Snap ನ ಎಲಿಮೆಂಟ್‌ಗಳು
Snap ಅಂದರೇನು?
Snap ಅಂದರೆ Snapchat ನಲ್ಲಿ ನೀವು ತೆಗೆದುಕೊಳ್ಳುವ ಒಂದು ಫೋಟೋ ಅಥವಾ ವೀಡಿಯೊ ಆಗಿದೆ. ಫೋಟೋ ತೆಗೆದುಕೊಳ್ಳಲು, ಕ್ಯಾಮೆರಾ ಸ್ಕ್ರೀನ್‌ನಿಂದ ಕ್ಯಾಪ್ಚರ್ ಬಟನ್ ಅನ್ನು ಟ್ಯಾಪ್ ಮಾಡಿ ಅಥವಾ ವೀಡಿಯೊ ರೆಕಾರ್ಡ್ ಮಾಡಲು ಒತ್ತಿ ಮತ್ತು ಹಿಡಿದಿರಿ.
ನಮ್ಮ AR ಲೆನ್ಸ್‌ಗಳು ಮತ್ತು ಇತರ ಕ್ರಿಯೇಟಿವ್ ಟೂಲ್‌ಗಳ ಲೈಬ್ರರಿಯನ್ನು ಪ್ರಯತ್ನಿಸಿ, ನಂತರ ನಿಮ್ಮ Snapsterpiece ಅನ್ನು ಸ್ನೇಹಿತನಿಗೆ ಕಳುಹಿಸಿ—ಅಥವಾ ಅದನ್ನು ಸ್ಪಾಟ್‌ಲೈಟ್‌ಗೆ ಸಲ್ಲಿಸಿ.
ನಿಮ್ಮ ಸಂಪೂರ್ಣ ಕಥೆ
Snap ಗಳು ನಿಮ್ಮ ವ್ಯಕ್ತಿತ್ವದ ಪೂರ್ಣ ಶ್ರೇಣಿಯನ್ನು ತೋರಿಸಲು ಅವಕಾಶ ಕಲ್ಪಿಸುತ್ತವೆ. ನೈಜತೆ ಅತಿಮುಖ್ಯ, ಆದ್ದರಿಂದ ನಿಮ್ಮ ಅತ್ಯಂತ ಆಸಕ್ತಿಕರ, ವಿಚಿತ್ರ ಮತ್ತು ವಿನೋದದ ಮುಖಗಳನ್ನು ಪ್ರದರ್ಶಿಸಿ.
ಉತ್ತಮ ಕಥೆ ಹೇಳುವಿಕೆಗೆ Snapchatter ಗಳು ಮನ್ನಣೆ ನೀಡುತ್ತಾರೆ. ನೀವು ಒಂದು Snap ಸೃಷ್ಟಿಸಿದಾಗ, ನಿಮ್ಮ ಆವರಣವನ್ನು ಮುಂಚಿತವಾಗಿ ಸ್ಥಾಪಿಸಿ ಮತ್ತು ಆರಂಭ, ಮಧ್ಯಂತರ ಮತ್ತು ಕೊನೆಯಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಿ. ಕಾರ್ಯದಲ್ಲಿ ಸರಿಯಾಗಿ ತೊಡಗಿಕೊಳ್ಳಿ ಮತ್ತು ಅಮೂಲ್ಯವಾದುದನ್ನು ಸೃಷ್ಟಿಸಿ. ಮತ್ತು ಸಾಂಸ್ಕೃತಿಕ ಕ್ಷಣಗಳನ್ನು ಪ್ರದರ್ಶಿಸಲು ಹಿಂಜರಿಯಬೇಡಿ.
ಜನರ ಗಮನ ಸೆಳೆಯಲು ಕೆಲವು ಪ್ರಯತ್ನಿಸಿರುವ ಮತ್ತು ನಿಜವಾದ ವಿಧಾನಗಳು: ಪ್ರಖರ ಬಣ್ಣಗಳು, ವಿಶಿಷ್ಟ ದೃಶ್ಯಗಳು ಮತ್ತು ಆಸಕ್ತಿಕರ ಕೋನಗಳು.
ಟೂಲ್‌ಗಳು ಮತ್ತು ವೈಶಿಷ್ಟ್ಯಗಳು
ನಿಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಕಣ್ಸೆಳೆಯುವಂತೆ ಮಾಡುವುದಕ್ಕೆ ಸಹಾಯ ಮಾಡಲು Snapchat ಹಲವಾರು ಕ್ಯಾಮೆರಾ ಮತ್ತು ಎಡಿಟಿಂಗ್ ಟೂಲ್‌ಗಳನ್ನು ಒದಗಿಸುತ್ತದೆ.
ಲೆನ್ಸ್‌ನೊಂದಿಗೆ ನಿಮ್ಮನ್ನು ರೂಪಾಂತರಿಸಿಕೊಳ್ಳಿ ಮತ್ತು ಶೀರ್ಷಿಕೆಗಳು, ಡೂಡಲ್‌ಗಳು ಮತ್ತು ಸ್ಟಿಕ್ಕರ್‌ಗಳಂಥ ಅಂಶಗಳನ್ನು ಸೇರಿಸಿ. ಸ್ಥಳ ಆಧರಿತ ಫಿಲ್ಟರ್‌ಗಳನ್ನು ಅಥವಾ ನಿಮ್ಮ ಮೆಚ್ಚಿನ ಸಂಗೀತವನ್ನೂ ಕೂಡ ಸೇರಿಸಿ. ನಿಮ್ಮ ಸೃಜನಶೀಲತೆಯನ್ನು ಪ್ರದರ್ಶಿಸಲು ಹಲವಾರು ವಿಧಾನಗಳಿವೆ!