ಕ್ಯಾಮೆರಾ ಟೂಲ್‌ಗಳು
ನೀವು ಫೋಟೋಗಳು ಮತ್ತು ವೀಡಿಯೊಗಳನ್ನು ಹೇಗೆ ಕ್ಯಾಪ್ಚರ್ ಮಾಡುತ್ತೀರಿ ಎನ್ನುವುದನ್ನು ಪರಿವರ್ತಿಸಲು ಈ ಟೂಲ್‌ಗಳನ್ನು ಬಳಸಿ.
ಲೆನ್ಸ್‌ಗಳನ್ನು ಕಂಡುಹಿಡಿಯುವುದು
ಕ್ರಿಯೇಟರ್‌ಗಳ ಬಳಕೆಗಾಗಿ ನಾವು ಲೆನ್ಸ್‌ಗಳ ಬೃಹತ್ ಲೈಬ್ರರಿಯನ್ನು ಹೊಂದಿದ್ದೇವೆ. ನೀವು ಆ್ಯಪ್ ತೆರೆದ ತಕ್ಷಣವೇ ಕ್ಯಾಮೆರಾ ಸ್ಕ್ರೀನ್‌ನಿಂದ ಲೆನ್ಸ್‌ಗಳನ್ನು ಅನ್ವೇಷಿಸಿ. ನಿಮ್ಮ ಮೆಚ್ಚಿನ ಲೆನ್ಸ್‌ಗಳು ಹಾಗೂ ಏನು ಟ್ರೆಂಡ್ ಆಗುತ್ತಿದೆ ಎನ್ನುವುದನ್ನು ನೋಡಲು ಕ್ಯಾಪ್ಚರ್ ಬಟನ್‌ನ ಬಲಭಾಗದಲ್ಲಿರುವ ಸ್ಮೈಲಿ ಫೇಸ್ ಐಕಾನ್ ಅನ್ನು ಟ್ಯಾಪ್ ಮಾಡಿ.
ಶಿಫಾರಸು ಮಾಡಿದ, ಟ್ರೆಂಡ್ ಆಗುತ್ತಿರುವ ಮತ್ತು Snapchat ಹಾಗೂ ಸಮುದಾಯ ಸೃಷ್ಟಿಸಿದ ಥೀಮ್ ಮಾಡಿದ ಲೆನ್ಸ್‌ಗಳನ್ನು ನೋಡಲು ಕೆಳಗಿನ ಬಲ ಮೂಲೆಯಲ್ಲಿರುವ 'ಹುಡುಕಿ' ಅನ್ನು ಟ್ಯಾಪ್ ಮಾಡಿ.
ನೀವಾಗಿಯೇ ಲೆನ್ಸ್ ಸೃಷ್ಟಿಸುವುದು ಹೇಗೆ ಎಂದು ತಿಳಿಯಲು ಬಯಸುತ್ತೀರಾ? Lens Studio ಗೆ ಭೇಟಿ ನೀಡಿ. 
ಹ್ಯಾಂಡ್ಸ್‌-ಫ್ರೀ ರೆಕಾರ್ಡಿಂಗ್
ನೋಡಿ, ಕೈಗಳು ಬೇಕಾಗಿಲ್ಲ! ಒಟ್ಟು 60 ಸೆಕೆಂಡುಗಳ ಅವಧಿಗೆ, ಪ್ರತಿಯೊಂದು ಹತ್ತು ಸೆಕೆಂಡುಗಳಷ್ಟು ದೀರ್ಘವಾದ, ಆರು ವೀಡಿಯೊಗಳವರೆಗೆ ರೆಕಾರ್ಡ್ ಮಾಡಿ.
ನಿಮ್ಮ ವೀಡಿಯೊ ರೆಕಾರ್ಡ್ ಮಾಡುವುದನ್ನು ಆರಂಭಿಸಲು ಸ್ಕ್ರೀನ್ ಕೆಳಭಾಗದ ಕ್ಯಾಪ್ಚರ್ ಬಟನ್ ಅನ್ನು ಹಿಡಿದಿರಿ. ಬಟನ್‌ ಮುಂದೆ ಒಂದು ಲಾಕ್ ಐಕಾನ್ ಕಾಣಿಸುತ್ತದೆ. ಹ್ಯಾಂಡ್ಸ್‌-ಫ್ರೀ ಗೆ ಹೋಗಿ, ಎಡಕ್ಕೆ ಸ್ಲೈಡ್ ಮಾಡಿ ಮತ್ತು ಲಾಕ್ ಮಾಡಿ. ನಂತರ ನಿಮ್ಮ ಕೆಲಸ ಮಾಡಿ!
ಅಂದಹಾಗೆ, ಇದು ಸೆಲ್ಫಿ ಮೋಡ್‌ನಲ್ಲೂ ಕಾರ್ಯನಿರ್ವಹಿಸುತ್ತದೆ.
ಕ್ಯಾಮೆರಾ ಟೂಲ್‌ಕಿಟ್
ನಿಮ್ಮ Snap ಗಳನ್ನು ಅದ್ಭುತವಾಗಿಸಲು ಕ್ಯಾಮೆರಾ ಸ್ಕ್ರೀನ್‌ನ ಬಲ-ಭಾಗದಲ್ಲಿರುವ ಟೂಲ್‌ಗಳನ್ನು ಬಳಸಿ.
ಟೈಮ್‌ಲೈನ್. ಹಲವು ಕ್ಷಣಗಳನ್ನು ಒಂದು ವೀಡಿಯೊನಲ್ಲಿ ಪೋಣಿಸಿ.
ಧ್ವನಿಗಳು. ನಮ್ಮ ಪ್ಲೇಲಿಸ್ಟ್‌ನಿಂದ ಅಥವಾ ನಮ್ಮ ಪರವಾನಗಿಯಿರುವ ಸಂಗೀತ ಲೈಬ್ರರಿಯಿಂದ ಶಿಫಾರಸು ಮಾಡಲಾದ ಹಾಡನ್ನು ಆರಿಸಿಕೊಳ್ಳಿ ಮತ್ತು ನಿಮ್ಮದನ್ನೇ ಸೃಷ್ಷಿಸಿ.
ಬಹು Snap. ನಿಮ್ಮ ರೆಕಾರ್ಡಿಂಗ್‌ನ ಉದ್ದವನ್ನು ನಿಗದಿಪಡಿಸಿ. ಕ್ಯಾಪ್ಚರ್ ಬಟನ್ ಹಿಡಿದಿಡುವ ಮತ್ತು ಲಾಕ್ ಮಾಡಲು ಎಡಕ್ಕೆ ಸ್ಲೈಡ್ ಮಾಡುವ ಮೂಲಕ ಹ್ಯಾಂಡ್ಸ್-ಫ್ರೀ ಆಗಿ.
ಟೈಮರ್. ಕೌಂಟ್‌ಡೌನ್ ಆರಂಭಿಸಿ ಇದರಿಂದ ನೀವು ಒಂದು ಭಂಗಿ ನೀಡಬಹುದು.
ಫೋಕಸ್. ಡೆಪ್ತ್-ಆಫ್-ಫೀಲ್ಡ್ ಎಫೆಕ್ಟ್‌ನೊಂದಿಗೆ ಮುಖದ ಮೇಲೆ ಫೋಕಸ್ ಮಾಡಿ.
3D. ನಿಮ್ಮ ಸೆಲ್ಫಿಗೆ 3D ಪರಿಣಾಮಗಳನ್ನು ಸೇರಿಸಿ. ದೃಷ್ಟಿಕೋನವನ್ನು ಬದಲಾಯಿಸಲು ನಿಮ್ಮ ಫೋನ್ ಅನ್ನು ಸರಿಸಿ.
ಗ್ರಿಡ್. ನಿಮ್ಮ ಶಾಟ್‌ಗಳನ್ನು ಸಾಲುಗೂಡಿಸಿ ಇದರಿಂದ ನೀವು ಫೋಕಸ್ ಮಾಡಬಹುದು, snap ಮಾಡಬಹುದು ಮತ್ತು ಕಳುಹಿಸಬಹುದು.
ಟೈಮ್‌ಲೈನ್ ಕ್ಯಾಪ್ಚರ್
ಇದು ಕ್ಯಾಮೆರಾ ಟೂಲ್‌ಕಿಟ್‌ನಲ್ಲಿ ನಮ್ಮ ಅತ್ಯಂತ ಜನಪ್ರಿಯ ವೈಶಿಷ್ಟ್ಯಗಳಲ್ಲಿ ಒಂದಾಗಿದೆ. ಹಲವು ಕ್ಲಿಪ್‌ಗಳನ್ನು ರೆಕಾರ್ಡ್ ಮಾಡಿ, ಟ್ರಿಮ್ ಮಾಡಿ ಮತ್ತು ಅವುಗಳನ್ನು ವಿಭಜಿಸಿ ಮತ್ತು ನಿಮ್ಮ ವೀಡಿಯೊಗೆ ಸಮಯ ನಿಗದಿಪಡಿಸಿದ ಶೀರ್ಷಿಕೆಗಳನ್ನು ಸೇರಿಸಿ. ನೀವು ಧ್ವನಿಗಳನ್ನು ಕೂಡ ಸೇರಿಸಬಹುದು.