Snap ಧ್ವನಿಗಳು ಮತ್ತು ಸಂಗೀತ
ನಿಮ್ಮ Snap ಗಳನ್ನು ಇನ್ನಷ್ಟು ಸ್ಮರಣೀಯವಾಗಿಸಲು ಧ್ವನಿಗಳನ್ನು ಸೇರಿಸಿ.
ಧ್ವನಿಗಳು ಟೂಲ್
ಧ್ವನಿಗಳು (ಕ್ಯಾಮೆರಾ ಸ್ಕ್ರೀನ್‌ನಲ್ಲಿನ 🎵 ಐಕಾನ್) ಪರವಾನಗಿಯಿರುವ ಹಾಡಿನ ಕ್ಲಿಪ್‌ಗಳು, ಟಿವಿ ಮತ್ತು ಸಿನಿಮಾಗಳಿಂದ ತುಣುಕುಗಳು ಮತ್ತು ತಮ್ಮದೇ ಸ್ವಂತ ಅಸಲಿ ಆಡಿಯೋವನ್ನು ತಮ್ಮ Snap ಗಳು ಮತ್ತು ಕಥೆಗಳಿಗೆ ಸೇರಿಸಲು Snapchatter ಗಳಿಗೆ ಅವಕಾಶ ಕಲ್ಪಿಸುತ್ತದೆ.
ನಿಮ್ಮನ್ನು ಅಭಿವ್ಯಕ್ತಗೊಳಿಸಲು, ಸ್ಫೂರ್ತಿಯನ್ನು ಕಂಡುಕೊಳ್ಳಲು ಅಥವಾ ನೀವು ಹಿಂದೆಂದೂ ಕೇಳಿಸಿಕೊಂಡಿರದ ಹೊಸ ಕಲಾವಿದರನ್ನು ಕಂಡುಹಿಡಿಯಲು ಧ್ವನಿಗಳನ್ನು ಬಳಸಿ.
ಈ ಟೂಲ್ Snap ನ ಸಂಗೀತ ಪಾಲುದಾರರಿಂದ ಸಂಗೀತದ ಪ್ಲೇಲಿಸ್ಟ್‌ಗಳು ಮತ್ತು Snap ನ ಕಂಟೆಂಟ್ ಪಾಲುದಾರರಿಂದ ಟಿವಿ ಮತ್ತು ಸಿನಿಮಾದ ಆಡಿಯೋಗಳನ್ನು ಒಳಗೊಂಡಿದೆ. ಪ್ಲೇಲಿಸ್ಟ್‌ಗಳು ನಮ್ಮ ಕಮ್ಯುನಿಟಿಗೆ ಪ್ರಸ್ತುತವಾಗಿರುವ ಪ್ರಕಾರಗಳು, ಲಹರಿಗಳು ಮತ್ತು ಕ್ಷಣಗಳು ಹಾಗೂ Snapchat ನಲ್ಲಿ ಟ್ರೆಂಡ್ ಆಗುತ್ತಿರುವ ಹಾಡುಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ. ನಿಮ್ಮ Snap ಗಳಲ್ಲಿ ಪರವಾನಗಿಯಿರುವ ಸಂಗೀತ ಮತ್ತು ಟಿವಿ ಅಥವಾ ಸಿನಿಮಾದ ಕಂಟೆಂಟ್ ಬಳಸುವಾಗ ನಮ್ಮ Snapchat ನಲ್ಲಿ ಧ್ವನಿಗಳು ಮಾರ್ಗಸೂಚಿಗಳು ಅನ್ನು ಪರಿಶೀಲಿಸಿ ಮತ್ತು ಅನುಸರಿಸಿ
ಧ್ವನಿಗಳ ಜೊತೆಗಿನ Snap ಅನ್ನು ಯಾರಾದರೂ ನೋಡಿದಾಗ, ಅವರು ಹಾಡಿನ ಶೀರ್ಷಿಕೆ, ಕಲಾವಿದರ ಹೆಸರು, ಆಲ್ಬಮ್ ಆರ್ಟ್ ನೋಡಲು ಮೇಲಕ್ಕೆ ಸ್ವೈಪ್ ಮಾಡಬಹುದು ಮತ್ತು ತಮ್ಮ ಸ್ವಂತ Snap ನಲ್ಲಿ ಹಾಡನ್ನು ಬಳಸಲೂಬಹುದು. ಪಾರ್ಟ್ನರ್ ಸ್ಟ್ರೀಮಿಂಗ್ ವೇದಿಕೆಗಳಲ್ಲಿ ಪೂರ್ಣ ಆವೃತ್ತಿಯನ್ನು ಕೇಳಿಸಿಕೊಳ್ಳಲು ಅವರು 'ಈ ಹಾಡನ್ನು ಪ್ಲೇ ಮಾಡಿ' ಮೇಲೆ ಟ್ಯಾಪ್ ಕೂಡ ಮಾಡಬಹುದು.
ನಿಮ್ಮ Snap ಗಳಿಗೆ ಸಂಗೀತ ಸೇರಿಸಿ
ಹೊಸ ಮತ್ತು ಪ್ರಸಿದ್ಧ ಕಲಾವಿದರು ಇಬ್ಬರಿಂದಲೂ ಕೂಡಿರುವ ಸದೃಢವಾದ ಸಂಗೀತದ ಕೆಟಲಾಗ್‌ನಿಂದ Snapchatter ಗಳು ತಮ್ಮ Snap ಗಳಿಗೆ ಹಾಡುಗಳನ್ನು (ಪೂರ್ವ ಅಥವಾ ನಂತರದ ಸೆರೆಹಿಡಿಯುವಿಕೆ) ಸೇರಿಸಬಹುದು, ಹಲವು ವಿಭಿನ್ನ ರೆಕಾರ್ಡ್ ಲೇಬಲ್‌ಗಳು ಮತ್ತು ಪಬ್ಲಿಷರ್‌ಗಳ ಜೊತೆಗಿನ ನಮ್ಮ ಸಹಭಾಗಿತ್ವದಿಂದ ಇದು ಸಾಧ್ಯವಾಗಿದೆ.
ನಿಮ್ಮ Snap ಗೆ ಟ್ರ್ಯಾಕ್ ಸೇರಿಸಲು...
  1. ಕ್ಯಾಮೆರಾ ಸ್ಕ್ರೀನ್ ತೆರೆಯಿರಿ
  2. ಧ್ವನಿಗಳು ಐಕಾನ್ 🎵 ಅನ್ನು ಟ್ಯಾಪ್ ಮಾಡಿ.
  3. ಕ್ಯೂರೇಟೆಡ್ ಪ್ಲೇಲಿಸ್ಟ್‌ಗಳಿಂದ ಒಂದು ಟ್ರ್ಯಾಕ್ ಆಯ್ಕೆ ಮಾಡಿ ಅಥವಾ ನಿರ್ದಿಷ್ಟ ಹಾಡಿಗಾಗಿ ಹುಡುಕಿ. ಮುನ್ನೋಟ ಮಾಡಲು ಪ್ಲೇ ಬಟನ್ ಟ್ಯಾಪ್ ಮಾಡಿ.
  4. ಹಾಡು ಎಲ್ಲಿ ಆರಂಭವಾಗಬೇಕು ಎನ್ನುವುದನ್ನು ನಿರ್ಧರಿಸಿ
  5. ನೀವು ಹೇಗೆ ಬಯಸಿದ್ದೀರೋ ನಿಖರವಾಗಿ ಹಾಗೆಯೇ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅದನ್ನು ಪುನಃ ಪ್ಲೇ ಮಾಡಿ
ಅಸಲಿ ಧ್ವನಿಗಳು
Snapchat ನಲ್ಲಿ ಸೃಜನಶೀಲರಾಗುವುದು ಅಂದರೆ ನಿಮ್ಮ ವಿಶಿಷ್ಟ ಧ್ವನಿಯನ್ನು ಅಭಿವ್ಯಕ್ತಪಡಿಸುವುದಾಗಿದೆ, ಆದ್ದರಿಂದ ನೀವು ನಿಮ್ಮದೇ ಧ್ವನಿಗಳನ್ನು ಕೂಡ ಸೃಷ್ಟಿಸಬಹುದು!
ನಿಮ್ಮ Snap ಗೆ ಸೇರಿಸಲು ನಿಮ್ಮದೇ ಅಸಲಿ ಧ್ವನಿಯನ್ನು ಸೃಷ್ಟಿಸುವುದಕ್ಕಾಗಿ...
  1. ಕ್ಯಾಮೆರಾ ಸ್ಕ್ರೀನ್ ತೆರೆಯಿರಿ
  2. ಧ್ವನಿಗಳು ಐಕಾನ್ 🎵 ಅನ್ನು ಟ್ಯಾಪ್ ಮಾಡಿ
  3. 'ಧ್ವನಿಯನ್ನು ಸೃಷ್ಟಿಸಿ' ಅನ್ನು ಟ್ಯಾಪ್ ಮಾಡಿ
  4. 60 ಸೆಕೆಂಡುಗಳವರೆಗೆ ರೆಕಾರ್ಡ್ ಮಾಡಲು ಮೈಕ್ರೋಫೋನ್ ಬಟನ್ ಅನ್ನು ಟ್ಯಾಪ್ ಮಾಡಿ, ಮತ್ತು ರೆಕಾರ್ಡಿಂಗ್ ನಿಲ್ಲಿಸಲು ಅದನ್ನು ಮತ್ತೊಮ್ಮೆ ಟ್ಯಾಪ್ ಮಾಡಿ
  5. ನಿಮ್ಮ ಅಸಲಿ ಧ್ವನಿಗೆ ಹೆಸರಿಡಿ
  6. ಧ್ವನಿಯನ್ನು ಸಾರ್ವಜನಿಕಗೊಳಿಸಬೇಕೇ ಎಂದು ಆಯ್ಕೆ ಮಾಡಿ ಮತ್ತು ನೀವು ಬಯಸುವ ಉದ್ದಕ್ಕೆ ಆಡಿಯೋವನ್ನು ಟ್ರಿಮ್ ಮಾಡಿ
  7. 'ಧ್ವನಿ ಉಳಿಸಿ' ಅನ್ನು ಟ್ಯಾಪ್ ಮಾಡಿ
Snap ಟ್ರೆಂಡಿಂಗ್
ಸ್ಪಾಟ್‌ಲೈಟ್‌ನಲ್ಲಿ ಆಲ್ಗಾರಿದಂ ಅನುಸಾರ ಕ್ಯೂರೇಟ್ ಮಾಡಿದ ದಿನದ ಅತ್ಯಂತ ಜನಪ್ರಿಯ ಧ್ವನಿಗಳ ಪಟ್ಟಿಯನ್ನು ಪರಿಶೀಲಿಸಿ!
ಇನ್ನಷ್ಟು ಯಶಸ್ವಿ Snap ಗಳನ್ನು ಸೃಷ್ಟಿಸಲು ಈ ಟ್ಯಾಬ್ ಬಳಸಿ.
Snapchat ನಲ್ಲಿ ನಿಮ್ಮ ಧ್ವನಿಗಳನ್ನು ಪಡೆಯಿರಿ
ನಮ್ಮ ಲೈಬ್ರರಿಗೆ ತಮ್ಮದೇ ಅಸಲಿ ಹಾಡುಗಳನ್ನು ಸೇರಿಸಲು ನಾವು ಕ್ರಿಯೇಟರ್‌ಗಳಿಗೆ ಪ್ರೋತ್ಸಾಹಿಸುತ್ತೇವೆ. ಇದನ್ನು ಮಾಡಲು ಎರಡು ಪ್ರಾಥಮಿಕ ವಿಧಾನಗಳಿವೆ:
  • ಸಹಿ ಮಾಡಿರುವ ಕಲಾವಿದರು ನಿಮ್ಮ ರೆಕಾರ್ಡ್ ಲೇಬಲ್‌ನೊಂದಿಗೆ ಕೆಲಸ ಮಾಡಬಹುದು
  • ಸ್ವತಂತ್ರ ಕಲಾವಿದರು ಅಸಲಿ ಸಂಗೀತವನ್ನು ಸೃಷ್ಟಿಸಲು Voisey ಆ್ಯಪ್ ಬಳಸಬಹುದು ಅಥವಾ ತಮ್ಮ ಸಂಗೀತವನ್ನು ವಿತರಣೆ ಮಾಡಲು Snap ಪಾಲುದಾರ DistroKid ಅನ್ನು ಬಳಸಬಹುದು.
ನಿಮ್ಮ Snap ಗಳಲ್ಲಿನ ಆಡಿಯೋವನ್ನು ಪ್ರಚಾರ ಮಾಡಲು ಟ್ರೆಂಡಿಂಗ್ #ಟಾಪಿಕ್‌ಗಳನ್ನು ಬಳಸಿಕೊಂಡು ನಿಮ್ಮ ಕಥೆಗೆ ಮತ್ತು ಸ್ಪಾಟ್‌ಲೈಟ್‌ಗೆ ನಿಯಮಿತವಾಗಿ Snap ಗಳನ್ನು ಪೋಸ್ಟ್ ಮಾಡಿ.