್ತು ಸ್ಪಾಟ್‌ಲೈಟ್‌ಗಳನ್ನು ಆರಿಸಿ.
  • ಚಟುವಟಿಕೆಯ ಫೀಡ್. ನಿಮ್ಮ ಸ್ಪಾಟ್‌ಲೈಟ್ ಸಲ್ಲಿಕೆಗಳ ಕುರಿತು ಅಪ್‌ಡೇಟ್‌ಗಳನ್ನು ಪಡೆಯಿರಿ, ಸಾರ್ವಜನಿಕ ಕಥೆಗಳು ಮತ್ತು ಸ್ಪಾಟ್‌ಲೈಟ್‌ಗಳಲ್ಲಿ ಪ್ರತ್ಯುತ್ತರಗಳನ್ನು ನಿರ್ವಹಿಸಿ ಮತ್ತು ಇನ್ನಷ್ಟನ್ನು ಮಾಡಿ!
ನಿಮ್ಮ ಸಾರ್ವಜನಿಕ ಪ್ರೊಫೈಲ್ ಅನ್ನು ಕಸ್ಟಮೈಸ್ ಮಾಡಿ
ಸಾರ್ವಜನಿಕ ಉಪಸ್ಥಿತಿಯನ್ನು ಸ್ಥಾಪಿಸಲು ಮತ್ತು Snapchat ನಲ್ಲಿ ಕಂಟೆಂಟ್ ನಿರ್ಮಿಸುವವರಾಗಿ ನಿಮ್ಮ ಪ್ರಯಾಣವನ್ನು ಆರಂಭಿಸಲು ನಿಮ್ಮ ಸಾರ್ವಜನಿಕ ಪ್ರೊಫೈಲ್‌ ನಿಮ್ಮ ಸ್ಥಳಾವಕಾಶವಾಗಿದೆ. ಸಂಪರ್ಕಗಳನ್ನು ಬೆಳೆಸಿಕೊಳ್ಳಲು, ಫಾಲೋವರ್‌ಗಳನ್ನು ಹೆಚ್ಚಿಸಿಕೊಳ್ಳಲು, ನಿಮ್ಮ ಮೆಚ್ಚಿನ ವಿಷಯವನ್ನು ಪ್ರದರ್ಶಿಸಲು ಮತ್ತು ನಿಮ್ಮನ್ನು ಅಭಿವ್ಯಕ್ತಪಡಿಸಲು ನಿಮ್ಮ ಸಾರ್ವಜನಿಕ ಪ್ರೊಫೈಲ್ ಬಳಸಿ. ನಿಮ್ಮ ಸಾರ್ವಜನಿಕ ಪ್ರೊಫೈಲ್ ಪ್ರವೇಶಿಸಲು, ಸ್ಕ್ರೀನ್‌ನ ಮೇಲ್ಭಾಗದ ಎಡ ಮೂಲೆಯಲ್ಲಿ ನಿಮ್ಮ Bitmoji ಯನ್ನು ಟ್ಯಾಪ್ ಮಾಡಿ ಮತ್ತು "ನನ್ನ ಸಾರ್ವಜನಿಕ ಪ್ರೊಫೈಲ್" ಆಯ್ಕೆ ಮಾಡಿ.
ನೀವು ಪ್ರೊಫೈಲ್ ಫೋಟೋ ಮತ್ತು ಕವರ್ ಫೋಟೋ ಸೇರಿಸಬಹುದು, ಬಯೋ ಸೃಷ್ಟಿಸಬಹುದು ಮತ್ತು ನಿಮ್ಮ ಮೆಚ್ಚಿನ ಕಥೆಗಳು ಮತ್ತು ಸ್ಪಾಟ್‌ಲೈಟ್‌ಗಳನ್ನು ಶಾಶ್ವತವಾಗಿ—ಅಥವಾ ನೀವು ಬಯಸುವ ತನಕ– ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ಉಳಿಸಬಹುದು. ನೀವು ನಿರ್ಮಿಸುವ ಯಾವುದೇ ಲೆನ್ಸ್‌ಗಳನ್ನು ಕೂಡ ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ಸೇರಿಸಲಾಗುತ್ತದೆ ಮತ್ತು ನನ್ನ ಲೆನ್ಸ್‌ಗಳು ಮೂಲಕ ನೀವು ನಿಮ್ಮ ಲೆನ್ಸ್‌ಗಳನ್ನು ನಿರ್ವಹಿಸಬಹುದು.
ನಿಮ್ಮ ಸಾರ್ವಜನಿಕ ಪ್ರೊಫೈಲ್ ಸೆಟಪ್ ಮಾಡಲು ಸಹಾಯ ಬೇಕೇ? ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕ ಪ್ರೊಫೈಲ್ FAQ ಗೆ ಭೇಟಿ ನೀಡಿ!
ಉಳಿಸಿದ ಕಥೆಗಳನ್ನು ಸೃಷ್ಟಿಸಿ
  1. 'ಉಳಿಸಿದ ಕಥೆಗಳಿಗೆ' ನ್ಯಾವಿಗೇಟ್ ಮಾಡಿ. ಪ್ರೊಫೈಲ್ ನಿರ್ವಹಣೆ ವಿಭಾಗದಿಂದ, ನಿಮ್ಮ ಪ್ರೊಫೈಲ್ ಟ್ಯಾಪ್ ಮಾಡಿ, 'ಉಳಿಸಿದ ಕಥೆಗಳು' ಇಲ್ಲಿಗೆ ಹೋಗಿ ಮತ್ತು 'ಹೊಸ ಕಥೆಯನ್ನು ಸೃಷ್ಟಿಸಿ' ಅನ್ನು ಟ್ಯಾಪ್ ಮಾಡಿ.
  2. Snap ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಆಯ್ಕೆ ಮಾಡಿ. ನಿಮ್ಮ ಉಳಿಸಿದ ಕಥೆಗಳಿಗೆ ಹೊಸ ಕಂಟೆಂಟ್ ಅನ್ನು ಸೇರಿಸಲು '+' ಬಟನ್ ಟ್ಯಾಪ್ ಮಾಡಿ. ನೀವು ಈ ಹಿಂದೆ ಹಂಚಿಕೊಂಡ ಸಾರ್ವಜನಿಕ Snap ಗಳನ್ನು ಅಥವಾ ನಿಮ್ಮ ಕ್ಯಾಮೆರಾ ರೋಲ್‌ನಿಂದ ನೇರವಾಗಿ ಫೋಟೋಗಳು ಮತ್ತು ವೀಡಿಯೊಗಳನ್ನು ಆಯ್ಕೆ ಮಾಡಬಹುದು. ನೀವು ಮುಗಿಸಿದಾಗ, 'ಆಮದು ಮಾಡಿ' ಅನ್ನು ಟ್ಯಾಪ್ ಮಾಡಿ. ಒಂದು ಕಥೆ 100 Snap ಗಳವರೆಗೆ ಅಥವಾ ಒಟ್ಟು 5 ನಿಮಿಷಗಳ ಕಂಟೆಂಟ್—ಇವುಗಳಲ್ಲಿ ಯಾವುದನ್ನು ನೀವು ಮೊದಲು ತಲುಪುತ್ತೀರೋ ಅದನ್ನು ಒಳಗೊಳ್ಳುತ್ತದೆ.
  3. ನಿಮ್ಮ ಕಥೆಯನ್ನು ಪರಿಶೀಲಿಸಿ ಮತ್ತು ಎಡಿಟ್ ಮಾಡಿ. ಇಡೀ ಕಥೆಯನ್ನು ಮುನ್ನೋಟ ಮಾಡಲು ಮತ್ತು ನಿಮ್ಮ ಪ್ರೇಕ್ಷಕರಿಗೆ ಅದು ಹೇಗೆ ಕಾಣಿಸುತ್ತದೆ ಎಂದು ನೋಡಲು ಒಂದು Snap, ಫೋಟೋ ಅಥವಾ ವೀಡಿಯೊವನ್ನು ಟ್ಯಾಪ್ ಮಾಡಿ. ಮೇಲ್ಭಾಗದ ಬಲ ಮೂಲೆಯಲ್ಲಿರುವ 'ಎಡಿಟ್ ಮಾಡಿ' ಅನ್ನು ಟ್ಯಾಪ್ ಮಾಡುವ ಮೂಲಕ ಕಂಟೆಂಟ್ ಅನ್ನು ಮರುಕ್ರಮಗೊಳಿಸಿ ಅಥವಾ ತೆಗೆದುಹಾಕಿ.
  4. ನಿಮ್ಮ ಶೀರ್ಷಿಕೆ ಮತ್ತು ಕವರ್ ಫೋಟೋ ಆಯ್ಕೆ ಮಾಡಿ. ನಿಮ್ಮ ಕಥೆಗಾಗಿ ಶೀರ್ಷಿಕೆ ನಮೂದಿಸಿ. ಕವರ್ ಫೋಟೋ ಆರಿಸಲು, ಫೋಟೋ ಪಿಕರ್ ಮೂಲಕ ಸ್ಕ್ರಾಲ್ ಮಾಡಿ ಮತ್ತು ನಿಮ್ಮ ಉಳಿಸಿದ ಕಥೆಯಲ್ಲಿನ ಕಂಟೆಂಟ್‌ನಿಂದ ಒಂದು ಚಿತ್ರವನ್ನು ಆಯ್ಕೆ ಮಾಡಿ. ಉತ್ತಮ ಶೀರ್ಷಿಕೆ ಮತ್ತು ಕವರ್‌ ಫೋಟೋ ನಿಮ್ಮ ಅಭಿಮಾನಿಗಳಿಗೆ ಒಳಗೇನಿದೆ ಎನ್ನುವುದರ ಸುಳಿವನ್ನು ಒದಗಿಸುತ್ತದೆ! ನೀವು ಮುಗಿಸಿದಾಗ, ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ನಿಮ್ಮ ಕಥೆಯನ್ನು ಪ್ರಕಟಿಸಲು 'ಪೂರ್ಣಗೊಳಿಸು' ಬಟನ್ ಅನ್ನು ಟ್ಯಾಪ್ ಮಾಡಿ.