ಪ್ರೊಫೈಲ್‌ಗಳಲ್ಲಿ 3D Bitmoji

Team Snap ನಿಂದ

ಸೋಮವಾರ, 02 ಆಗಸ್ಟ್ 2021 19:00 ರಂದು

ಪ್ರೊಫೈಲ್‌ಗಳಲ್ಲಿ 3D Bitmoji ಗಳೊಂದಿಗೆ - Snap ಪ್ರೊಫೈಲ್‌ಗಳಿಗೆ Bitmoji ಹೊಸ ನೋಟ ಮತ್ತು ಹೊಸ ಆಯಾಮವನ್ನು ಒದಗಿಸುತ್ತಿದೆ.

ಈಗ, ದೇಹದ ಭಂಗಿಗಳು, ಮುಖದ ಅಭಿವ್ಯಕ್ತಿಗಳು, ಸಂಜ್ಞೆಗಳು ಮತ್ತು ಹಿನ್ನೆಲೆಗಳ 1,200 ಕ್ಕೂ ಹೆಚ್ಚು ಸಂಯೋಜನೆಗಳಿಂದ, ಇನ್ನೂ ಹೆಚ್ಚು ವಿಶಿಷ್ಟ ಮಾದರಿಗಳಲ್ಲಿ Snapchatter ಗಳು ತಮ್ಮನ್ನು ಅಭಿವ್ಯಕ್ತಪಡಿಸಬಹುದು.

ಶಾಂತಿಯ ಸಂಕೇತಗಳು ಮತ್ತು ಪ್ರಾರ್ಥಿಸುವ ಕೈಗಳಿಂದ, ರಮಣೀಯ ಸಮುದ್ರ ಕಿನಾರೆಗಳು ಮತ್ತು ಟ್ರೆಂಡಿ ಪ್ರಾಣಿಗಳ ಚಿತ್ರದ ಹಿನ್ನೆಲೆಗಳವರೆಗೆ- Snapchatter ಗಳು ಈಗ ತಮ್ಮ 3D Bitmoji ಅನ್ನು ತಮ್ಮ ಪ್ರತಿ ಲಹರಿಗೆ ಹೋಲಿಕೆ ಮಾಡಬಹುದು.

Snap ಪ್ರೊಫೈಲ್‌ಗಳು ಮತ್ತು ಫ್ರೆಂಡ್‌ಶಿಪ್‌ ಪ್ರೊಫೈಲ್‌ಗಳಲ್ಲಿ Snapchatter ಗಳು ತಮ್ಮ 3D Bitmoji ಅನ್ನು ಕಾಣುತ್ತಾರೆ ಮತ್ತು ತಮ್ಮ ಕಸ್ಟಮೈಸ್ ಮಾಡಿದ 3D Bitmoji ಅನ್ನು Snapchat ನಲ್ಲಿ ಮತ್ತು ಅದರಾಚೆಗೆ ಸ್ನೇಹಿತರ ಜೊತೆ ಹಂಚಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.

Bitmoji ಸೆಟ್ ಅಪ್ ಅನ್ನು ಇನ್ನೂ ಹೊಂದಿಲ್ಲವೇ? ಪ್ರಾರಂಭಿಸಲು ನಮ್ಮ ಬೆಂಬಲ ಪುಟಕ್ಕೆ ಹೋಗಿ.

ಬ್ಲಾಗ್‌ಗೆ ಹಿಂತಿರುಗಿ