ಸ್ಪಾಟ್‌ಲೈಟ್‌ನಲ್ಲಿ ಮಿಂಚಿ

ಸ್ಪಾಟ್‌ಲೈಟ್ ಎಂದರೇನು?

ಸ್ಪಾಟ್‌ಲೈಟ್ ಅನ್ನುವುದು ಸಮುದಾಯದಿಂದ ಸಂಚಾಲಿತವಾದ ಬೃಹತ್ ಪ್ರೇಕ್ಷಕರನ್ನು ತಲುಪುವ ಶಕ್ತಿಯುತ ಅವಕಾಶವಾಗಿದೆ.
ಸ್ಪಾಟ್‌ಲೈಟ್‌ನೊಳಗೆ ಪ್ರತಿ ಬಳಕೆದಾರನ ಅನುಭವವು ವೈಯಕ್ತಿಕ ಮತ್ತು ಅವರಿಗೆ ವಿಶಿಷ್ಟವಾದುದಾಗಿದೆ.

ಉನ್ನತ ಗುಣಮಟ್ಟದ ರೀಚ್

ಬಳಕೆದಾರರಿಗೆ ಪ್ರಸ್ತುತವಾಗಿರುವ ವಿಷಯವನ್ನು ನಾವು ಹಂಚಿಕೊಳ್ಳುತ್ತೇವೆ. ಸ್ಪಾಟ್‌ಲೈಟ್‌ನ ರೀಚ್ ಗಮನಾರ್ಹವಾಗಿದೆ ಆದರೆ ಇನ್ನಷ್ಟು ಮುಖ್ಯವಾಗಿ, ಆ ರೀಚ್‌ನ ಗುಣಮಟ್ಟವು ನೀವು ನಿಷ್ಠ ಪ್ರೇಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದೀರಿ ಎನ್ನುವುದನ್ನು ಸೂಚಿಸುತ್ತದೆ.

ನಿಮ್ಮ ವಿಶಿಷ್ಟ ಧ್ವನಿಯನ್ನು ಹಂಚಿಕೊಳ್ಳಿ

ಸ್ಪಾಟ್‌ಲೈಟ್ ಅನ್ನುವುದು ನಿಮ್ಮ ಬ್ರ್ಯಾಂಡ್‌ನ ಇನ್ನಷ್ಟು ವೈಯಕ್ತಿಕವಾದ ಆಯಾಮವನ್ನು ತೋರಿಸಲು ನೀವು ಹೋಗಬಹುದಾದ ಸ್ಥಳವಾಗಿದೆ. ಇನ್ನಷ್ಟು ಹೆಚ್ಚು ನೈಜ. ಇನ್ನಷ್ಟು ಹೆಚ್ಚು ಸ್ವಯಂಪ್ರೇರಿತ. ಇನ್ನಷ್ಟು ಹೆಚ್ಚು ಪ್ರವೇಶಾರ್ಹ. ನಿಮ್ಮ ವಿಶಿಷ್ಟ ಅನಿಸಿಕೆಯನ್ನು ಹೈಲೈಟ್ ಮಾಡಲು Snapchat ಕ್ಯಾಮೆರಾ ಮತ್ತು ಎಡಿಟಿಂಗ್ ಪರಿಕರಗಳನ್ನು ಬಳಸಿ.

Yum!

ವಿಷಯದ ಮೂಲಕ ಸಂಪರ್ಕಿಸಿ

ಗಮನ ಸೆಳೆಯಲು ಮತ್ತು ನೀವು ಬೇರೇನನ್ನು ಸೃಷ್ಟಿಸುತ್ತೀರಿ ಎಂದು ನೋಡಲು ಕಾತುರರಾಗಿರುವ ನಿಷ್ಠ ಸಬ್‌ಸ್ಕ್ರೈಬರ್‌ಗಳನ್ನು ಹೆಚ್ಚಿಸಿಕೊಳ್ಳಲು ಸ್ಪಾಟ್‌ಲೈಟ್ ವಿಷಯವು ಒಂದು ಅತ್ಯುತ್ತಮ ವಿಧಾನವಾಗಿದೆ.

ಸೃಷ್ಟಿಸಿ, ಹಂಚಿಕೊಳ್ಳಿ ಮತ್ತು ಟ್ರ್ಯಾಕ್ ಮಾಡಿ

ಒಂದು ಸಾರ್ವಜನಿಕ ಪ್ರೊಫೈಲ್ ರಚಿಸಿ

ಕ್ಯಾಮೆರಾ ಪರದೆಯ ಮೇಲ್ಭಾಗದ ಎಡ ಮೂಲೆಯಲ್ಲಿ ನಿಮ್ಮ ಅವತಾರ್ ಟ್ಯಾಪ್ ಮಾಡುವ ಮೂಲಕ ಸಾರ್ವಜನಿಕ ಪ್ರೊಫೈಲ್ ಸ್ಥಾಪಿಸಿ. ಅದರ ರಚನೆ ಪೂರ್ಣಗೊಳಿಸಲು ಸುಳಿವುಗಳನ್ನು ಅನುಸರಿಸಿ.

ಅದ್ಭುತವಾದ ವಿಷಯವನ್ನು ಸೃಷ್ಟಿಸಿ

ಸ್ವಯಂಪ್ರೇರಿತ ಕ್ಷಣವನ್ನು ಸೆರೆಹಿಡಿಯುವುದಾಗಿರಬಹುದು, ಪ್ರಸ್ತುತ ಟ್ರೆಂಡ್ ಅನುಸರಿಸುವುದಾಗಿರಬಹುದು ಅಥವಾ ತ್ವರಿತ DIY ಪ್ರದರ್ಶಿಸುವುದಾಗಿರಬಹುದು, Snapchatter ಗಳ ಗಮನವನ್ನು ಸೆಳೆಯುವುದಕ್ಕಾಗಿ — ಮತ್ತು — ಉಳಿಸಿಕೊಳ್ಳುವುದಕ್ಕಾಗಿ ಈ ಅತ್ಯುತ್ತಮ ಅಭ್ಯಾಸಗಳನ್ನು ಪರಿಗಣಿಸಿ.

Post with Ease image

ಸುಲಭವಾಗಿ ಪೋಸ್ಟ್ ಮಾಡಿ

ನಿಮ್ಮ ಫೋನ್‌ನಿಂದ ನೇರವಾಗಿ ಸ್ಪಾಟ್‌ಲೈಟ್‌ಗೆ ಪೋಸ್ಟ್ ಮಾಡುವ ಮೂಲಕ ನಿಮ್ಮ ನೈಜ ಮತ್ತು ಪ್ರಸ್ತುತವಾದ 5-60 ಸೆಕೆಂಡ್‌ನ ವೀಡಿಯೊಗಳನ್ನು ಹಂಚಿಕೊಳ್ಳಿ.

shows growth stylised graph

ತೊಡಗಿಕೊಳ್ಳುವಿಕೆ ಮತ್ತು ಬೆಳವಣಿಗೆಯನ್ನು ಟ್ರ್ಯಾಕ್ ಮಾಡಿ

ನಿಮ್ಮ ಎಲ್ಲ ಪೋಸ್ಟ್‌ ಮಾಡಿದ ಸ್ಪಾಟ್‌ಲೈಟ್‌ Snap ಗಳು, ವೀಕ್ಷಣೆಗಳು ಮತ್ತು ಲೈಕ್‌ಗಳ ವಿಶ್ಲೇಷಣೆಗಳನ್ನು ಟ್ರ್ಯಾಕ್ ಮಾಡಲು ನಿಮಗೆ ಸಾಧ್ಯವಾಗುತ್ತದೆ.