Snap ನಲ್ಲಿ ಸೃಷ್ಟಿಸಿ

ನಿಮ್ಮ ಕಥೆಗಳು ಮತ್ತು ಸ್ಪಾಟ್‌ಲೈಟ್‌ಗಳನ್ನು ಹೇಗೆ ಉತ್ತಮವಾಗಿಸುವುದು ಎಂದು ತಿಳಿದುಕೊಳ್ಳಿ!

ಕಂಟೆಂಟ್ ಅತ್ಯುತ್ತಮ ಅಭ್ಯಾಸಗಲು · ಕಥೆಗಳು

ನಿಮ್ಮ ಕಂಟೆಂಟ್ ಹೇಗೆ ಕಾರ್ಯಕ್ಷಮತೆ ತೋರುತ್ತದೆ ಮತ್ತು ಪ್ರತಿ ದಿನ ಅದು ಎಷ್ಟು Snapchatter ಗಳನ್ನು ತಲುಪುತ್ತದೆ ಎನ್ನುವುದಕ್ಕೆ ಹಲವಾರು ಅಂಶಗಳು ಕಾರಣವಾಗುತ್ತವೆ. ನಿಮ್ಮ ಕಥೆಯಲ್ಲಿ ನಿಮ್ಮ ತೊಡಗಿಕೊಳ್ಳುವಿಕೆಯನ್ನು ಹೆಚ್ಚಿಸಲು ಮತ್ತು ಅದು ಹೆಚ್ಚು Snapchatter ಗಳಿಗೆ ತಲುಪುವಂತೆ ಮಾಡುವುದಕ್ಕೆ ಸಹಾಯ ಮಾಡಲು, ನೀವು ಈ ಅತ್ಯುತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವಂತೆ ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ.

ಪ್ರಬಲವಾಗಿ ಆರಂಭಿಸಿ

ನಿಮ್ಮ ಪ್ರೇಕ್ಷಕರನ್ನು ಹಿಡಿದು ಕೂರಿಸುವ ಪ್ರಬಲ ಮತ್ತು ಸಮ್ಮೋಹಕ ಗಾಳದೊಂದಿಗೆ ಪ್ರತಿ ದಿನ ನಿಮ್ಮ ಕಥೆಯನ್ನು ತೆರೆಯಿರಿ. ನೀವು ಸಂಗೀತ ಕಚೇರಿಗೆ ಹೋಗುತ್ತಿರಬಹುದು ಅಥವಾ ಮನೆಯಲ್ಲಿ ಶಾಂತವಾಗಿ ಸಮಯ ಕಳೆಯುತ್ತಿರಬಹುದು - ನಿಮ್ಮ ಪ್ರೇಕ್ಷಕರು ಏನನ್ನು ನಿರೀಕ್ಷಿಸಬಹುದು ಎನ್ನುವುದಕ್ಕೆ ವೇದಿಕೆಯನ್ನು ಸಜ್ಜಾಗಿಸಿ.

ಒಂದು ಕಥಾಹಂದರ ಸೃಷ್ಟಿಸಿ

ಕೊನೆಯ ತನಕ Snapchatter ಗಳು ಕುತೂಹಲದಿಂದ ಉಳಿಯಲು ಪ್ರೋತ್ಸಾಹಿಸುವ ಬಲವಾದ ಕಥಾಹಂದರ ಇದೆಯೇ. ಪರಿಸ್ಥಿತಿಗಳು, ಪಾತ್ರಗಳು ಮತ್ತು ಆರಂಭ, ಮಧ್ಯಂತರ ಹಾಗೂ ಅಂತ್ಯಕ್ಕೆ ಸಂಬಂಧಿಸಿದ ಸ್ಪಷ್ಟ ನಿರೂಪಣೆಯನ್ನು ಹೊಂದಿರುವ ಉದ್ದನೆಯ ಕಥೆಗಳನ್ನು ಹೇಳಿ.

ಶೀರ್ಷಿಕೆಗಳನ್ನು ಬಳಸಿ

ಪ್ರಮುಖ ಸನ್ನಿವೇಶವನ್ನು ಒದಗಿಸಲು ನಿಮ್ಮ ಕಥೆಯಾದ್ಯಂತ ಶೀರ್ಷಿಕೆಗಳನ್ನು ಬಳಸುವ ಮೂಲಕ ಧ್ವನಿ ಆಫ್ ಮಾಡಿಕೊಂಡು ವೀಕ್ಷಿಸುವವರ ಮನಮೆಚ್ಚಿಸಿ. ಇದು ಪ್ರೇಕ್ಷಕರನ್ನು ಉಳಿಸಿಕೊಳ್ಳುವುದನ್ನು ಹೆಚ್ಚಿಸಲು ಸಹ ನೆರವಾಗಬಹುದು.

ಕಥೆ ಪ್ರತ್ಯುತ್ತರಗಳನ್ನು ಏಕೀಕರಿಸಿ

ಕಥೆ ಪ್ರತ್ಯುತ್ತರಗಳನ್ನು ನಿಮ್ಮ ಕಥೆಗಳಲ್ಲಿ ಏಕೀಕರಿಸುವ ಮೂಲಕ ನಿಮ್ಮ ಪ್ರೇಕ್ಷಕರೊಂದಿಗೆ ಸಮುದಾಯ ಮತ್ತು ಚರ್ಚೆಯನ್ನು ನಿರ್ಮಿಸಿ. ನಿಮ್ಮ ಕಥೆಗಳನ್ನು ಇನ್ನಷ್ಟು ಪ್ರತಿಕ್ರಿಯಾತ್ಮಕವಾಗಿಸುವುದಕ್ಕೆ ಕ್ವೋಟ್ ಮಾಡಿದ ಕಥೆ ಪ್ರತ್ಯುತ್ತರಗಳನ್ನು ಬಳಸುವುದು ಅದ್ಭುತ ವಿಧಾನವಾಗಿದೆ. ನಿಮ್ಮ ಕಥೆಗಳಲ್ಲಿ ತಮ್ಮನ್ನು ಕಾಣುವುದಕ್ಕೆ Snapchatter ಗಳು ಕೂಡ ಇಷ್ಟಪಡುತ್ತಾರೆ!

ಮಾರ್ಗಸೂಚಿಗೆ ಅನುಸರಣೆಯಲ್ಲಿ ಉಳಿಯಿರಿ

ನಿಮ್ಮ ಕಥೆಯಲ್ಲಿ ಏನನ್ನು ನಿರೀಕ್ಷಿಸಬಹುದು ಎನ್ನುವುದರ ಸನ್ನಿವೇಶವನ್ನು ಒದಗಿಸುವ ಮಾರ್ಗಸೂಚಿಗೆ ಅನುಸರಣೆ ಹೊಂದಿರುವ ಶೀರ್ಷಿಕೆಯನ್ನು ನೀವು ಪೋಸ್ಟ್ ಮಾಡುವುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ ಶೀರ್ಷಿಕೆಯು ದಾರಿತಪ್ಪಿಸುವಂತಿರದೆ ಮತ್ತು ನಿಮ್ಮ ಕಥೆಯನ್ನು ಟ್ಯಾಪ್ ಮಾಡಿದಾಗ Snapchatter ಗಳು ಏನನ್ನ ನಿರೀಕ್ಷಿಸಬಹುದು ಎನ್ನುವುದನ್ನು ನಿಖರವಾಗಿ ಪ್ರತಿನಿಧಿಸುವುದು ಮುಖ್ಯವಾಗಿದೆ.

ಕಂಟೆಂಟ್ ಅತ್ಯುತ್ತಮ ಅಭ್ಯಾಸಗಳು · ಸ್ಪಾಟ್‌ಲೈಟ್

ನಮ್ಮ ಕೆಲವು ಸ್ಪಾಟ್‌ಲೈಟ್ ಸಲಹೆಗಳು ಮತ್ತು ತಂತ್ರಗಳನ್ನು ಅನುಸರಿಸುವ ಮೂಲಕ ನಿಮ್ಮ ಅತ್ಯಂತ ಮನರಂಜಿಸುವ Snap ಗಳ ಮೇಲೆ ಬೆಳಕು ಚೆಲ್ಲಿ!

ನಮ್ಮ ಸಂಪೂರ್ಣ ಸ್ಪಾಟ್‌ಲೈಟ್ ಮಾರ್ಗಸೂಚಿಗಳನ್ನು ನೋಡಿ ಮತ್ತು ಇನ್ನೊಂದಿಷ್ಟು ಸ್ಪಾಟ್‌ಲೈಟ್ ಸಲಹೆಗಳು, ತಂತ್ರಗಳು ಮತ್ತು ಕ್ರಿಯೇಟಿವ್ ಐಡಿಯಾಗಳನ್ನು ಪರಿಶೀಲಿಸಿ.

ಲಂಬ ವೀಡಿಯೊ ಪೋಸ್ಟ್ ಮಾಡಿ

Snap ಗಳು ಧ್ವನಿಯೊಂದಿಗೆ ಲಂಬ ವೀಡಿಯೊ ಆಗಿರಬೇಕು.  ಸ್ಥಿರ-ಚಿತ್ರದ ಫೋಟೋಗಳು, ಅಡ್ಡಲಾದ Snap ಗಳು, ಅಸ್ಪಷ್ಟ Snap ಗಳು ಮತ್ತು ಕೇವಲ-ಪಠ್ಯವಿರುವ Snap ಗಳು ಸ್ಪಾಟ್‌ಲೈಟ್‌ನಲ್ಲಿ ಪ್ರದರ್ಶಿತವಾಗುವುದಿಲ್ಲ.

ಕ್ರಿಯೇಟಿವ್ ಆಗಿರಿ

ನಿಮ್ಮ ಕ್ರಿಯೇಟಿವಿಟಿಯನ್ನು ಹೈಲೈಟ್ ಮಾಡಿ ಮತ್ತು ಪ್ರತಿ ಸೆಕೆಂಡ್ ಅನ್ನು ಮಹತ್ವದ್ದಾಗಿಸಿ. ನಿಮ್ಮ Snap ಗಳು ವಿಭಿನ್ನವಾಗಿ ಕಾಣಿಸುವಂತೆ ಮಾಡಲು ಶೀರ್ಷಿಕೆಗಳು, ಧ್ವನಿಗಳು, ಲೆನ್ಸ್‌ಗಳು ಅಥವಾ GIF ಗಳಂತಹ ಕ್ರಿಯೇಟಿವ್ ಟೂಲ್‌ಗಳನ್ನು ಬಳಸಿ.

ಒಂದು ವಿಷಯ ಸೇರಿಸಿ

ಕಳುಹಿಸಲು ಪುಟದಲ್ಲಿ #topic ಸೇರಿಸಿ ಇದರಿಂದ ಇತರರು ಸೇರಬಹುದು ಅಥವಾ ನಿಮ್ಮಂತಹ ಹೆಚ್ಚಿನ Snap ಗಳನ್ನು ಅನ್ವೇಷಿಸಬಹುದು.

ಡೈರೆಕ್ಟರ್ ಮೋಡ್

ಡೈರೆಕ್ಟರ್ ಮೋಡ್ ಬಳಸಿಕೊಂಡು ನಿಮ್ಮ ವೀಡಿಯೊ Snap ಗಳನ್ನು ಆಕರ್ಷಕವಾಗಿಸಿ. ಸ್ಪಾಟ್‌ಲೈಟ್‌, ಕಥೆಗಳು ಅಥವಾ ನಿಮ್ಮ Snap ಗಳಿಗಾಗಿರಲಿ, ಡೈರೆಕ್ಟರ್‌ ಮೋಡ್ ಜೊತೆಗೆ ನೀವು ಹೆಚ್ಚು ಜಟಿಲವಾದ ವೀಡಿಯೊ ಕಂಟೆಂಟ್ ರಚಿಸಲು ನಿಮಗೆ ಸಹಾಯ ಮಾಡುವ ಕ್ಯಾಮರಾ ವೈಶಿಷ್ಟ್ಯಗಳ ಗುಚ್ಛವನ್ನು ನೀವು ಪ್ರವೇಶಿಸಬಹುದು! ಡೈರೆಕ್ಟರ್ ಮೋಡ್ ಪ್ರವೇಶಿಸುವುದು ಹೇಗೆ ಎಂದು ತಿಳಿದುಕೊಳ್ಳಿ ಮತ್ತು ವೀಡಿಯೊವನ್ನು ಇಲ್ಲಿ ಪರಿಶೀಲಿಸಿ.

ಕ್ರಿಯೇಟಿವ್ ಟೂಲ್‌ಗಳು

ನೀವು ಒಂದು Snap ಸೃಷ್ಟಿಸಿದ ಬಳಿಕ, ಕ್ರಿಯೇಟಿವ್ ಟೂಲ್‌ಗಳೊಂದಿಗೆ ನೀವು ಅದನ್ನು ನೈಜ ಉತ್ಕೃಷ್ಟ ಕೃತಿಯಾಗಿ ಪರಿವರ್ತಿಸಬಹುದು. ನಿಮ್ಮ Snap ಗಳಿಗೆ ಪಠ್ಯ, ಸ್ಟಿಕ್ಕರ್‌ಗಳು ಮತ್ತು ಸಂಗೀತ ಸೇರಿಸುವುದು ಹೇಗೆ, ಅವುಗಳ ಮೇಲೆ ಡೂಡಲ್ ಮಾಡುವುದು ಹೇಗೆ, ವೀಡಿಯೊ ಮತ್ತು ಆಡಿಯೊ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು ಹೇಗೆ ಎನ್ನುವುದನ್ನು ಮತ್ತು ಇನ್ನೂ ಹಲವು ಅಂಶಗಳನ್ನು ತಿಳಿದುಕೊಳ್ಳಿ!

UI image that shows Snap Sounds

Snap ಧ್ವನಿಗಳು

ನಿಮ್ಮನ್ನು ಅಭಿವ್ಯಕ್ತಪಡಿಸಲು, ಸ್ಫೂರ್ತಿಯನ್ನು ಕಂಡುಕೊಳ್ಳಲು ಅಥವಾ ನೀವು ಹಿಂದೆಂದೂ ಕೇಳಿಸಿಕೊಂಡಿರದ ಹೊಸ ಕಲಾವಿದರನ್ನು ಕಂಡುಹಿಡಿಯಲು Snap ಧ್ವನಿಗಳನ್ನು ಬಳಸಿ. 

ಧ್ವನಿಗಳು (ಕ್ಯಾಮೆರಾ ಸ್ಕ್ರೀನ್‌ನಲ್ಲಿನ 🎵 ಐಕಾನ್) ಪರವಾನಗಿಯಿರುವ ಹಾಡಿನ ಕ್ಲಿಪ್‌ಗಳು, ಟೀವಿ ಮತ್ತು ಸಿನಿಮಾಗಳಿಂದ ತುಣುಕುಗಳು ಮತ್ತು ತಮ್ಮದೇ ಸ್ವಂತ ಅಸಲಿ ಆಡಿಯೋವನ್ನು ತಮ್ಮ Snap ಗಳು ಮತ್ತು ಕಥೆಗಳಿಗೆ ಸೇರಿಸಲು Snapchatter ಗಳಿಗೆ ಅವಕಾಶ ಕಲ್ಪಿಸುತ್ತದೆ. Snap ಧ್ವನಿಗಳಲ್ಲಿ ನಿಮ್ಮ ಹಾಡುಗಳನ್ನು ಪಡೆಯಲು, ನೀವು Distrokid ಅಥವಾ CD Baby ಯಂತಹ ಸ್ವತಂತ್ರ ವಿತರಕರ ಮೂಲಕ ಹೋಗಬಹುದು ಅಥವಾ Snap ಗೆ ನಿಮ್ಮ ಕೆಟಲಾಗ್ ಅನ್ನು ಅವರು ತಲುಪಿಸುತ್ತಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಲೇಬಲ್ ಜೊತೆ ಕೆಲಸ ಮಾಡಬಹುದು.

ನಿಮ್ಮ Snap ಗಳಲ್ಲಿ ಪರವಾನಗಿ ಮಾಡಿಕೊಂಡಿರುವ ಸಂಗೀತ ಮತ್ತು ಟೀವಿ ಅಥವಾ ಸಿನಿಮಾದ ಕಂಟೆಂಟ್ ಬಳಸುವಾಗ ಈ ಸೂಚನೆಗಳನ್ನು ಪರಿಶೀಲಿಸಿ ಮತ್ತು ನಮ್ಮ Snapchat ನಲ್ಲಿ ಧ್ವನಿಗಳು ಮಾರ್ಗಸೂಚಿಗಳನ್ನು ಅನುಸರಿಸಿ.

ನಿಮ್ಮ ಸಾರ್ವಜನಿಕ ಪ್ರೊಫೈಲ್‌ಗೆ ಕಥೆಗಳು ಮತ್ತು ಸ್ಪಾಟ್‌ಲೈಟ್‌ಗಳನ್ನು ಉಳಿಸಿ

ನಿಮ್ಮ ಸಾರ್ವಜನಿಕ ಪ್ರೊಫೈಲ್‌ನಲ್ಲೇ ನಿಮ್ಮ ಮೆಚ್ಚಿನ ಸಾರ್ವಜನಿಕ ಕಥೆಗಳು ಮತ್ತು ಸ್ಪಾಟ್‌ಲೈಟ್‌ಗಳ ಸಂಗ್ರಹವನ್ನು ನೀವು ಪ್ರದರ್ಶಿಸಬಹುದು – ಶಾಶ್ವತವಾಗಿ! ಕಥೆಗಳನ್ನು ಉಳಿಸುವುದು ಹೇಗೆ ಎಂದು ತಿಳಿದುಕೊಳ್ಳಿ. ಸ್ಪಾಟ್‌ಲೈಟ್‌ಗಾಗಿ, ​​'ಸಾರ್ವಜನಿಕ ಪ್ರೊಫೈಲ್‌ನಲ್ಲಿ Snap ತೋರಿಸಿ' ಆಯ್ಕೆಯನ್ನು ಡೀಫಾಲ್ಟ್ ಆಗಿ ಟಾಗಲ್ ಆನ್ ಮಾಡಲಾಗಿದೆ, ಆದರೆ ಅದನ್ನು ನೀವು ಟಾಗಲ್ ಆಫ್ ಮಾಡಲು ಆಯ್ಕೆ ಮಾಡಬಹುದು.

Build & Engage your Audience