ಸವಾಲನ್ನು ಸ್ವೀಕರಿಸಲಾಗಿದೆ: ಸ್ಪಾಟ್‌ಲೈಟ್‌ನಲ್ಲಿ ಹಣ ಗೆಲ್ಲಲು ಹೊಸ ವಿಧಾನವನ್ನು ಪ್ರಕಟಿಸುತ್ತಿದ್ದೇವೆ
Team Snap ನಿಂದ
ಬುಧವಾರ, 06 ಅಕ್ಟೋಬರ್ 2021 06:00 ರಿಂದ
ಸ್ಪಾಟ್‌ಲೈಟ್ ಅನ್ನುವುದು ಯಾರಾದರೂ ಕೇಂದ್ರಭೂಮಿಕೆಗೆ ಬರುವ ಸ್ಥಳವಾಗಿದೆ ಎನ್ನುವುದನ್ನು ಖಚಿತಪಡಿಸಲು, ನಮ್ಮ ಕಮ್ಯುನಿಟಿಯ ಕ್ರಿಯೇಟಿವಿಟಿಗಾಗಿ ಅವರಿಗೆ ರಿವಾರ್ಡ್ ನೀಡಲು ಮತ್ತು ಕಂಟೆಂಟ್ ಸೃಷ್ಟಿಯನ್ನು ಇನ್ನಷ್ಟು ಪ್ರಜಾಸತ್ತಾತ್ಮಕಗೊಳಿಸಲು ನಾವು ಬದ್ಧರಾಗಿದ್ದೇವೆ.
ರಿವಾರ್ಡ್ ಪಡೆಯಲು ಕ್ರಿಯೇಟರ್‌ಗಳಿಗೆ ಹೊಸ ವಿಧಾನದ ಘೋಷಣೆ: ಸ್ಪಾಟ್‌ಲೈಟ್ ಸವಾಲುಗಳು!
ನಿರ್ದಿಷ್ಟ ಲೆನ್ಸ್‌ಗಳು, ಧ್ವನಿಗಳು ಅಥವಾ #Topics ಬಳಸಿಕೊಂಡು ಅತ್ಯುತ್ತಮ ಕಾರ್ಯಕ್ಷಮತೆಯ ಸ್ಪಾಟ್‌ಲೈಟ್ Snap ಗಳನ್ನು ಸೃಷ್ಟಿಸುವುದಕ್ಕಾಗಿ ನಗದು ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಸ್ಪಾಟ್‌ಲೈಟ್ ಸವಾಲುಗಳು Snapchatter ಗಳಿಗೆ ಒದಗಿಸುತ್ತವೆ. ಅದು ನಿಮ್ಮ ಅತ್ಯುತ್ತಮ ತಂತ್ರದ ಶಾಟ್ ಆಗಿರಬಹುದು ಅಥವಾ ಅತ್ಯಂತ ವಿನೋದದ ಇಂಪ್ರೆಷನ್ ಆಗಿರಬಹುದು, ಇವು ಚಾಂಪಿಯನ್ Snapchatter ಗಳು ತಮ್ಮ ವಿಶಿಷ್ಟ ಧ್ವನಿ, ದೃಷ್ಟಿಕೋನ, ವ್ಯಕ್ತಿತ್ವ ಮತ್ತು ಸೃಜನಶೀಲತೆಯನ್ನು ಹೈಲೈಟ್ ಮಾಡುವಂಥ Snap ಗಳನ್ನು ಸೃಷ್ಟಿಸಲು ಅವರಿಗೆ ಸವಾಲು ಹಾಕುತ್ತವೆ.
ಸ್ಪಾಟ್‌ಲೈಟ್ ಸವಾಲುಗಳು U.S. ನ 16+ ವಯಸ್ಸಿನ Snapchatter ಗಳಿಗಾಗಿ ಮುಂದಿನ ತಿಂಗಳು ಬಿಡುಗಡೆಯಾಗಲಿದ್ದು, ನಂತರದ ತಿಂಗಳುಗಳಲ್ಲಿ ಇನ್ನಷ್ಟು ದೇಶಗಳಲ್ಲಿ ಬಿಡುಗಡೆಯಾಗಲಿದೆ.
ಪ್ರತಿ ಸ್ಪಾಟ್‌ಲೈಟ್ ಸವಾಲಿಗೆ ಲಭ್ಯವಿರುವ ಒಟ್ಟು ಬಹುಮಾನ ಮೊತ್ತದಲ್ಲಿ ಒಂದು ಪಾಲನ್ನು Snapchatter ಗಳು ಗೆಲ್ಲಬಹುದಾಗಿದ್ದು, ಇದು ಸಾಮಾನ್ಯವಾಗಿ $1k ನಿಂದ $25k ವ್ಯಾಪ್ತಿಯಲ್ಲಿರುತ್ತದೆ, ಅದಾಗ್ಯೂ ಒಮ್ಮೊಮ್ಮೆ ನಿರ್ದಿಷ್ಟ ಸವಾಲಿಗೆ ನಾವು ದೊಡ್ಡ ಮೊತ್ತದ ಬಹುಮಾನವನ್ನು ನೀಡಬಹುದು. ಸ್ಪಾಟ್‌ಲೈಟ್ ಸವಾಲಿನಲ್ಲಿ Snapchatter ಗೆಲ್ಲಬಹುದಾದ ಕನಿಷ್ಟ ಬಹುಮಾನ $250 USD ಆಗಿದೆ!
ಪಾಲ್ಗೊಳ್ಳಲು, Snapchat ನೊಳಗೆ ಸ್ಪಾಟ್‌ಲೈಟ್‌ನ ಮೇಲ್ಭಾಗದ ಬಲ ಮೂಲೆಯಲ್ಲಿರುವ ಟ್ರೆಂಡಿಂಗ್ ಚಿಹ್ನೆಯ ಮೂಲಕ ಪ್ರವೇಶಿಸಬಹುದಾದ ಟ್ರೆಂಡಿಂಗ್ ಪುಟಕ್ಕೆ ಭೇಟಿ ನೀಡಿ. ಒಂದು ನಿರ್ದಿಷ್ಟ ಸವಾಲಿನ ಪುಟವನ್ನು ನೋಡಲು ನೀವು ಪಾಲ್ಗೊಳ್ಳಲು ಬಯಸುವ ಸವಾಲನ್ನು ಆಯ್ಕೆ ಮಾಡಿ, ಅದು ಸವಾಲಿನ ವಿವರಣೆಯನ್ನು ಮತ್ತು ಕಮ್ಯುನಿಟಿಯಿಂದ ಸಲ್ಲಿಕೆಯಾದ ನಮೂದುಗಳನ್ನು ಪ್ರದರ್ಶಿಸುತ್ತದೆ. ಲಭ್ಯವಿರುವ ಬಹುಮಾನಗಳು ಮತ್ತು ಸಲ್ಲಿಕೆಯ ಗಡುವಿನ ದಿನಾಂಕದಂಥ ಸವಾಲಿಗೆ ನಿರ್ದಿಷ್ಟವಾದ ಹೆಚ್ಚುವರಿ ವಿವರಗಳಿಗಾಗಿ "ಸವಾಲಿನ ವಿವರಗಳು" ಅನ್ನು ಟ್ಯಾಪ್ ಮಾಡಿ. Snapchat ಕ್ಯಾಮೆರಾವನ್ನು ತೆರೆಯಲು ಕ್ಯಾಮೆರಾ ಐಕಾನ್ ಅನ್ನು ಟ್ಯಾಪ್ ಮಾಡಿ. ಸೃಷ್ಟಿಸಿ ಮತ್ತು ಸಲ್ಲಿಸಿ!
ಪ್ರತಿ ಸವಾಲಿಗೆ, ಅಗ್ರ 50 ಅರ್ಹ, ಸಮಂಜಸ ಮತ್ತು ಅತಿ ಹೆಚ್ಚು ವೀಕ್ಷಣೆ ಪಡೆದ ಸಲ್ಲಿಕೆಗಳನ್ನು ಈ ಮುಂದಿನ ಮಾನದಂಡಗಳಲ್ಲಿ ತೀರ್ಮಾನಿಸಲಾಗುತ್ತದೆ: ಸೃಜನಶೀಲತೆ ಮತ್ತು ಸ್ವಂತಿಕೆ, ವಿನೂತನ ರೀತಿಯಲ್ಲಿ Snap ಕ್ರಿಯೇಟಿವ್ ಟೂಲ್ಸ್ ಬಳಕೆ, ವಿಶಿಷ್ಟ POV ಮತ್ತು ಮನರಂಜನಾತ್ಮಕ ಮೌಲ್ಯ. ಸಾಮಾನ್ಯವಾಗಿ, ಪ್ರತಿ ಸವಾಲುಗಳು 3 ರಿಂದ 5 ವಿಜೇತರನ್ನು ಹೊಂದಿರುತ್ತವೆ, ಅದಾಗ್ಯೂ ಒಮ್ಮೊಮ್ಮೆ ನಾವು ಹೆಚ್ಚು ಅಥವಾ ಕಡಿಮೆ ವಿಜೇತರನ್ನು ಆಯ್ಕೆ ಮಾಡಬಹುದು (16+ ವಯಸ್ಸಿನವರಾಗಿರಬೇಕು ಮತ್ತು 50 U.S./D.C. ಯ ನಿವಾಸಿಗಳಾಗಿರಬೇಕು, ಅಧಿಕೃತ ನಿಯಮಗಳು ಅನ್ವಯಿಸುತ್ತವೆ).
ನೀವು ಏನನ್ನು ಸೃಷ್ಟಿಸಲಿದ್ದೀರಿ ಎನ್ನುವುದನ್ನು ನೋಡಲು ನಾವು ಕಾತರರಾಗಿದ್ದೇವೆ!